RNI NO. KARKAN/2006/27779|Tuesday, January 27, 2026
You are here: Home » breaking news » ಗೋಕಾಕ:ಸರಕಾರಿ ನೌಕರರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ : ಬಿ.ಆರ್.ಮುರಗೋಡ

ಗೋಕಾಕ:ಸರಕಾರಿ ನೌಕರರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ : ಬಿ.ಆರ್.ಮುರಗೋಡ 

ಸರಕಾರಿ ನೌಕರರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ : ಬಿ.ಆರ್.ಮುರಗೋಡ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 16 :

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಗೋಕಾಕ ತಾಲೂಕಾ ಘಟಕದಿಂದ ಕಳೆದ ಮಾರ್ಚ್ ಹಾಗೂ ಜೂನ್ ತಿಂಗಳಿನಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಗಳಲ್ಲಿ  ಶೇಕಡಾ 90 ಕ್ಕಿಂತಲೂ ಹೆಚ್ಚಿನ ಅಂಕ ಗಳಿಸಿದ ತಾಲೂಕಿನ ಸರಕಾರಿ ನೌಕರರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಬಸವರಾಜ ಮುರಗೋಡ ತಿಳಿಸಿದ್ದಾರೆ

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪುರಸ್ಕಾರಕ್ಕೆ  ಸಂಬಂಧಿಸಿದ ವಿದ್ಯಾರ್ಥಿಗಳು ಅಂಕಪಟ್ಟಿಯ ಒಂದು ಝೆರಾಕ್ಸ್ ಪ್ರತಿ , ಒಂದು ಭಾವಚಿತ್ರ ಹಾಗೂ ತಂದೆ ಅಥವಾ ತಾಯಿಯ ಸೇವಾ ಪ್ರಮಾಣ ಪತ್ರದೊಂದಿಗೆ ಇದೇ ತಿಂಗಳು ದಿನಾಂಕ 20 ರೊಳಗಾಗಿ ksgeagokak@gmail.com ಅಥವಾ ಸಂಘದ ಕಾರ್ಯದರ್ಶಿ ಎಸ್ ಕೆ ಕೃಷ್ಣಕುಮಾರ್ (7899112417) ಮಾರ್ಕಂಡೇಯ ನಗರ ಪ್ರಾಥಮಿಕ ಶಾಲೆ ಗೋಕಾಕ ಈ ವಿಳಾಸಕ್ಕೆ  ಅರ್ಜಿ  ಸಲ್ಲಿಸಲು ತಿಳಿಸಲಾಗಿದೆ.  ಸದ್ಯದಲ್ಲಿಯೇ ಸರಕಾರಿ ನೌಕರರಿಗಾಗಿ ತಾಲೂಕಾ , ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದ್ದು ಆಸಕ್ತರು ನಿಗದಿತ ನಮೂನೆಯಲ್ಲಿ  ಈ ಮೇಲಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕೆಂದು ತಾಲೂಕಾಧ್ಯಕ್ಷ ಬಿ.ಆರ್.ಮುರಗೋಡ ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.

Related posts: