ಕಿತ್ತೂರು:ನೂತನ ಕಾಂಗ್ರೆಸ್ ಸರಕಾರ ಬಸವಣ್ಣನವರ ವಿಚಾರಧಾರೆಯಲ್ಲಿದೆ : ಸಚಿವ ಸತೀಶ ಜಾರಕಿಹೊಳಿ

ನೂತನ ಕಾಂಗ್ರೆಸ್ ಸರಕಾರ ಬಸವಣ್ಣನವರ ವಿಚಾರಧಾರೆಯಲ್ಲಿದೆ : ಸಚಿವ ಸತೀಶ ಜಾರಕಿಹೊಳಿ
ಕಿತ್ತೂರ ಮೇ 28 :ನೂತನ ಕಾಂಗ್ರೆಸ್ ಸರಕಾರ ಬಸವಣ್ಣನವರ ವಿಚಾರಧಾರೆಯಲ್ಲಿದ್ದು, ಬಸವಣ್ಣನವರ ವಿಚಾರಗಳನ್ನು ಪ್ರತಿಯೊಬ್ಬರ ಮನೆ,ಮನೆಗೆ ತಲುಪಿಸಲು ನಮ್ಮ ಸರಕಾರ ಬದ್ಧವಾಗಿದೆ ಎಂದು ನೂತನ ಸಚಿವ ಸತೀಶ ಜಾರಕಿಹೊಳಿ ಹೇಳಿದರು
ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಥಮಬಾರಿಗೆ ಜಿಲ್ಲೆಗೆ ಭೇಟಿ ನೀಡಿದ ಸಂಧರ್ಭದಲ್ಲಿ ಕಿತ್ತೂರು ತಾಲೂಕಿನ ಬೈಲೂರು ಮಠಕ್ಕೆ ಬೇಟಿನೀಡಿ ಶ್ರೀ ನಿಜಗುನಾನಂದ ಮಹಾಸ್ವಾಮಿಗಳ ಆರ್ಶೀವಾದ ಪಡೆದು ಮಾತನಾಡಿದ ಅವರು ಸಿದ್ದರಾಮಯ್ಯ ನವರ ಕಾಂಗ್ರೆಸ್ ಸರಕಾರವೇ ಬಸವಣ್ಣನವರ ಭಾವಚಿತ್ರವನ್ನು ಪ್ರತಿ ಕಛೇರಿಯಲ್ಲಿ ಹಾಕಲು ಆದೇಶ ಹೋರಡಿಸಿತ್ತು ಎಂದು ನೆನಪಿಸಿದ ಅವರು ಸ್ವಾಮಿಜಿ ಅವರ ಮತ್ತು ನಮ್ಮ ಹೋರಾಟ ಒಂದೇ ಇದೆ ಹೀಗಾಗಿ ಮೊದಲನೆ ಭೇಟಿ ಬೈಲೂರು ಮಠಕ್ಕೆ ಆಗಬೇಕು ಎಂಬ ಉದ್ದೇಶದಿಂದ ಇಲ್ಲಿಗೆ ಭೇಟಿ ನೀಡಲಾಗಿದ್ದು, ಮುಂದೆ ಸ್ವಾಮೀಜಿ ಅವರೊಂದಿಗೆ ಕೂಡಿ ಗಟ್ಟಿಯಾಗಿ ಸಮಾಜವನ್ನು ಕಟ್ಟವಾಗುವುದು ವಿಶ್ವಗುರು ಬಸವಣ್ಣವರ ವಿಚಾರಗಳನ್ನು ಯಾರು ಗಟ್ಟಿಯಾಗಿ ತಿಳಿದುಕೊಳ್ಳುತ್ತಾರೆ ಅವರನ್ನು ಯಾವುದೇ ಶಕ್ತಿ, ಗಾಳಿ, ಧರ್ಮ, ಯಾವುದೇ ಸರ್ಕಾರ ಎನು ಮಾಡಕ್ಕೆ ಆಗಲ್ಲ. ಹೀಗಾಗಿ ಬಸವಣ್ಣವ ದಾರಿಯಲ್ಲಿ, ಬೆಲೂರು ಮಠದ ನಿಜಗುಣಾನಂದ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಸಾಗಬೇಕೆಂದು ಸಲಹೆ ನೀಡಿದರು.”
ಈ ಸಂದರ್ಭದಲ್ಲಿ ಶಾಸಕರಾದ ಬಾಬಾಸಾಹೇಬ ಪಾಟೀಲ, ವಿಶ್ವಾಸ ವೈದ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.