ಖಾನಾಪುರ:ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಿ : ಬಾಬುರಾವ ದೇಸಾಯಿ
ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಿ : ಬಾಬುರಾವ ದೇಸಾಯಿ
ಖಾನಾಪುರ ಅ 22: ಮಲೆನಾಡಿನ ಸೆರಗಿನಲ್ಲಿರುವ ನಮ್ಮ ಖಾನಾಪುರ ತಾಲೂಕು ಗ್ರಾಮೀಣ ಪ್ರದೇಶವಾಗಿದೆ. ಇಲ್ಲಿ ತಾಲೂಕಿನಾದ್ಯಂತ ಹಲವು ಕ್ರೀಡಾಪಟುಗಳು ಗ್ರಾಮೀಣ ಕ್ರಿಡೆಗಳಾದ ಕಬ್ಬಡ್ಡಿ, ಶರ್ಯತ್ತು ಇನ್ನಿತರೆ ಆಟಗಳನ್ನು ಆಯೋಜಿಸಿ ಮನರಂಜನೆ ಮಾಡುವುದಷ್ಟಲ್ಲದೆ, ಗ್ರಾಮೀಣ ಕ್ರೀಡಾಪಟುಗಳಲ್ಲಿರುವ ಪ್ರತಿಭೆಯನ್ನು ಜನರ ಮುಂದೆ ತರಲು ವೇದಿಕೆಯನ್ನು ಕಲ್ಪಿಸಿಕೊಡುತ್ತಿದ್ದಾರೆಂದು ಬಿಜೆಪಿ ಮುಖಂಡ ಬಾಬುರಾವ ದೇಸಾಯಿ ಹೇಳಿದರು.
ತಾಲೂಕಿನ ಹೊಸಲಿಂಗನಮಠ ಗ್ರಾಮದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಯುವಕ ಮಂಡಳದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಿದ ಹೊನಲು ಬೆಳಕಿನ ಒಪನ್ ಕಬ್ಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಕ್ರೀಡಾಪಟುಗಳನ್ನುದ್ದೇಶಿಸಿ ಮಾತನಾಡಿದರು.
ನಮ್ಮ ನಾಡು ಕ್ರಾಂತಿವಿರ ಸಂಗೋಳ್ಳಿ ರಾಯಣ್ಣನ ನಾಡು, ಇಲ್ಲಿ ಹುಟ್ಟಿದ ಎಲ್ಲ ಯುವಕರು ರಾಯಣ್ಣನ ಹಾಗೇ ಘರ್ಜಿಸಬೇಕು. ಇಂದಿನ ತಂತ್ರಜ್ನಾನದ ಜಗತ್ತಿನಲ್ಲಿ ಗ್ರಾಮೀಣ ಭಾಗದ ಕ್ರೀಡಾಪಟುಗಳು ದುಶ್ಚಟಕ್ಕೆ ಬಲಿಯಾಗಿ ಗ್ರಾಮೀಣ ಕ್ರೀಡೆಗಳನ್ನೆ ಮರೆಯುತ್ತಿದ್ದಾರೆ. ಆದ್ದರಿಂದ ಗ್ರಾಮೀಣ ಕ್ರೀಡೆಗಳನ್ನು ನಶೀಸದ ಹಾಗೇ ನೋಡಿಕೊಳ್ಳುವುದೆ ಯುವಕರು ಜವಾಬ್ದಾರಿಯಾಗಿದೆ ಕಬ್ಬಡ್ಡಿ ಇದು ದೇಸಾಯಿ ಕ್ರೀಡೆಯಾಗಿದ್ದು, ಈ ಆಟ ಆಡುವುದರಿಂದ ಶಾರೀರಿಕವಾಗಿ ಸದೃಡವಾಗಿರಬಹು ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಡಾ-ಕೆ.ಬಿ.ಹಿರೇಮಠ, ಬಿಜೆಪಿ ಮುಖಂಡ ಶಿವಾಜಿ ಡೊಳ್ಳಿನ, ಲಿಂಗರಾಜ ಮೂಲಿಮನಿ, ರಾಜು ರಪಾಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಗಣ್ಯಮಾನ್ಯರಿಗೆ ಶಾಲು ಹೊದಿಸಿ ಸತ್ಕರಿಸಲಾಯಿತು.
ಹೊಸಲಿಂಗನಮಠ ಗ್ರಾಮದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಯುವಕ ಮಂಡಳದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಿದ ಹೊನಲು ಬೆಳಕಿನ ಒಪನ್ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಸುತ್ತಮುತ್ತಲಿನ ಗ್ರಾಮಗಳಾದ ಲಿಂಗನಮಠ, ಹೊಸಲಿಂಗನಮಠ, ಮಂಗಳವಾಡ, ಮೊರಬ, ಹಂದೂರ, ತಿಗಡೋಳ್ಳಿ, ಅಳ್ನಾವರ, ದುಸಗಿ, ಸೇರಿದಂತೆ ಇನ್ನೂ ಹಲವಾರು ಗ್ರಾಮಗಳಿಂದ ಒಟ್ಟು 12ತಂಡಗಳು ಭಾಗವಹಿಸಿದ್ದವು.
ಈ ಪಂದ್ಯಾವಳಿಯಲ್ಲಿ ಮೊರಬ ಗ್ರಾಮದ ತಂಡ ಪ್ರಥಮ ಸ್ಥಾನ ಪಡೆದು 11111/-ರೂ. ಬಹುಮಾನ ತನ್ನದಾಗಿಸಿಕೊಂಡಿತು.
ತಿಗಡೋಳ್ಳಿ ಗ್ರಾಮದ ತಂಡ ದ್ವಿತೀಯ ಸ್ಥಾನ ಪಡೆದು 5555/- ಬಹುಮಾನವನ್ನು ತನ್ನದಾಗಿಸಿಕೊಂಡಿತು.
ಹೊಸಲಿಂಗನಮಠ ಗ್ರಾಮದ ತಂಡ ತೃತೀಯ ಸ್ಥಾನ ಪಡೆದು 3333/- ಬಹುಮಾನವನ್ನು ತನ್ನದಾಗಿಸಿಕೊಂಡಿತು.
ಮಂಗಳವಾಡ ಗ್ರಾಮದ ತಂಡ ನಾಲ್ಕನೆ ಸ್ಥಾನ ಪಡೆದು 1555/- ಬಹುಮಾನವನ್ನು ತನ್ನದಾಗಿಸಿಕೊಂಡಿತು
ಈ ಪಂದ್ಯಾವಳಿಯಲ್ಲಿ ನಿರ್ಣಾಯಕರಾಗಿ ಧಾರವಾಡದ ದೈಹಿಕ ಶಿಕ್ಷಕರ ಆರು ಜನರ ತಂಡ ಬಹಳ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಾನಂದ ಖೋತ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಡಾ-ಕೆ.ಬಿ.ಹಿರೇಮಠ, ಶಿವಾಜಿ ಡೊಳ್ಳಿನ, ಲಿಂಗರಾಜ ಮೂಲಿಮನಿ, ರಾಜು ರಪಾಟಿ, ಶಾಮೀರ ಹಟ್ಟಿಹೊಳಿ, ಮಾರುತಿ ಹರಿಜನ, ಪತ್ರಕರ್ತ ಬಾಬು ಸುಣಗಾರ, ಬಸವರಾಜ ಮಾಟೋಳ್ಳಿ, ಮಾರುತಿ ಬೂದಪ್ಪನ್ನವರ, ಸುಭಾಸ ಮಾಟೋಳ್ಳಿ, ಫಕ್ರುಸಾಬ ವಲ್ಲೆನವರ, ಮುದಕಪ್ಪಾ ನಾಯಕ, ಸಂಘದ ಸರ್ವ ಸದಸ್ಯರು, ಗ್ರಾಮಸ್ಥರು ಹಾಗೂ ಕ್ರೀಡಾಪಟುಗಳು ಹಾಜರಿದ್ದರು.
ಕಾರ್ಯಕ್ರವನ್ನು ಪತ್ರಕರ್ತರಾದ ಕಾಶೀಮ ಹಟ್ಟಿಹೋಳಿ ನಿರೂಪಣೆ ಮಾಡಿ ಸ್ವಾಗತಿಸಿ, ವಂದಿಸಿದರು.