RNI NO. KARKAN/2006/27779|Sunday, August 3, 2025
You are here: Home » breaking news » ಘಟಪ್ರಭಾ:ಯಾವುದೇ ಟ್ರಾವೆಲ್ ಹಿಸ್ಟರಿ ಮತ್ತು ಸೊಂಕಿತರ ಸಂಪರ್ಕ ಇಲ್ಲದ ವ್ಯಕ್ತಿಗೆ ಸೋಂಕು

ಘಟಪ್ರಭಾ:ಯಾವುದೇ ಟ್ರಾವೆಲ್ ಹಿಸ್ಟರಿ ಮತ್ತು ಸೊಂಕಿತರ ಸಂಪರ್ಕ ಇಲ್ಲದ ವ್ಯಕ್ತಿಗೆ ಸೋಂಕು 

ಯಾವುದೇ ಟ್ರಾವೆಲ್ ಹಿಸ್ಟರಿ ಮತ್ತು ಸೊಂಕಿತರ ಸಂಪರ್ಕ ಇಲ್ಲದ ವ್ಯಕ್ತಿಗೆ ಸೋಂಕು

 

 

ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ :

 

ಯಾವುದೇ ಟ್ರಾವೆಲ್ ಹಿಸ್ಟರಿ ಮತ್ತು ಸೊಂಕಿತರ ಸಂಪರ್ಕ ಇಲ್ಲದ ವ್ಯಕ್ತಿಗೆ ಘಟಪ್ರಭಾದಲ್ಲಿ ಕೊರೋನಾ ಸೊಂಕು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಬುಧವಾರ ಪಟ್ಟಣದ ಗಾಂಧೀ ನಗರ 2ನೇ ಕ್ರಾಸಿನಲ್ಲಿ 45 ವರ್ಷದ ವ್ಯಕ್ತಿಗೆ ಕೊರೋನಾ ಪಾಸಿಟೀವ ಬಂದಿದೆ. ಈ ವ್ಯಕ್ತಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಮತ್ತು ಸೊಂಕಿತರ ಸಂಪರ್ಕದಲ್ಲಿ ಬಂದಿರುವ ಬಗ್ಗೆ ಮಾಹಿತಿ ಕೂಡ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವ್ಯಕ್ತಿಗೆ ಎದೆ ಸಂಬಂದಿ ಕಾಯಿಳೆಗಳಿದ್ದ ಕಾರಣ ಉಸಿರಾಟದ ಸಮಸ್ಯೆ ಆಗಿದ್ದರಿಂದ ದಿ.20 ರಂದು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದ ಸಮಯದಲ್ಲಿ ವೈದ್ಯರು ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಬೀಮ್ಸ್ ಆಸ್ಪತ್ರೆಯ ವೈದ್ಯರು ಕೋವಿಡ ಟೆಸ್ಟ್ ಮಾಡಿದ ಕಾರಣ ಇಂದು ವರದಿ ಪಾಸಿಟೀವ ಬಂದಿದೆ.
ಅಧಿಕಾರಿಗಳು ಸೊಂಕಿತರ ಮನೆಯ 50 ಮೀಟರ್ ಪ್ರದೇಶವನ್ನು ಸೀಲ್ ಡೌನ ಮಾಡಿ ಮುಜಾಗೃತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಪ.ಪಂ ಮುಖ್ಯಾಧಿಕಾರಿ ಕೆ.ಭಿ.ಪಾಟೀಲ, ಗ್ರಾಮ ಲೇಕ್ಕಾಧಿಕಾರಿ ಜಗದೀಶ ಚೂರಿ, ಪೊಲೀಸ ಸಿಬ್ಬಂದಿ ಬಿ.ಎಸ್.ನಾಯಿಕ, ಪಟ್ಟಣ ಪಂಚಾಯತಿ ಸಿಬ್ಬಂದಿ ವರ್ಗ ಹಾಗೂ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

Related posts: