RNI NO. KARKAN/2006/27779|Sunday, February 1, 2026
You are here: Home » breaking news » ಘಟಪ್ರಭಾ:ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷಗಳು ಸುಳ್ಳು ಭರವಸೆಗಳನ್ನು ನೀಡಿ ಜನರಿಗೆ ಮೋಸ ಮಾಡುತ್ತಿದ್ದಾರೆ ; ಪ್ರಮೋದ ಮುತಾಲಿಕ

ಘಟಪ್ರಭಾ:ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷಗಳು ಸುಳ್ಳು ಭರವಸೆಗಳನ್ನು ನೀಡಿ ಜನರಿಗೆ ಮೋಸ ಮಾಡುತ್ತಿದ್ದಾರೆ ; ಪ್ರಮೋದ ಮುತಾಲಿಕ 

ಪಾದಯಾತ್ರೆ ನಂತರ ನಡೆದ ಸಭೆಯಲ್ಲಿ ಮಾತನಾಡುತ್ತಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ.

ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷಗಳು ಸುಳ್ಳು ಭರವಸೆಗಳನ್ನು ನೀಡಿ ಜನರಿಗೆ ಮೋಸ ಮಾಡುತ್ತಿದ್ದಾರೆ ; ಪ್ರಮೋದ ಮುತಾಲಿಕ
ಘಟಪ್ರಭಾ ಮೇ 9 : ಈ ಬಾರಿ ಮತದಾರರು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಲಿದ್ದಾರೆ. ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷಗಳು ಸುಳ್ಳು ಭರವಸೆಗಳನ್ನು ನೀಡುತ್ತಾ ಜನರನ್ನು ಮೋಸ ಮಾಡುತ್ತಿರುವುದರಿಂದ ಅವರು ಅಧಿಕಾರಕ್ಕೆ ಬಂದರೆ ಏನು ಪ್ರಯೋಜನವಿಲ್ಲ. ಅದಕ್ಕಾಗಿ ಗೋಕಾಕ ವಿಧಾನಸಭಾ ಪತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುರೇಶ ಪಾಟೀಲ ಅವರಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ಶ್ರೀರಾಮಸೇನೆ ಮುಖ್ಯಸ್ಥರಾದ ಪ್ರಮೋದ ಮುತಾಲಿಕ ಮತದಾರರಲ್ಲಿ ಮನವಿ ಮಾಡಿಕೊಂಡರು.
ಅವರು ಮಂಗಳವಾರ ಘಟಪ್ರಭಾ, ಮಲ್ಲಾಪೂರ ಪಿ.ಜಿ ಹಾಗೂ ಶಿಂದಿಕುರಬೇಟ ಗ್ರಾಮಗಳಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆÀರಳಿ ಪಕ್ಷೇತರ ಅಭ್ಯರ್ಥಿ ಸುರೇಶ ಪಾಟೀಲ ಅವರ ಪರವಾಗಿ ಮತಯಾಚನೆ ಮಾಡಿ ನಂತರ ನಡೆದ ಸಭೆಯಲ್ಲಿ ಮಾತನಾಡುತ್ತ, ಬಿಜೆಪಿಯವರು ಅವಕಾಶವಾದಿಗಳು, ಹಿಂದೂ ಡೊಂಗಿವಾದಿಗಳು ಎಂದು ಕಿಡಿಕಾರಿದ ಅವರು, ಬಿಜೆಪಿಯಿಂದ ಅನ್ಯಾಯಕ್ಕೆ ಒಳಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಿಷ್ಠಾವಂತ ಕಾರ್ಯಕರ್ತರಾದ ಸುರೇಶ ಪಾಟೀಲರಿಗೆ ನನ್ನ ವೈಯಕ್ತಿಕ ಹಾಗೂ ಶ್ರೀರಾಮಸೇನಾ ಮತ್ತು ಶಿವಸೇನೆಯ ಕಾರ್ಯಕರ್ತರ ಸಂಪೂರ್ಣ ಬೆಂಬಲಿವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೋಕಾಕ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುರೇಶ ಪಾಟೀಲ, ಹಿರಿಯರಾದ ಲಕ್ಷ್ಮಣ ತಪಸಿ, ಜಿ.ಎಸ್.ರಜಪೂತ, ಚಿರಾಕಲಿಶಾ ಮಕಾನದಾರ, ಗುರುಪ್ರಸಾದ ಪಾಟೀಲ, ಸಂಜು ನಾಯಿಕ, ಬಾಳಪ್ಪಾ ಮುಂಜೋಜಿ, ಸೇರಿದಂತೆ ನೂರಾರು ಜನ ಶ್ರೀರಾಮ ಸೇನೆ ಕಾರ್ಯಕರ್ತರು ಇದ್ದರು.

Related posts: