RNI NO. KARKAN/2006/27779|Sunday, August 3, 2025
You are here: Home » breaking news » ಘಟಪ್ರಭಾ:ಯುವಕರು ಪರಿಸರ ರಕ್ಷಣೆಗೆ ಮುಂದಾಗಬೇಕು : ಶ್ರೀ ಶಿಯಯ್ಯಾ ಬಸಯ್ಯಾ ಹಿರೇಮಠ

ಘಟಪ್ರಭಾ:ಯುವಕರು ಪರಿಸರ ರಕ್ಷಣೆಗೆ ಮುಂದಾಗಬೇಕು : ಶ್ರೀ ಶಿಯಯ್ಯಾ ಬಸಯ್ಯಾ ಹಿರೇಮಠ 

ಯುವಕರು ಪರಿಸರ ರಕ್ಷಣೆಗೆ ಮುಂದಾಗಬೇಕು : ಶ್ರೀ ಶಿಯಯ್ಯಾ ಬಸಯ್ಯಾ ಹಿರೇಮಠ

ಘಟಪ್ರಭಾ ಅ 28: ಹಸಿರಿನಿಂದಲೇ ಉಸಿರು ಆದ್ದರಿಂದ ಸಂಘಟನೆಯ ಪ್ರತಿಯೊಬ್ಬ ಕಾರ್ಯಕರ್ತರು ತಮ್ಮ ಮನೆಯ ಮುಂದೆ ಒಂದು ಸಸಿಯನ್ನು ನೆಡುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ಶ್ರೀ ಶಿಯಯ್ಯಾ ಬಸಯ್ಯಾ ಹಿರೇಮಠ ಹೇಳಿದರು
ಅವರು ಸೋಮವಾರದಂದು ಅರಭಾಂವಿ ಗ್ರಾಮದ ಶ್ರೀ ಅಂಜನೇಯ ಸಮುದಾಯ ಭವನದಲ್ಲಿ ಜಯ ಕರ್ನಾಟಕ ಸಂಘಟನೆಯ ಘಟಕ ಉದ್ಘಾಟನೆ ಹಾಗೂ ಸಸಿ ನೆಡುವ ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದರು.

ಸಂಘಟನೆಯ ಜಿಲ್ಲಾ ಅಧ್ಯಕ್ಷ ಸಂಜಯ ರಜಪೂತ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತ ಸಂಘಟನೆಯಿಂದ ಯುವಕರಲ್ಲಿ ಒಂದು ಉತ್ಸಾಹ ತುಂಬುತ್ತದೆ. ಯುವಕರು ಕನ್ನಡ ನಾಡು, ನುಡಿಯನ್ನು ಕಾಪಾಡುವ ಪಣತೊಡಬೇಕು ಅಂದರೆ ಸಂಘಟನೆಗೆ ಸ್ವಾರ್ಥಕತೆ ಬರುತ್ತದೆ ಎಂದರು.

ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಮಲಿಕಜಾನ ತಲವಾರ, ಸಂಘಟನೆಯ ಯುವ ಅಧ್ಯಕ್ಷ ಹೈದರಲಿ ಮುಲ್ಲಾ ಸಂಘÀಟನೆ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಬಾಳೇಶ ಪೂಜೇರಿಯವರನ್ನು ಅರಭಾಂವಿ ಯುವ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪ.ಪಂ ಉಪಾಧ್ಯಕ್ಷ ರಮೇಶ ಮಾದರ, ಅಜೀಜ ಮೋಕಾಶಿ, ಮೌಲಾ ಪುಲತಾಂಬೆ, ಸಂತೋಷ ಲಕ್ಕುಂಡಿ, ಲಕ್ಷ್ಮಣ ಶೀಳನ್ನವರ, ಮಂಜು ಲಾಳಗಿ, ಗಣಪತಿ ಪೂಜೇರಿ, ನಾರಾಯಣ ಸಂಪಗಾವಿ ಸಂಘಟನೆಯ ಕಾರ್ಯಕರ್ತರು. ಪದಾಧಿಕಾರಿಗಳು. ಮುಖಂಡರು ಸೇರಿದಂತೆ ಸಂಘಟನೆ ಸರ್ವ ಕಾರ್ಯಕರ್ತರು ಇದ್ದರು.

Related posts: