ಗೋಕಾಕ:ಪವಿತ್ರ ರಮಜಾನ ( ಈದುಲ್ ಫಿತರ ) ಹಬ್ಬ ಸರಳವಾಗಿ ಮನೆಯಲ್ಲಿಯೇ ಆಚರಣೆ ಮಾಡಿದ ಮಸ್ಲಿಂ ಭಾಂಧವರು
ಪವಿತ್ರ ರಮಜಾನ ( ಈದುಲ್ ಫಿತರ ) ಹಬ್ಬ ಸರಳವಾಗಿ ಮನೆಯಲ್ಲಿಯೇ ಆಚರಣೆ ಮಾಡಿದ ಮಸ್ಲಿಂ ಭಾಂಧವರು
ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ಮೇ 25 :
ಕೊರೋನಾ ವೈರಸ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕಡೌನ ಜಾರಿಯಲ್ಲಿದ್ದು ಸ್ಥಳೀಯ ಮುಸ್ಲಿಂ ಸಮಾಜದ ಬಾಂಧವರು ರಮಜಾನ (ಈದುಲ್ ಫಿತರ) ಹಬ್ಬವನ್ನು ಸೋಮವಾರದಂದು ಅತ್ಯಂತ ಸರಳವಾಗಿ ತಮ್ಮ ತಮ್ಮ ಮನೆಗಳಲ್ಲಿ ಆಚರಿಸಿದರು .
ಪ್ರತಿ ವರ್ಷ ರಮಜಾನ ಹಬ್ಬದಂದು ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದ ಮುಸ್ಲಿಂ ಬಾಂಧವರು ಲಾಕಡೌನ ಜಾರಿಯಲ್ಲಿರುವ ಕಾರಣದಿಂದ ಈ ಬಾರಿಯ ಸಾಮೂಹಿಕ ಪ್ರಾರ್ಥನೆಯನ್ನು ರದ್ದು ಪಡೆಸಿ ತಮ್ಮ ಮನೆಗಳಲ್ಲಿಯೇ ಕುಟುಂಬ ಸದಸ್ಯರೊಂದಿಗೆ ರಮಜಾನ ಹಬ್ಬದ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು