RNI NO. KARKAN/2006/27779|Monday, August 4, 2025
You are here: Home » breaking news » ಗೋಕಾಕ:ರಾತ್ರಿಯೂ ಮುಂದುವರೆದ ಸತೀಶ ಶುಗರ್ಸ ಸಿಬ್ಬಂದಿಯ ಸ್ವಚ್ಚತಾ ಕಾರ್ಯ

ಗೋಕಾಕ:ರಾತ್ರಿಯೂ ಮುಂದುವರೆದ ಸತೀಶ ಶುಗರ್ಸ ಸಿಬ್ಬಂದಿಯ ಸ್ವಚ್ಚತಾ ಕಾರ್ಯ 

ರಾತ್ರಿಯೂ ಮುಂದುವರೆದ ಸತೀಶ ಶುಗರ್ಸ ಸಿಬ್ಬಂದಿಯ ಸ್ವಚ್ಚತಾ ಕಾರ್ಯ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಆ 28 :
ಕಳೆದ 15 ದಿನಗಳಿಂದ ನಗರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸ್ವಚ್ಚತಾ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ನಗರದಲ್ಲಿ ಪ್ರವಾಹದ ನೀರು ಇಳಿಮುಖವಾದ ತಕ್ಷಣವೇ ಕಾರ್ಯಪ್ರವೃತವಾಗಿದಾದ ಶಾಸಕರು ತಮ್ಮ ಒಡೆತನದ ಸತೀಶ ಶುಗರ್ಸ ಕಾರಖಾನೆಯ ಸಿಬ್ಬಂದಿ , ಟ್ರ್ಯಾಕ್ಟರ್ ಮತ್ತು ಜೆಸಿಬಿಗಳನ್ನು ಬಳಸಿ ಸ್ವಚ್ಚತಾ ಕಾರ್ಯಕ್ಕೆ ಧುಮುಕಿದ್ದ ಸತೀಶ ಶುಗರ್ಸನ ಸಿಬ್ಬಂದಿಗಳು ರಾತ್ರಿಯಾಗದರು ಸಹ ತಮ್ಮ ಕಾಯಕವನ್ನು ಮುಂದುವರಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಬುಧವಾರದಂದು ನಗರದ ಮುಲ್ಲಾ ಮಸಜೀದ ಹತ್ತಿರ ಹಾಳಭಾಗ ಓಣಿಯಲ್ಲಿ ರಾತ್ರಿಯನ್ನು ಲೆಕ್ಕಿಸದೆ ಸ್ವಚ್ಚತಾ ಕಾರ್ಯ ಮುಂದುವರಿದಿದೆ ಎಂದು ಸತೀಶ ಜಾರಕಿಹೊಳಿ ಫೌಂಡೇಶನ್ ನ ಆರೀಪ ಪೀರಜಾದೆ ತಿಳಿಸಿದ್ದಾರೆ

Related posts: