ಮರಾಠಿಯಲ್ಲಿ ಭಾಷೆಯಲ್ಲಿ ದಾಖಲೆ ನೀಡಿ : ಮತ್ತೆ ಎಂಇಎಸ್ ಖ್ಯಾತೆ
ಮರಾಠಿಯಲ್ಲಿ ಭಾಷೆಯಲ್ಲಿ ದಾಖಲೆ ನೀಡಿ : ಮತ್ತೆ ಎಂಇಎಸ್ ಖ್ಯಾತೆ
ಬೆಳಗಾವಿ :: ಸರಕಾರಿ ದಾಖಲೆಗಳನ್ನು ಮರಾಠಿಭಾಷೆಯಲ್ಲಿಯೇ ನೀಡಬೇಕೆಂದು ಆಗ್ರಹಿ ಎಂಇಎಸ್ ಸಂಘಟನೆ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಷಿಸಿದರು.
ನಗರದಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಮಾಜಿ ಶಾಸಕ ಮನೋಹರ್ ಕಿಣೇಕರ್ ನೇತೃತ್ವದ ಎಂಇಎಸ್‌ನ ಕಾರ್ಯಕರ್ತರು, ನಗರ ಸಾರಿಗೆ, ಆಸ್ಪತ್ರೆ, ಕಚೇರಿಗಳ ಮೇಲೆ ಮರಾಠಿಯಲ್ಲಿ ನಾಮಫಲಕ ಹಾಕಿ ಸರಕಾರಿ ಕಾಗದ ಪತ್ರ, ಚುನಾವಣಾ ಗುರುತಿನ ಪಟ್ಟಿ ಸೇರಿದಂತೆ ಇನ್ನಿತರ ದಾಖಲೆಗಳನ್ನು ಮರಾಠಿ ಭಾಷೆಯಲ್ಲಿ ನೀಡಬೇಕೆಂದು ಅಪರ ಜಿಲ್ಲಾಧಿಕಾರಿಗೆ ಮನವಿ ಮಾಡುವ ಮೂಲಕ ಒತ್ತಾಯಿಸಿದ್ದಾರೆ.
ಕೆಲವು ಮುಗ್ದ ಮರಾಠಿ ಭಾಷಿಕರನ್ನು ಸೇರಿಸಿಕೊಂಡು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಮರಾಠಿಯಲ್ಲಿ ಕಾಗದ ಪತ್ರಗಳನ್ನು ನೀಡಿ ಎನ್ನುವ ಬೇಡಿಕೆ ಇಟ್ಟು ಕನ್ನಡ ಮತ್ತು ಮರಾಠಿ ಭಾಷಿಕರ ಮಧ್ಯ ವಿಷಬೀಜ ಬಿತ್ತುವ ಪುಂಡಾಟಿಕೆ ಪ್ರದರ್ಶನ ಮಾಡಿದ್ದಾರೆ.
Related posts:
Posted in: ಬೆಳಗಾವಿ ಗ್ರಾಮೀಣ