RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಪೊಲೀಸ್ ಚೆಕ್ ಪೋಸ್ಟ್‍ಗೆ ಉಪ ತಹಶೀಲ್ದಾರ ಎಸ್.ಬಿ.ಕಟ್ಟಿಮನಿ ಭೇಟಿ

ಗೋಕಾಕ:ಪೊಲೀಸ್ ಚೆಕ್ ಪೋಸ್ಟ್‍ಗೆ ಉಪ ತಹಶೀಲ್ದಾರ ಎಸ್.ಬಿ.ಕಟ್ಟಿಮನಿ ಭೇಟಿ 

ಪೊಲೀಸ್ ಚೆಕ್ ಪೋಸ್ಟ್‍ಗೆ ಉಪ ತಹಶೀಲ್ದಾರ ಎಸ್.ಬಿ.ಕಟ್ಟಿಮನಿ ಭೇಟಿ

 
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಮೆ 1 :

 
ದೇಶಾದ್ಯಂತ ಹರಡುತ್ತಿರುವ ಮಹಾಮಾರಿ ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಲಾಕ್‍ಡೌನ್ ಹಾಕಲಾದ ಹಿನ್ನಲೆಯಲ್ಲಿ ಕೌಜಲಗಿ ಉಪ ತಹಶೀಲ್ದಾರ ಎಸ್.ಬಿ.ಕಟ್ಟಿಮನಿ ಅವರು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಸ್ಥಾಪಿಸಲಾದ ಪೊಲೀಸ್ ಚೆಕ್ ಪೋಸ್ಟ್‍ಗೆ ಶುಕ್ರವಾರ ಮೇ.1ರಂದು ಭೇಟಿ ಹಲವಾರು ಮಾಹಿತಿ ಪರಿಶೀಲಿಸಿದರು.
ಕೌಜಲಗಿ ಉಪ ತಹಶೀಲ್ದಾರ ಎಸ್.ಬಿ.ಕಟ್ಟಿಮನಿ ಮಾತನಾಡಿ, ಬೆಟಗೇರಿ ಗ್ರಾಮ ಪಂಚಾಯ್ತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಕುಲಗೋಡ ಪೊಲೀಸ್ ಠಾಣೆಯ ಸಹಕಾರದೊಂದಿಗೆ ಗ್ರಾಮದಲ್ಲಿ ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೈಗೊಂಡ ವಿವಿಧ ಕಾರ್ಯಕ್ರಮಗಳಿಗೆ ಹಾಗೂ ಗ್ರಾಮಸ್ಥರು ನೀಡುತ್ತಿರುವ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಸಾರ್ವಜನಿಕರ ಹಾಗೂ ಪೊಲೀಸ್ ಚೆಕ್ ಪೋಸ್ಟ್ ಸಿಬ್ಬಂದಿಗಳಿಗೆ ಲಭ್ಯವಿರುವ ಸೌಲಭ್ಯ ಮತ್ತು ಸಮಸ್ಯೆಗಳ ಮಾಹಿತಿ ಪಡೆದರು.
ಗ್ರಾಮಲೆಕ್ಕಾಧಿಕಾರಿ ಜೆ.ಎಮ್.ನದಾಫ್, ಪೊಲೀಸ್ ಪೇದೆ ಬಿ.ಬಿ.ಬಿರಾದಾರ, ನಾಗೇಶ ದುರದುಂಡಿ, ಹೋಮ್‍ಗಾಡ್ ಸಿದ್ದಪ್ಪ ಗಾಣಗಿ, ಪೊಲೀಸ್ ಚೆಕ್ ಪೋಸ್ಟ್ ಸಿಬ್ಬಂದಿಗಳಾದ ಬಿ.ಎ.ಕೋಟಿ, ಎಸ್.ಜಿ..ಮಠಪತಿ. ಅರಭಾಂವಿ ಕಂದಾಯ ನಿರೀಕ್ಷಕ ಎಸ್.ಎಮ್.ಪೂಜೇರಿ, ಕೌಜಲಗಿ ಗ್ರಾಮ ಲೆಕ್ಕಾಧಿಕಾರಿ ಎಸ್.ಎಮ್.ದೇಶಪಾಂಡೆ, ಶ್ರೀಧರ ದೇಯಣ್ಣವರ, ಸ್ಥಳೀಯರು, ಮತ್ತೀತರರು ಇದ್ದರು.

Related posts: