RNI NO. KARKAN/2006/27779|Tuesday, December 2, 2025
You are here: Home » breaking news » ಗೋಕಾಕ:ಕೊರೋನಾ ಮುಂಜಾಗೃತ ಕ್ರಮ ನಗರದ ಗಲ್ಲಿಗಲ್ಲಿಗಳಲ್ಲಿ ಬೇಟಿ ನೀಡಿ ಜನರ ಸಮಸ್ಯೆ ಆಲಿಸಿದ ಡಿ.ಎಸ್.ಪಿ ಡಿ‌.ಟಿ‌ ಪ್ರಭು

ಗೋಕಾಕ:ಕೊರೋನಾ ಮುಂಜಾಗೃತ ಕ್ರಮ ನಗರದ ಗಲ್ಲಿಗಲ್ಲಿಗಳಲ್ಲಿ ಬೇಟಿ ನೀಡಿ ಜನರ ಸಮಸ್ಯೆ ಆಲಿಸಿದ ಡಿ.ಎಸ್.ಪಿ ಡಿ‌.ಟಿ‌ ಪ್ರಭು 

ಕೊರೋನಾ ಮುಂಜಾಗೃತ ಕ್ರಮ ನಗರದ ಗಲ್ಲಿಗಲ್ಲಿಗಳಲ್ಲಿ ಬೇಟಿ ನೀಡಿ ಜನರ ಸಮಸ್ಯೆ ಆಲಿಸಿದ ಡಿ.ಎಸ್.ಪಿ ಡಿ‌.ಟಿ‌ ಪ್ರಭು

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 29 :

 

 

ಕೊರೋನಾ ಮುಂಜಾಗೃತ ಕ್ರಮವಾಗಿ ರಾಜ್ಯಾದ್ಯಂತ ಜಾರಿಯಲ್ಲಿರುವ ಲಾಕಡೌನ ಸಂದರ್ಭದಲ್ಲಿ ಜನರಿಗೆ ಯಾವುದೆ ತೊಂದರೆ ಆಗದಂತೆ ನಿಗಾವಹಿಸಲು ಗೋಕಾಕ ಡಿ.ವಾಯ .ಎಸ್. ಪಿ ಡಿ.ಟಿ ಪ್ರಭು ನಗರದ ಗಲ್ಲಿ ಗಲ್ಲಿಗಳಲ್ಲಿ ಸಂಚರಿಸಿ ಜನರ ಸಮಸ್ಯೆಗಳನ್ನು ಆಲಿಸಿದರು.

ರವಿವಾರದಂದು ನಗರದ ಬಸವ ನಗರ , ವಿವೇಕಾನಂದ ನಗರ ಸೇರಿದಂತೆ ಇತರ ಕಡೆಗಳಲ್ಲಿ ಪಾದಯಾತ್ರೆ ನಡೆಸಿದ ಅವರು ಸಾರ್ವಜನಿಕರಿಗೆ ಸರಿಯಾಗಿ ಜೀವನಾವಶಕ ವಸ್ತುಗಳಾದ ತರಕಾರಿ, ಹಾಲು, ನೀರು ಸೇರಿದಂತೆ ಅಗತ್ಯ ವಸ್ತುಗಳು ಸರಿಯಾಗಿ ಸಿಗುತ್ತಿವೆ ಅಥವಾ ಇಲ್ಲ ಎಂಬುದನ್ನು ಪರಿಶೀಲಿಸಿ ಜನರಿಂದ ಮಾಹಿತಿ ಪಡೆದುಕೊಂಡು ಯಾವುದೇ ತೊಂದರೆ ಉದ್ಭವಿಸಿದರೆ ತಕ್ಷಣದಲ್ಲಿ ತಮ್ಮ ಗಮನಕ್ಕೆ ತರಬೇಕೆಂದು ಡಿ.ಎಸ್.ಪಿ ಡಿ.ಟಿ.ಪ್ರಭು ಸಾರ್ವಜನಿಕರಲ್ಲಿ ವಿನಂತಿಸಿದರು

Related posts: