ಘಟಪ್ರಭಾ:8 ಜನರ ಮೇಲೆ ಪೋಸ್ಕೋ ಕಾಯ್ದಿಯಡಿ ಪ್ರಕರಣ ದಾಖಲು : ಘಟಪ್ರಭಾ ಪೊಲೀಸ ವ್ಯಾಪ್ತಿಯಲ್ಲಿ ಘಟನೆ

8 ಜನರ ಮೇಲೆ ಪೋಸ್ಕೋ ಕಾಯ್ದಿಯಡಿ ಪ್ರಕರಣ ದಾಖಲು : ಘಟಪ್ರಭಾ ಪೊಲೀಸ ವ್ಯಾಪ್ತಿಯಲ್ಲಿ ಘಟನೆ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜೂ 16 :
ಅಪ್ರಾಪ್ತ ಬಾಲಕಿಯೊಬ್ಬಳು 7 ತಿಂಗಳ ಗರ್ಭಿಣಿಯಾದ ಕಾರಣ ಘಟಪ್ರಭಾ ಪೋಲಿಸ್ ಠಾಣೆಯಲ್ಲಿ 8 ಜನರ ಮೇಲೆ ಪೋಸ್ಕೋ ಕಾಯ್ದಿಯಡಿ ಶನಿವಾರ ದೂರು ದಾಖಲಾಗಿದ್ದು ಇಬ್ಬರನ್ನು ಈಗಾಗಲೆ ಪೋಲಿಸರು ಬಂಧಿಸಿದ್ದಾರೆ.
14 ವರ್ಷದ ಅಪ್ರಾಪ್ತ ಬಾಲಕಿಯನ್ನು ಯುವಕನೊಬ್ಬನು ಪ್ರೀತಿಸಿದ ಕಾರಣ ಬಾಲಕಿ ಹಾಗೂ ಹುಡುಗನ ಮನೆಯವರು ಕಾನೂನನ್ನು ಉಲ್ಲಂಘಿಸಿ ಕೆಲವು ತಿಂಗಳ ಹಿಂದೆ ಇಬ್ಬರಿಗೂ ಮದುವೆ ಮಾಡಿಸಿದ್ದಾರೆ. ಬಾಲಕಿ ಈಗ 7 ತಿಂಗಳ ಗರ್ಭಿಣಿಯಾಗಿದ್ದು ಈ ಸಂದರ್ಭದಲ್ಲಿ ಎರಡು ಕುಟುಂಬದ ನಡುವೆ ಜಗಳ ಉಂಟಾಗಿ ಪೋಲಿಸ್ ಠಾಣೆ ಮೆಟ್ಟಲೇರಿದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಈಗ ಘಟಪ್ರಭಾ ಪೊಲೀಸರು ಈ ಪ್ರಕರಣದಲ್ಲಿ ಭಾಗಿಯಾದ ಲಕ್ಕಪ್ಪ ತಿಗಿಡಿ, ಲಕ್ಷಣ ಗುಂಡಿ, ಲಗಮವ್ವಾ ಗುಂಡಿ, ತಿಪ್ಪಣ್ಣಾ ಗುಂಡಿ, ಸರಸ್ವತಿ ಗುಂಡಿ, ಸಿದ್ದಪ್ಪಾ ತಿಗಿಡಿ, ತಿಪ್ಪಮ್ಮಾ ತಿಗಿಡಿ ಹಾಗೂ ವಿಠಲ ತಿಗಿಡಿ ಸೇರಿ ಎರಡು ಕುಟುಂಬದ 8 ಜನರ ಮೇಲೆ ಪೋಸ್ಕೋ ಕಾಯ್ದಿದೆಯಲ್ಲಿ ಕೇಸು ದಾಖಲಿಸಿ ಕೊಂಡು ಆರೋಪಿ ಲಕ್ಕಪ್ಪಾ ತಿಗಿಡಿ ಹಾಗೂ ಸಿದ್ದಪ್ಪಾ ತಿಗಿಡಿಯನ್ನು ಬಂಧಿಸಿ ನ್ಯಾಯಲಯಕ್ಕೆ ಒಪ್ಪಿಸಿದ್ದಾರೆ.