ಗೋಕಾಕ:ಡಾ.ಎ.ಪಿ ಜೆ ಅಬ್ದುಲ್ ಕಲಾಂ ಅವರ ಪ್ರೇರಣೆಯಿಂದ ನಾನು ಇಷ್ಟೆಲಾ ಸಾಧಿಸಲು ಸಾಧ್ಯವಾಯಿತು : ಡಾ.ಟೇಸ್ಸಿ ಥಾಮಸ್
ಡಾ.ಎ.ಪಿ ಜೆ ಅಬ್ದುಲ್ ಕಲಾಂ ಅವರ ಪ್ರೇರಣೆಯಿಂದ ನಾನು ಇಷ್ಟೆಲಾ ಸಾಧಿಸಲು ಸಾಧ್ಯವಾಯಿತು : ಡಾ.ಟೇಸ್ಸಿ ಥಾಮಸ್
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 3 :
ಡಾ.ಎ.ಪಿ ಜೆ ಅಬ್ದುಲ್ ಕಲಾಂ ಅವರ ಪ್ರೇರಣೆಯಿಂದ ನಾನು ಇಷ್ಟೆಲಾ ಸಾಧಿಸಲು ಸಾಧ್ಯವಾಯಿತು ಎಂದು ಕ್ಷಿಪಣಿ ಮಹಿಳೆ ಮಹಿಳಾ ವಿಜ್ಞಾನಿ ಡಾ.ಟೇಸ್ಸಿ ಥಾಮಸ ಹೇಳಿದರು
ಸೋಮವಾರದಂದು ಕಾಯಕಶ್ರೀ ಪ್ರಶಸ್ತಿ ಸ್ವೀಕರಿಸಲು ಗೋಕಾಕ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ನಗರದ ಶೂನ್ಯ ಸಂಪಾದನ ಮಠದಲ್ಲಿ ಚೆನ್ನಬಸವೇಶ್ವರ ವಿದ್ಯಾಪೀಠದ ವಿದ್ಯಾರ್ಥಿಗಳೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಅವರು ಮಾತನಾಡಿದರು.
ಇಂದಿನ ವಿಧ್ಯಾರ್ಥಿಗಳು ವ್ಯವಸ್ಥಿತವಾಗಿರಲು ಪ್ರಯತ್ನಿಸುತ್ತಿಲ್ಲ, ಇಂದು ವಿದ್ಯಾರ್ಥಿಗಳು ಕೈಯಲ್ಲಿ ಎಲ್ಲ ಮಾಹಿತಿ ಇದ್ದರು ಸಹ ಅದನ್ನು ಸದುಪಯೋಗ ಪಡೆಯುವಲ್ಲಿ ವಿಫಲವಾಗುತ್ತಿದ್ದಾರೆ. ಯಾವುದು ಉಪಯುಕ್ತ , ಯಾವುದು ಉಪಯುಕ್ತ ಅಲ್ಲ ಎಂದು ಯೋಚಿಸಿ ಗುಗಲ್ ದಂತಹ ಸಾಮಾಜಿಕ ಜಾಲತಾಣದ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ವಾಯು ಸೇನೆ, ಭೂ ಸೇನೆ ಮತ್ತು ನೌಕಾ ಸೇವೆಗಳ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ಡಿ.ಆರ್.ಡಿ.ಒ ಸಂಸ್ಥೆ ಕಾರ್ಯನಿರ್ವಹಿಸುತ್ತದೆ. ಇದು ಸಾಮಾಜಿಕ ಸಂಸ್ಥೆ ಅಲ್ಲ , ರಕ್ಷಣಾ ಸಂಸ್ಥೆಗೆ ಪೂರಕವಾಗಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದೆ ಎಂದ ಥಾಮಸ್ ವಿದ್ಯಾರ್ಥಿಗಳು ಅಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಿ ಸಾಧಿಸುವ ಛಲ ಹೊಂದಬೇಕು ಎಂದು ಹೇಳಿದರು
ಒಬ್ಬ ಯಶಸ್ವಿ ವಿಜ್ಞಾನಿಯಾಗಿ ಮನೆಯನ್ನು ಹೇಗೆ ನಿರ್ವಹಿಸುತ್ತಿರಿ ಎಂದು ಕೇಳಿದ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ಅವರು ಮನೆ ಕಾರ್ಯಗಳಲ್ಲಿ ನಾನು ಮತ್ತು ನನ್ನ ಪತಿ ಇಬ್ಬರು ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸುತ್ತೇವೆ . ಮನೆಯಲ್ಲಿ ಮುಂಜಾನೆ ಆಹಾರ ನಾನೆ ಮಾಡುತ್ತೇನೆ ಎಷ್ಟೆ ಒತ್ತಡಗಳು ಇದ್ದರು ಸಹ ಎಲ್ಲರೂ ಹೊಂದಾಣಿಕೆಯಿಂದ ಇರುತ್ತೇವೆ . ನನ್ನ ತಂದೆ ತಾಯಿ ಮತ್ತು ನನ್ನ ಪತಿಯ ತಂದೆ ತಾಯಿ ಅವರು ನಮಗೆ ಪೂರ್ಣ ಪ್ರಮಾಣದ ಸಹಕಾರ ನೀಡುತ್ತಿದ್ದಾರೆ. ಇದು ನನಗೆ ಒಬ್ಬ ಯಶಸ್ವಿ ಮಹಿಳೆಯಾಗಲು ಕಾರಣವಾಗಿದೆ ಎಂದು ಮಹಿಳಾ ವಿಜ್ಞಾನಿ ಟೇಸ್ಸಿ ಥಾಮಸ್ ಹೇಳಿದರು.
ಕಾರ್ಯಕ್ರಮವನ್ನು ಶಿಕ್ಷಕಿ ಪ್ರೀತಿ ರಬಕವಿ ನಿರೂಪಿಸಿ ,ವಂದಿಸಿದರು . ಈ ಸಂದರ್ಭದಲ್ಲಿ ಚೆನ್ನಬಸವೇಶ್ವರ ವಿದ್ಯಾಪೀಠದ ಆಡಳಿತಾಧಿಕಾರಿ ಅಡಿವೇಶ ಗವಿಮಠ ಇದ್ದರು