RNI NO. KARKAN/2006/27779|Sunday, February 15, 2026
You are here: Home » breaking news » ಕೌಜಲಗಿ:ಕೌಜಲಗಿಯಲ್ಲಿ ಜ.4 ರಂದು ಸಾವಿತ್ರಿಬಾಯಿ ಫುಲೆ ಜಯಂತಿ

ಕೌಜಲಗಿ:ಕೌಜಲಗಿಯಲ್ಲಿ ಜ.4 ರಂದು ಸಾವಿತ್ರಿಬಾಯಿ ಫುಲೆ ಜಯಂತಿ 

ಕೌಜಲಗಿಯಲ್ಲಿ ಜ.4 ರಂದು ಸಾವಿತ್ರಿಬಾಯಿ ಫುಲೆ ಜಯಂತಿ

 

ನಮ್ಮ ಬೆಳಗಾವಿ ಇ – ವಾರ್ತೆ , ಕೌಜಲಗಿ ಜ 2 :

 

ಪಟ್ಟಣದಲ್ಲಿ ಮಾಳಿ ಸಮಾಜದ ಆಶ್ರಯದಲ್ಲಿ ರವಿವಾರ ಜನೇವರಿ 4 ರಂದು ಸಾವಿತ್ರಿಬಾಯಿ ಫುಲೆಯವರ ಜಯಂತಿಯನ್ನು ಆಚರಿಸಲಾಗುತ್ತದೆ. ಜಯಂತಿಯ ಅಂಗವಾಗಿ ಕುಂಭಮೇಳ, ವಾದ್ಯಮೇಳಗಳೊಂದಿಗೆ ಸಾವಿತ್ರಿಬಾಯಿ ಫುಲೆಯವರ ಭಾವಚಿತ್ರದ ಮೆರವಣಿಗೆ ಜರುಗಲಿದೆ. ಮೆರವಣಿಗೆಯ ನಂತರ ಕಟ್ಟಿ ಬಸವೇಶ್ವರ ದೇವಸ್ಥಾನದ ಹತ್ತಿರ ಕಾರ್ಯಕ್ರಮ ಜರುಗಲಿದ್ದು, ದಿವ್ಯ ಸಾನಿಧ್ಯವನ್ನು ಭಾಗೋಜಿಕೊಪ್ಪ ಗ್ರಾಮದ ಶ್ರೀ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಕೌಜಲಗಿ ಶ್ರೀ ಮರುಳಸಿದ್ಧೇಶ್ವರ ಸಿದ್ಧಸಂಸ್ಥಾನಮಠದ ಶ್ರೀ ಕೃಷ್ಣಾನಂದ ಮಹಾಸ್ವಾಮಿಗಳು ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಅರಭಾವಿ ಶಾಸಕರು ಹಾಗೂ ಬೆಂಗಳೂರಿನ ಕೆ.ಎಮ್.ಎಫ್. ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿಯವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಸ್ಥಳೀಯ ಮುಖಂಡರಾದ ಡಾ.ರಾಜೇಂದ್ರ ಸಣ್ಣಕ್ಕಿ ವಹಿಸಲಿದ್ದು, ಗ್ರಾಮದ ವಿವಿಧ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಳಿ ಸಮಾಜದ ಮುಖಂಡ ನೀಲಪ್ಪ ಕಿವಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts: