RNI NO. KARKAN/2006/27779|Tuesday, October 14, 2025
You are here: Home » breaking news » ಮೂಡಲಗಿ :ಅಯ್ಯಪ್ಪಸ್ವಾಮಿ ಸನಿಧಾನಕ್ಕೆ ಮಹಿಳೆಯರ ಪ್ರವೇಶ ನಿಷೇಧಿಸಲು ಆಗ್ರಹಿಸಿ ಪ್ರತಿಭಟನೆ

ಮೂಡಲಗಿ :ಅಯ್ಯಪ್ಪಸ್ವಾಮಿ ಸನಿಧಾನಕ್ಕೆ ಮಹಿಳೆಯರ ಪ್ರವೇಶ ನಿಷೇಧಿಸಲು ಆಗ್ರಹಿಸಿ ಪ್ರತಿಭಟನೆ 

ಅಯ್ಯಪ್ಪಸ್ವಾಮಿ ಸನಿಧಾನಕ್ಕೆ ಮಹಿಳೆಯರ ಪ್ರವೇಶ ನಿಷೇಧಿಸಲು ಆಗ್ರಹಿಸಿ ಪ್ರತಿಭಟನೆ

ಮೂಡಲಗಿ ಅ 17: ಶಬರಿಮಲೆ ಅಯ್ಯಪ್ಪಸ್ವಾಮಿ ಸನಿಧಾನಕ್ಕೆ ಮಹಿಳೆಯರ ಪ್ರವೇಶ ನಿಷೇಧಿಸಲು ಆಗ್ರಹಿಸಿ ಅಯ್ಯಪ್ಪ ಸ್ವಾಮಿ ಭಕ್ತರು ಕಲ್ಮೇಶ್ವರ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ ಕಛೇರಿಯ ಶಿರಸ್ತೆದಾರ ರಾಜು ಕಡಕೋಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
800ವರ್ಷಗಳ ಇತಿಹಾಸವಿರುವ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನೀಡುವಂತೆ ಸರ್ವೋಚ್ಚನ್ಯಾಯಾಲಯ ನೀಡಿದ ತೀರ್ಪಿನಿಂದ ಸಹಸ್ರ ಕೋಟಿ ಭಕ್ತ ಸಮೂಹದ ಮನಸ್ಸಿಗೆ ಆಘಾತ ಉಂಟುಮಾಡಿದೆ, ನ್ಯಾಯಾಲಯವು ತಮ್ಮ ತೀರ್ಪನ್ನು ಪುನರ್ ಪರಿಶೀಲಿಸಬೇಕು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಹೇಳಿದರು.
ಖಾನಟ್ಟಿಯ ಶ್ರೀ ಬಸವಾನಂದ ಸ್ವಾಮಿಗಳು ಮಾತನಾಡಿ, ಶಬರಿಮಲೆ ಅಯ್ಯಪ್ಪಸ್ವಾಮಿ ಸನಿಧಾನಕ್ಕೆ ಪ್ರವೇಶ ನೀಡುವುದಿದ್ದರೇ, ಹತ್ತು ವಷರ್Àದೊಳಗಿನ ಕುವರಿಯರಿಗೆ ಹಾಗೂ ಐವತ್ತು ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪ್ರವೇಶ ನೀಡಬೇಕು. ಇಲ್ಲವಾದಲ್ಲಿ ದೇಶದ್ಯಾಂತ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವದು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ, ಗುರುಸ್ವಾಮಿ ರವಿ ನೇಸೂರ, ಸಂಜೀವ ಶೆಟ್ಟಿ, ಈಶ್ವರ ಗೋಲಶೆಟ್ಟಿ, ಸುರೇಶ ಸವಸುದ್ದಿ, ಸುರೇಶ ಪತ್ತಾರ, ಸುಧೀರ ನಾಯರ್, ಚೇತನ ನಿಶಾನಿಮಠ, ಸದಾಶಿವ ನಿಡಗುಂದಿ, ಕುಮಾರ ಗಿರಡ್ಡಿ, ಚನಬಸು ಝಂಡೇಕುರಬರ, ಎಮ್.ಎಸ್.ಮೂಗಳಖೋಡ ಹಾಗೂ ಗುರ್ಲಾಪೂರ, ಕಂಕಣವಾಡಿ, ಹಳ್ಳೂರ, ತುಕ್ಕನಟ್ಟಿಯ ಭಕ್ತರು ಉಪಸ್ಥಿತರಿದ್ದರು.

Related posts: