ಗೋಕಾಕ:ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಅಂಗಡಿ ಬಾಗಿಲು ತೆರೆದು ಮುನ್ನಚ್ಚರಿಕೆ ಕ್ರಮವಹಿಸಿ ಗ್ರಾಹಕರಿಗೆ ವಸ್ತುಗಳನ್ನು ನೀಡಬೇಕು
ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಅಂಗಡಿ ಬಾಗಿಲು ತೆರೆದು ಮುನ್ನಚ್ಚರಿಕೆ ಕ್ರಮವಹಿಸಿ ಗ್ರಾಹಕರಿಗೆ ವಸ್ತುಗಳನ್ನು ನೀಡಬೇಕು
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಮೇ 6 :
ಲಾಕ್‍ಡೌನ್ ಸಡಿಲಿಕೆಯಾಗಿದ್ದು, ಗ್ರಾಮದ ಅಂಗಡಿ-ಮುಂಗಟ್ಟು ಮಾಲೀಕರು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಅಂಗಡಿ-ಮುಂಗಟ್ಟುಗಳ ಬಾಗಿಲು ತೆರೆದು ಮುನ್ನಚ್ಚರಿಕೆ ಕ್ರಮಗಳಂತೆ ಜಾಗೃತಿ ವಹಿಸಿ ಗ್ರಾಹಕರಿಗೆ ವಸ್ತುಗಳನ್ನು ಕೂಡಬೇಕು. ಹಣ್ಣು, ತರಕಾರಿ ಮಾರಾಟಗಾರರು ಮನೆ ಮನೆಗೆ ಹೋಗಿ ವಿತರಿಸಬೇಕು ಎಂದು ಕುಲಗೋಡ ಪೊಲೀಸ್ ಠಾಣೆಯ ಬೆಟಗೇರಿ ಗ್ರಾಮದ ಬೀಟ್ ಪೊಲೀಸ್ ಪೇದೆ ಬಿ.ಬಿ.ಬಿರಾದಾರ ಹೇಳಿದರು.
ಗ್ರಾಮದ ಗ್ರಾಮ ಪಂಚಾಯಿತಿದವರು ಬುಧವಾರ ಮೇ.6 ರಂದು ಸ್ಥಳೀಯ ಕಿರಾಣಿ ಅಂಗಡಿಗಳ ಮಾಲೀಕರಿಗೆ ಲಾಕ್‍ಡೌನ್ ಸಡಿಲಿಕೆ ನೀತಿ-ನಿಯಮಗಳ ಕುರಿತು ನೋಟಿಸ್ ವಿತರಿಸಿ ಮಾತನಾಡಿ, ಯಾರಾದರೂ ಬೇಕಾಬಿಟ್ಟಿಯಾಗಿ ತಿರುಗುವುದು, ದ್ವಿಚಕ್ರ ವಾಹನಗಳ ಮೇಲೆ ಸುತ್ತಾಡುವವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು. ಪ್ರತಿಯೊಬ್ಬರೂ ಮನೆಯಿಂದ ಹೊರಬರುವಾಗ ಮುಖಕ್ಕೆ ತಪ್ಪದೇ ಮಾಸ್ಕ್ ಧರಿಸಬೇಕು. ಇಲ್ಲವಾದರೆ 100ರೂ.ಗಳ ದಂಡ ವಿಧಿಸಲಾಗುವುದು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದರು.
ಗ್ರಾಪಂ ಪಿಡಿಒ ಎಚ್.ಎನ್.ಬಾವಿಕಟ್ಟಿ ಅವರು ಮಾತನಾಡಿ, ಸದ್ಯ ಲಾಕ್‍ಡೌನ್ ಸಡಿಲಿಕೆಯಾಗಿದೆ. ಕರೊನಾ ಸಂಪೂರ್ಣ ನಿವಾರಣೆಯಾಗಿಲ್ಲ, ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಅನುಸರಿಸಬೇಕು. ಪ್ರತಿ ರವಿವಾರ ಬೆಟಗೇರಿ ಗ್ರಾಮದಲ್ಲಿ ಸಂತೆ ನಡೆಯುತ್ತಿತ್ತು. ಲಾಕ್‍ಡೌನ್ ಹಿನ್ನಲೆಯಲ್ಲಿ ಇನ್ನೂ ಹಲವು ರವಿವಾರ ಸಂತೆ ಸಂಪೂರ್ಣ ರದ್ದುಗೊಳಿಸಲಾಗಿದೆ. ಸುತ್ತಲಿನ ಗ್ರಾಮದ ಜನರು ಸಂತೆಗೆ ಬರಕೂಡದು ಎಂದು ತಿಳಿಸಿದ್ದಾರೆ.
ಸ್ಥಳೀಯ ಗ್ರಾಮ ಪಂಚಾಯಿತಿ ಸಿಬ್ಬಂದಿಯವರು ಗ್ರಾಮದ ಕಿರಾಣಿ ಅಂಗಡಿ-ಮುಂಗಟ್ಟುದಾರರ ಅಂಗಡಿಗಳಿಗೆ ತೆರಳಿ ಲಾಕ್‍ಡೌನ್ ಸಡಿಲಿಕೆ ನೀತಿ-ನಿಯಮಗಳ ಕುರಿತು ನೋಟಿಸ್ ವಿತರಿಸಿದರು.
ಈ ವೇಳೆ ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ, ಗ್ರಾಮಲೆಕ್ಕಾಧಿಕಾರಿ ಜೆ.ಎಂ.ನದಾಫ್, ಪರಶುರಾಮ ಇಟಗೌಡ್ರ, ಗೌಡಪ್ಪ ಮಾಳೇದ, ಸುರೇಶ ಬಾಣಸಿ, ಈರಣ್ಣ ದಂಡಿನ, ಶಿವಾನಂದ ಐದುಡ್ಡಿ, ವಿಠಲ ಚಂದರಗಿ, ಚನ್ನಪ್ಪ ದಂಡಿನ, ಸ್ಥಳೀಯ ಕಿರಾಣಿ ಅಂಗಡಿ ಮಾಲೀಕರು, ಗ್ರಾಪಂ ಸಿಬ್ಬಂದಿ ಇತರರು ಇದ್ದರು.