RNI NO. KARKAN/2006/27779|Thursday, October 16, 2025
You are here: Home » breaking news » ಗೋಕಾಕ:ಆರನೇಯ ಭಾರಿ ಅದೃಷ್ಠ ಪರೀಕ್ಷೆ : ಶುಭಗಳಿಗೆಯಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ರಮೇಶ ನಾಮಪತ್ರ

ಗೋಕಾಕ:ಆರನೇಯ ಭಾರಿ ಅದೃಷ್ಠ ಪರೀಕ್ಷೆ : ಶುಭಗಳಿಗೆಯಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ರಮೇಶ ನಾಮಪತ್ರ 

ಆರನೇಯ ಭಾರಿ ಅದೃಷ್ಠ ಪರೀಕ್ಷೆ : ಶುಭಗಳಿಗೆಯಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ರಮೇಶ ನಾಮಪತ್ರ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 18 :

 

ಸತತ ಐದು ಭಾರಿ ಗೋಕಾಕ ಮತಕ್ಷೇತ್ರದ ಶಾಸಕರಾಗಿ ಆಯ್ಕೆಯಾಗುತ್ತಿರುವ ರಮೇಶ ಜಾರಕಿಹೊಳಿ ಅವರು ಸೋಮವಾರ ಮುಂಜಾನೆ ಶುಭಗಳಿಗೆಯಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಆರನೇಯ ಭಾರಿ ತಮ್ಮ ನಾಮಪತ್ರ ಸಲ್ಲಿಸಿದರು .

ತಮ್ಮ ಸಹೋದರ ಬಾಲಚಂದ್ರ ಜಾರಕಿಹೊಳಿ, ಕೇಂದ್ರ ಸಚಿವ ಸುರೇಶ ಅಂಗಡಿ , ಕಿರಿಯ ಮಗ ಅಮರನಾಥ ಜಾರಕಿಹೊಳಿ ಮತ್ತು ಬೇರಳೆಣಿಕೆ ಬೆಂಬಲರೊಂದಿಗೆ ಇಲ್ಲಿಯ ಮಿನಿ ವಿಧಾನಸೌದ ಕ್ಕೆ ಆಗಮಿಸಿದ ರಮೇಶ ಶುಭ ಮೂಹೂರ್ತದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು

ಮೂಹರ್ತ ಪ್ರಕಾರ ಮುಂಜಾನೆ ಸಾಂಕೇತಿಕವಾಗಿ ಮೂರು ಜೊತೆ ನಾಮಪತ್ರ ಸಲ್ಲಿಸಿರುವ ರಮೇಶ ಮಧ್ಯಾಹ್ನ 2 ಘಂಟೆಗೆ ಅಪಾರ ಪ್ರಮಾಣದ ಬೆಂಬಲಿಗರೊಂದಿಗೆ ಮತ್ತೋಮ್ಮೆ ನಾಮಪತ್ರ ಸಲಿಸಲಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ ಜಾರಕಿಹೊಳಿ ಶುಭ ಮೂಹರ್ತದಲ್ಲಿ ಕಾನೂನಿನ ಪ್ರಕಾರ ನಾಮಪತ್ರ ಸಲ್ಲಿಸಲಾಗಿದೆ ಮಧ್ಯಾಹ್ನ ಬೃಹತ್ ಪ್ರಮಾಣದ ಬೆಂಬಲಿಗರೊಂದಿಗೆ ಬಂದು ಮತ್ತೋಮ್ಮೆ ನಾಮಪತ್ರ ಸಲ್ಲಿಸಲಾಗುವದು ಎಂದು ಹೇಳಿದರು
ರಮೇಶ ಜಾರಕಿಹೊಳಿ ಅವರಿಗೆ ನಗರ ಬಿಜೆಪಿ ಅಧ್ಯಕ್ಷ ಶಶಿಧರ ದೆಮಶೇಟ್ಟಿ , ಎಸ್ ಎ ಕೋತವಾಲ ಸಾಥ್ ನೀಡಿದರು

Related posts: