RNI NO. KARKAN/2006/27779|Thursday, August 7, 2025
You are here: Home » breaking news » ಗೋಕಾಕ: ಗಡಿ ಭಾಗದ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡೆಸಲು ಕರವೇ ಕಂಕಣಬದ್ದವಾಗಿದೆ : ಬಸವರಾಜ ಖಾನಪ್ಪನವರ

ಗೋಕಾಕ: ಗಡಿ ಭಾಗದ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡೆಸಲು ಕರವೇ ಕಂಕಣಬದ್ದವಾಗಿದೆ : ಬಸವರಾಜ ಖಾನಪ್ಪನವರ 

ಗಡಿ ಭಾಗದ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡೆಸಲು ಕರವೇ ಕಂಕಣಬದ್ದವಾಗಿದೆ : ಬಸವರಾಜ ಖಾನಪ್ಪನವರ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 6 :

 
ಗಡಿ ಭಾಗದ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡೆಸಲು ಕರವೇ ಕಂಕಣಬದ್ದವಾಗಿದೆ ಎಂದು ಕರವೇ ಮುಖಂಡ ಬಸವರಾಜ ಖಾನಪ್ಪನವರ ಹೇಳಿದರು

ಗುರುವಾರದಂದು ಕರವೇ ಮುಖಂಡ ಖಾನಪ್ಪನವರ ಅವರ ಹುಟ್ಟು ಹಬ್ಬದ ಪ್ರಯುಕ್ತ ನಿಪ್ಪಾಣಿ ನಗರದ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನಂ 2 ಗೆ ಸುಣ್ಣ – ಬಣ್ಣ ಮಾಡಿ 1 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ನೋಟ್ ಬುಕ್ಕ ಮತ್ತು ಪೆನ್ನಗಳನ್ನು ವಿತರಿಸಿ ಅವರು ಮಾತನಾಡಿದರು .

ಗಡಿ ಭಾಗದಲ್ಲಿರುವ ಶಾಲೆಗಳನ್ನು ಅಭಿವೃದ್ಧಿ ಪಡೆಸುವ ನಿಟ್ಟಿನಲ್ಲಿ ಕರವೇ ಗೋಕಾಕ ತಾಲೂಕಾ ಘಟಕದ ವತಿಯಿಂದ ” ಕರವೇ ನಡಿಗೆ ಗಡಿ ಭಾಗದ ಶಾಲೆಗಳ ಕಡೆಗೆ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಹಂತ ಹಂತವಾಗಿ ನಿಪ್ಪಾಣಿ ಮತ್ತು ಚಿಕ್ಕೋಡಿ ಗಡಿ ಭಾಗಗಳಲ್ಲಿ ಅವಸಾನದ ಅಂಚಿನಲ್ಲಿರುವ ಶಾಲೆಗಳನ್ನು ಗುರುತಿಸಿ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಶಾಲೆಗಳಿಗೆ ಸುಣ್ಣ – ಬಣ್ಣ ಹಚ್ಚುವ ಹಾಗೂ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಜಟಿಲ ಸಮಸ್ಯೆ ಇರುವ ಶಾಲೆಗಳನ್ನು ಅಭಿವೃದ್ಧಿ ಪಡೆಸಲು ಸರಕಾರದ ಗಮನ ಹರಿಸಲಾಗುವದು.

ಗಡಿ ಭಾಗದಲ್ಲಿ ಕನ್ನಡ ವಾತಾವರಣ ನಿರ್ಮಿಸುವಲ್ಲಿ ಶಿಕ್ಷಕರು ಮುಂದೆ ಬಂದು ಮಕ್ಕಳಲ್ಲಿ ಇಚ್ಚಾಶಕ್ತಿ ಹೆಚ್ಚಿಸುವಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನ್ನಡ ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿ ಶಾಂತಾರಾಮ ಜೋಗಳೆ, ಪತ್ರಕರ್ತ ಸಾದಿಕ ಹಲ್ಯಾಳ, ಶಾಲೆಯ ಸಿಬ್ಬಂದಿಗಳಾದ ಶ್ರೀಮತಿ ಜೆ.ಆಯ್.ಕಪಲಿ , ಶ್ರೀಮತಿ ಎಸ.ಎಲ್.ಬಾಣಸಿ , ಶ್ರೀಮತಿ ಗಾಯತ್ರಿ ಪ್ರಭಾಳಕರ, ಶ್ರೀಮತಿ ವಿದ್ಯಾ ಪೋತದಾರ, ಶ್ರೀಮತಿ ಎ.ಆರ್.ಶಿರಾಳಕರ, ಎಸ್.ಡಿ.ಎಂ.ಸಿ ಸದಸ್ಯೆಯರಾದ ಶೋಭಾ ತಾರಳೆ, ಅಶ್ವಿನಿ ಗುರವ, ಸಾಕ್ಷಿ ಹಾಗರಗಿ, ಮುಖಂಡರಾದ ಮುಗುಟ ಪೈಲವಾನ, ಮಹಾದೇವ ಮಕ್ಕಳಗೇರಿ, ಮಲ್ಲು ಸಂಪಗಾರ, ರಮಜಾನ ಅಂಡಗಿ ಉಪಸ್ಥಿತರಿದ್ದರು.

Related posts: