ಗೋಕಾಕ:ಅ.31 ಮತ್ತು ಶುಕ್ರವಾರ ನ.1 ರಂದು ಲಕ್ಷ್ಮೀದೇವಿ ದೇವರ ಜಾತ್ರಾಮಹೋತ್ಸವ

ಅ.31 ಮತ್ತು ಶುಕ್ರವಾರ ನ.1 ರಂದು ಲಕ್ಷ್ಮೀದೇವಿ ದೇವರ ಜಾತ್ರಾಮಹೋತ್ಸವ
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಅ 29 :
ಗ್ರಾಮದ ಲಕ್ಷ್ಮೀದೇವಿ ದೇವರ ಜಾತ್ರಾಮಹೋತ್ಸವ ಗುರುವಾರ ಅ.31 ಮತ್ತು ಶುಕ್ರವಾರ ನ.1 ರಂದು ನಡೆಯಲಿದೆ. ಗುರುವಾರ ಅ.31 ರಂದು ಬೆಳಗ್ಗೆ, ಸಂಜೆ 6 ಗಂಟೆಗೆ ಇಲ್ಲಿಯ ಲಕ್ಷ್ಮೀದೇವಿಯ ಗದ್ಗುಗೆಗೆ ಪೂಜೆ, ನೈವೇದ್ಯ ಸಮರ್ಪಿಸುವ, ದೇವರನ್ನು ಗದ್ಗುಗೆಗೊಳಿಸುವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಶುಕ್ರವಾರ ನ.1ರಂದು ಬೆಳಗ್ಗೆ 6 ಗಂಟೆಗೆ ಲಕ್ಷ್ಮೀದೇವಿಯ ಗದ್ಗುಗೆಗೆ ಮಹಾಪೂಜೆ, ಮಹಾಭಿಷೇಕ, ನೈವೇದ್ಯ ಸಮರ್ಪಿಸುವ, ಲಕ್ಷ್ಮೀದೇವಿಯ ಆರಾಧನೆ, ಸುಮಂಗಲೆಯರಿಂದ ಶ್ರೀದೇವಿಗೆ ಉಡಿ ತುಂಬುವುದು, ವಿಶೇಷ ಪೂಜೆ, ದೀಪೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪುರ ಜನರಿಂದ ನಡೆದ ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಜರುಗಿ, ಮಹಾಪ್ರಸಾದದ ನಂತರ ಜಾತ್ರಾಮಹೋತ್ಸವ ಸಮಾರೊಪಗೊಳ್ಳಲಿದೆ.
ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ರಾಜಕೀಯ ಮುಖಂಡರು, ಗಣ್ಯರು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಗ್ರಾಮದ ಲಕ್ಷ್ಮೀದೇವಿ ದೇವರ ಜಾತ್ರಾಮಹೋತ್ಸವ ಸಮಿತಿ ಸದಸ್ಯರು, ಅಪಾರ ಭಕ್ತರು ಜಾತ್ರಾಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸ್ಥಳೀಯ ಲಕ್ಷ್ಮೀದೇವಿ ಜಾತ್ರಾಮಹೋತ್ಸವ ಆಚರಣಾ ಸಮಿತಿ ಸಂಚಾಲಕ ರಾಮಣ್ಣ ಬಳಿಗಾರ ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.