RNI NO. KARKAN/2006/27779|Saturday, April 25, 2026
You are here: Home » breaking news » ಗೋಕಾಕ:ಬೆಟಗೇರಿ ಚೈತನ್ಯ ಸೊಸಾಯಿಟಿ ಶಾಖೆಗೆ 17.05 ಲಕ್ಷ ರೂಪಾಯಿ ಲಾಭ

ಗೋಕಾಕ:ಬೆಟಗೇರಿ ಚೈತನ್ಯ ಸೊಸಾಯಿಟಿ ಶಾಖೆಗೆ 17.05 ಲಕ್ಷ ರೂಪಾಯಿ ಲಾಭ 

ಬೆಟಗೇರಿ ಚೈತನ್ಯ ಸೊಸಾಯಿಟಿ ಶಾಖೆಗೆ 17.05 ಲಕ್ಷ ರೂಪಾಯಿ ಲಾಭ

 

 
ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಸೆ 9 :

 

 
ಗ್ರಾಮದ ಚೈತನ್ಯ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಶಾಖೆಯ ಸನ್2018-19ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಮಹಾಸಭೆ ಶನಿವಾರ ಸೆ.7ರಂದು ನಡೆಯಿತು.
ಪ್ರಧಾನ ಕಛೇರಿಯ ಅಧ್ಯಕ್ಷ ತಮ್ಮಣ್ಣ ಕೆಂಚರಡ್ಡಿ ಮಾತನಾಡಿ, ಗೋಕಾಕ ತಾಲೂಕಿನ ಬೆಟಗೇರಿ ಶಾಖೆಯು ಸನ್2018-19ನೇ ಸಾಲಿನಲ್ಲಿ 6,41,12,662 ರೂ ಒಟ್ಟು ದುಡಿಯುವ ಬಂಡವಾಳ ಹೊಂದಿ, ಈಗ 17,05,882 ರೂ ನಿವ್ವಳ ಲಾಭ ಗಳಿಸಿದೆ. ಶೇರು ಸದಸ್ಯರಿಗೆ ಶೇ12ರಷ್ಟು ಡಿವ್ಹಿಡೆಂಡ್ ವಿತರಿಸಲಾಗುವದು ಎಂದು ತಿಳಿಸಿದರು.
ಚೈತನ್ಯ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಪ್ರಧಾನ ಕಛೇರಿ ಹಾಗೂ ವಿವಿಧ ಶಾಖಾ ಸೊಸಾಯಟಿಗಳ ಶೇರ ಸದಸ್ಯರು, ಗ್ರಾಹಕರು, ನಾಗರಿಕರ ಜೊತೆ ಆಡಳಿತ ಮಂಡಳಿ ಸದಸ್ಯರು ಸೊಸಾಯಿಟಿಯ ಸಮಗ್ರ ಪ್ರಗತಿ, ಸೊಸಾಯಿಟಿಯಿಂದ ದೊರಕುವ ವಿವಿಧ ಸಾಲ, ಸೌಲಭ್ಯಗಳ ಕುರಿತು ಚರ್ಚಿಸಿದರು. ಮೂಡಲಗಿಯ ಶ್ರೀಪಾದಬೋಧ ಮಹಾಸ್ವಾಮಿಜಿ ವಾರ್ಷಿಕ ಮಹಾಸಭೆಯ ಸಾನಿಧ್ಯ ವಹಿಸಿದ್ದರು. ನಿವೃತ್ತ ಶಿಕ್ಷಕರನ್ನು, ಗಣ್ಯರನ್ನು, ವಿವಿಧ ವಲಯದಲ್ಲಿ ಸಾಧನೆಗೈದವರನ್ನು ಸೊಸಾಯಿಟಿ ವತಿಯಿಂದ ಸನ್ಮಾನಿಸಲಾಯಿತು.
ಈ ವೇಳೆ ಸಿದ್ದಲಿಂಗಪ್ಪ ಹೊರಟ್ಟಿ, ಹನುಮಂತ ಗಾಣಗೇರ, ಪ್ರಧಾನ ವ್ಯವಸ್ಥಾಪಕ ಜಿ.ಎಸ್.ಬಿಜಗುಪ್ಪಿ, ಬೆಟಗೇರಿ ಶಾಖಾ ಕಾರ್ಯದರ್ಶಿ ವಿ.ಆರ್.ನೇಮಗೌಡರ, ಸಣ್ಣಪ್ಪ ಐದುಡ್ಡಿ, ಮೆಳೆಪ್ಪ ಮೇಳೆಣ್ಣವರ ಸೇರಿದಂತೆ ಚೈತನ್ಯ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಪ್ರಧಾನ ಕಛೇರಿ ಹಾಗೂ ವಿವಿಧ ಶಾಖಾ ಸೊಸಾಯಟಿಗಳ ಆಡಳಿತ ಮಂಡಳಿ ಸದಸ್ಯರು, ಸಲಹಾ ಸಮಿತಿ ಸದಸ್ಯರು, ಶೇರ ಸದಸ್ಯರು, ಗ್ರಾಹಕರು, ಪಿಗ್ಮಿ ಸಂಗ್ರಹಕಾರರು, ಸಿಬ್ಬಂದಿ ವರ್ಗ, ಇತರರು ಇದ್ದರು.

Related posts: