ಮೂಡಲಗಿ:ಶಿಕ್ಷಕ ರಮೇಶ ಅಂಗಡಿ ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ : ಡಾ. ರಾಜೇಂದ್ರ ಸಣ್ಣಕ್ಕಿ

ಶಿಕ್ಷಕ ರಮೇಶ ಅಂಗಡಿ ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ : ಡಾ. ರಾಜೇಂದ್ರ ಸಣ್ಣಕ್ಕಿ
ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಸೆ 4 :
ಕೌಜಲಗಿಯ ದಿ.ವಾಯ್.ಎಲ್ ಸಣ್ಣಕ್ಕಿ ಮೆಮೋರಿಯಲ್ ಟ್ರಸ್ಟವತಿಯಿಂದ ಅರಭಾಂವಿಯ ಸತ್ತಿಗೇರಿ ತೋಟದ ಶಾಲೆಯ ಶಿಕ್ಷಕ ರಮೇಶ ಅಂಗಡಿಯವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ-2019 ಗೆ ಆಯ್ಕೆ ಮಾಡಲಾಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನ ಮಂಡಳಿ ನಿರ್ಧೇಶಕ ಡಾ. ರಾಜೇಂದ್ರ ಸಣ್ಣಕ್ಕಿ ತಿಳಿಸಿದ್ದಾರೆ.
ಸೆ. 5 ರಂದು ಮೂಡಲಗಿ ವಲಯದ ದುರದುಂಡಿಯಲ್ಲಿ ಜರುಗುವ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಹಾಗೂ ಸನ್ಮಾನ ಮಾಡಲಾಗುವದು. ಶೈಕ್ಷಣಿಕ ಕ್ಷೇತ್ರದಲ್ಲಿ ವಿನೂತನ ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಕ್ಕಳ ಕಲಿಕಾ ಪ್ರಗತಿಯಲ್ಲಿ ಕಾರ್ಯನಿರ್ವಹಿಸಿದ ಪ್ರಯುಕ್ತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರತಿ ವರ್ಷವು ಇಚಿತಹ ರಚನಾತ್ಮಕ ಶಿಕ್ಷಕರನ್ನು ಗುರುತಿಸುವ ಮುಖೇನ ಶಿಕ್ಷಕರಲ್ಲಿಯ ಗುಣಾತ್ಮಕ ಶಿಕ್ಷಣವನ್ನು ಉತ್ತೇಜಿಸುವದಾಗಿದೆ ಎಂದು ತಿಳಿಸಿದ್ದಾರೆ.