ಗೋಕಾಕ:ಸಮಾಜಿಕ ಜವಾಬ್ದಾರಿಯನ್ನು ನೆನಪಿಸುವ ಕಾರ್ಯ ರೋಟರಿ ಸಂಸ್ಥೆ ಮಾಡುತ್ತಿದೆ : ಸಂಸದ ಈರಣ್ಣ ಕಡಾಡಿ

ಸಮಾಜಿಕ ಜವಾಬ್ದಾರಿಯನ್ನು ನೆನಪಿಸುವ ಕಾರ್ಯ ರೋಟರಿ ಸಂಸ್ಥೆ ಮಾಡುತ್ತಿದೆ : ಸಂಸದ ಈರಣ್ಣ ಕಡಾಡಿ
ಗೋಕಾಕ ಜು 13 : ಮನುಷ್ಯ ತಮ್ಮ ದೈನಂದಿನ ಕಾರ್ಯದಲ್ಲಿ ಸಮಾಜಿಕ ಜವಾಬ್ದಾರಿಯನ್ನು ಮರೆತಿದ್ದಾನೆ. ಇದನ್ನು ನೆನಪಿಸುವ ಕಾರ್ಯ ರೋಟರಿ ಸಂಸ್ಥೆ ಮಾಡುತ್ತಿದೆ ಎಂದು ರಾಜಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ರವಿವಾರದಂದು ನಗರದ ರೋಟರಿ ರಕ್ತ ಭಂಡಾರ ಸಭಾಂಗಣದಲ್ಲಿ ರೋಟರಿ ಸಂಸ್ಥೆ, ಗೋಕಾಕ ಇನ್ಞರವ್ಹೀಲ್ ಸಂಸ್ಥೆ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 2025-26ನೇ ಸಾಲಿನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೈಯಕ್ತಿಕ ಬೇಕು ಬೇಡಿಕೆಗಳ ನಡುವೆ ಮಾನವ ಸಾಮಾಜಿಕ ಜವಾಬ್ದಾರಿಯನ್ನು ಮರೆತಿರುವ ಸಂದರ್ಭದಲ್ಲಿ ರೋಟರಿ ಸಂಸ್ಥೆ ಸಮಾಜಕ್ಕೆ ತಮ್ಮ ಜವಾಬ್ದಾರಿ ಏನು ಎಂಬುದನ್ನು ತೋರಿಸುವ ಬಹುದೊಡ್ಡ ಕಾರ್ಯಮಾಡುತ್ತಿದೆ. ಸೇವೆ ಅಂತಾ ಬಂದಾಗ ದೇಶದಲ್ಲಿ ದೊಡ್ಡ ಸೇವಾ ಸಂಸ್ಥೆ ಅಂದರೆ ರೋಟರಿ ಸಂಸ್ಥೆ. ಈ ಸಂಸ್ಥೆಯಲ್ಲಿ ಗೋಕಾಕ ನಗರದಲ್ಲಿ 1969 ರಿಂದ ನಿರಂತರ ಸಮಾಜ ಸೇವೆ ಮಾಡುತ್ತ ಬಂದು. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಹಿಂದುಳಿದವರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಅಧಿಕಾರ ಹಸ್ತಾಂತರಿಸಿ ಮಾತನಾಡಿದ ಅಧಿಕಾರ ಹಸ್ತಾಂತರ ಅಧಿಕಾರಿ ರಾಜಶೇಖರ ತೆಲಗಂವ ನೂತನ ಅಧ್ಯಕ್ಷರು ರೋಟರಿ ಮೌಲ್ಯಗಳನ್ನು ಅರಿತು ಸದಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪಣತೊಡಬೇಕು ಮತ್ತು ಉತ್ತಮ ಕೆಲಸಗಳನ್ನು ಮಾಡಬೇಕು ಎಂದ ಅವರು ರೋಟರಿಯಲ್ಲಿ ಗುರುತಿಸಿಕೊಂಡವರು ಸಮಾಜದೊಂದಿಗೆ ಬೆರೆತು ಜನರ ಕಷ್ಟಗಳಿಗೆ ಸ್ಪಂದಿಸಬೇಕು ಮತ್ತು ನೂತನ ಪದಾಧಿಕಾರಿಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಘೋಡಗೇರಿಯ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ವಹಿಸಿದ್ದರು.
ಇದೇ ಸಂದರ್ಭದಲ್ಲಿ ಇನ್ನರವ್ಹಿಲ್ ಸಂಸ್ಥೆಯ ಅಧ್ಯಕ್ಷೆಯಾಗಿ ಶ್ರೀಮತಿ ಅನುಪಾ ಕೌಶಿಕ್, ಕಾರ್ಯದರ್ಶಿಯಾಗಿ ಶ್ರೀಮತಿ ಗೀರಿಜಾ ಮುನ್ನೋಳಿಮಠ, ಖಜಾಂಯಾಗಿ ಸುಮನ ಕಲ್ಯಾಣಶೆಟ್ಟಿ ಇವರಿಗೆ ಶಾಲಿನಿ ಚೌಗಲೆ ಅವರು ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ. ರೋಟರಿ ಸಹಾಯಕ ಪ್ರಾಂಥಪಾಲ ಮೇಘರಾಜ ಪರಮಾರ, ನೂತನ ಅಧ್ಯಕ್ಷ ಗಿರೀಶ ಝಂವರ, ಕಾರ್ಯದರ್ಶಿ ಬಸವರಾಜ ಹೂಳ್ಳೇರ, ಖಜಾಂಚಿ ವಿಶ್ವನಾಥ್ ಕಡಕೋಳ, ನಿಕಟಪೂರ್ವ ಅಧ್ಯಕ್ಷ ಡಾ.ಸಿದ್ದಣ್ಣ ಕಮತ್, ಕಾರ್ಯದರ್ಶಿ ರಾಜಶೇಖರ್ ಮುನ್ನೋಳಿಮಠ, ಜಯಾ ಕಮತ್ ಇದ್ದರು.