RNI NO. KARKAN/2006/27779|Friday, March 20, 2026
You are here: Home » breaking news » ಗೋಕಾಕ:ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿ ಅವರಿಂದ ಸಂತ್ರಸ್ಥರಿಗೆ ಆಹಾರ ಧಾನ್ಯ ವಿತರಣೆ

ಗೋಕಾಕ:ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿ ಅವರಿಂದ ಸಂತ್ರಸ್ಥರಿಗೆ ಆಹಾರ ಧಾನ್ಯ ವಿತರಣೆ 

ಗ್ರಾಮದಲ್ಲಿ ಬಂದಿಳಿದಿದ್ದ ಸಂತ್ರಸ್ಥರಿಗೆ ಭಾಗೋಜಿಕೊಪ್ಪದ ಡಾ. ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿ ಅವರು ಸಾಂತ್ವನ ಹೇಳಿದರು.

ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿ ಅವರಿಂದ ಸಂತ್ರಸ್ಥರಿಗೆ ಆಹಾರ ಧಾನ್ಯ ವಿತರಣೆ

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ  (ಬೆಟಗೇರಿ) ಅ 11 :

 

 

ಒಂದು ವಾರದಿಂದ ಹಗಲಿರುಳು ನಿರಂತರ ಸುರಿದ ಮಳೆ ಹಾಗೂ ಡ್ಯಾಂಗಳಿಂದ ಹೊರಗೆ ಬೀಡುತ್ತಿರುವ ಭಾರಿ ಪ್ರಮಾಣದ ನೀರಿನ ಮಹಾಪ್ರವಾಹದಿಂದ ಕಳೆದ ಮೂರ್ನಾಲ್ಕು ದಿನಗಳಿಂದ ಗೋಕಾಕ-ಮೂಡಲಗಿ ತಾಲೂಕಿನ ಘಟಪ್ರಭಾ ನದಿ ಪಾತ್ರದ ಹಲವಾರು ಹಳ್ಳಿಗಳು ಜಲಾವೃತಗೊಂಡ ಹಿನ್ನಲೆಯಲ್ಲಿ ಘಟಪ್ರಭಾ ನದಿ ಪಾತ್ರದ ಹಳ್ಳಿಗಳ ಹಲವು ಕುಟುಂಬಗಳು ನಿರಾಶ್ರಿತರಾಗಿ ಬೆಟಗೇರಿ, ತಪಸಿ ಗ್ರಾಮದ ವಿವಿಧಡೆ, ಉದಗಟ್ಟಿ ಕ್ರಾಸನಲ್ಲಿ ಬಂದಿಳಿದಿದ್ದ ಸಂತ್ರಸ್ಥರಿಗೆ ರವಿವಾರ ಆ.11 ರಂದು ಭಾಗೋಜಿಕೊಪ್ಪದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿ ಅವರು ಸಾಂತ್ವನ ಹೇಳಿ, ಮಕ್ಕಳ ಹಾಗೂ ನಿರಾಶ್ರಿತರ ಆರೋಗ್ಯ, ಊಟ, ವಸತಿ ಸೌಲಭ್ಯ ಕುರಿತು ವಿಚಾರಿಸಿ ಅವರಿಗೆ ಧೈರ್ಯ ತುಂಬಿ, ಸಂತ್ರಸ್ಥರಿಗೆ ಆಹಾರ ಧಾನ್ಯ ನೀಡಿದರು.
ಈ ವೇಳೆ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ, ಶಿವಾಜಿ ನೀಲಣ್ಣವರ, ರಾಮಣ್ಣ ಬಳಿಗಾರ, ಚಂದ್ರಶೇಖರ ನೀಲಣ್ಣವರ, ರವಿ ಉಪ್ಪಾರ, ಮಲ್ಹಾರಿ ಪೋಳ, ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಸದಸ್ಯರು, ಸ್ಥಳೀಯ ಹಿರಿಯರು, ಗಣ್ಯರು ಸೇರಿದಂತೆ ಸಂತ್ರಸ್ಥ ಹಿರಿಯರು, ಮಹಿಳೆಯರು, ಮಕ್ಕಳು, ಇತರರು ಇದ್ದರು.

Related posts: