RNI NO. KARKAN/2006/27779|Sunday, December 6, 2020
You are here: Home » breaking news » ಗೋಕಾಕ:ಪುಸ್ತಕಗಳು ನಮಗೆ ದಾರಿದೀಪವಾಗಿವೆ : ಬಸವಣ್ಣೆಪ್ಪ ಕಂಬಾರ

ಗೋಕಾಕ:ಪುಸ್ತಕಗಳು ನಮಗೆ ದಾರಿದೀಪವಾಗಿವೆ : ಬಸವಣ್ಣೆಪ್ಪ ಕಂಬಾರ 

ಪುಸ್ತಕಗಳು ನಮಗೆ ದಾರಿದೀಪವಾಗಿವೆ : ಬಸವಣ್ಣೆಪ್ಪ ಕಂಬಾರ

ಗೋಕಾಕ ಜ 30: ಸಂಸ್ಕಂತಿಯನ್ನು ಮುಂದಿನ ಪರಂಪರೆಗೆ ಸಾಗಿಸುವದರಲ್ಲಿ ಪುಸ್ತಕಗಳು ನಮಗೆ ದಾರಿದೀಪವಾಗಿವೆ. ಪುಸ್ತಕಗಳಿಗೆ ಆತ್ಮವಿದೆ. ಕಥೆಗಾರ ತನ್ನ ಕಥೆಯ ವಸ್ತುವಿನಲ್ಲಿ ಜೀವ ತುಂಬಿರುತ್ತಾನೆ. ಒಂದು ಕಥೆ ಶ್ರೇಷ್ಠವೆನಿಸಬೇಕಾದರೆ ಹೆಚ್ಚಿನ ಓದು, ಆಸಕ್ತಿ, ಸಾಂದ್ರತೆ, ಪಾತ್ರಗಳ ವಿಂಗಡನೆ, ಭಾಷೆಯ ಬಳಕೆ ಅದರಲ್ಲಿಯೂ ಪ್ರಾಧೇಶಿಕ ಭಾಷೆಗಳ ಸೊಗಡು ಕಥೆಯ ಮೆರಗನ್ನು ಹೆಚ್ಚಿಸುತ್ತದೆ. ಅದಕ್ಕೆ ಸ್ವಂತಿಕೆ ಎನ್ನುವುದು ಕಥೆಗಾರನ ಕಲೆಯಾಗಬೇಕೆಂದು ಹಾಗೂ ಕಥೆ ಬರೆಯುವ ತಂತ್ರ, ಕೌಶಲ್ಯಗಳನ್ನು ಪ್ರಯೋಗಿಸುವ ವಿಧಾನ ಸೃಜನ ಶಕ್ತಿಯಾಗಬೇಕೆಂದು ಉತ್ತರ ಕರ್ನಾಟಕದ ಉದಯೋನ್ಮುಕ ಕಥೆಗಾರ ಬಸವಣೆಪ್ಪ ಕಂಬಾರ ನುಡಿದರು.
ಅವರು ಕಲ್ಲೋಳಿಯ ಎಸ್. ಆರ್. ಇ. ಸಂಸ್ಥೆಯ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗದಿಂದ ಹಮ್ಮಿಕೊಂಡಿದ್ದ ‘ಬಸವಣ್ಣೆಪ್ಪ ಕಂಬಾರರ ಸರ್ಕಸ್ ಕಥೆಯ ಕುರಿತು ಮಾತು ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ತಮ್ಮ ಕಥೆಯ ವೈಶಿಷ್ಟ್ಯತೆಯನ್ನು ಹೇಳಿದರು. ಸಾಹಿತ್ಯವು ನಮ್ಮ ಬದುಕು ಕಟ್ಟಿಕೊಡುತ್ತದೆ. ನಿರಂತರ ಓದು ಪರಿಶ್ರಮದಿಂದ ತಮ್ಮ ಬದುಕನ್ನು ಕಟ್ಟಿಕೊಂಡು ಯಶಸ್ವಿಯಾಗಬೇಕೆಂದು ವಿದ್ಯಾರ್ಥಿಗಳಿಗೆ ಆಶಯ ನುಡಿಗಳನ್ನಾಡಿದರು.

ಅಧ್ಯಕ್ಷತೆ ವಹಿಸಿದ ಮಾತನಾಡಿದ ಪ್ರಾಚಾರ್ಯರ ಡಾ. ಸುರೇಶ ಹನಗಂಡಿ ಬೆಳಗಾವಿ ಜಿಲ್ಲೆಯು ಕವಿ-ಕಲಾವಿದ ಪುಂಗವರ ನಾಡು, ಜಿಲ್ಲೆಯಲ್ಲಿ ಪಂಡಿತ ಪರಂಪರೆ ಸಮೃದ್ದವಾಗಿ ಬೆಳದಿದೆ. ಅನೇಕ ವಿದ್ವಾಂಸರು ನಾಡಿಗೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಆದರೆ ಅವರ ಸಾಧನೆ ಗುರುತಿಸದಿರುವುದು ನಮ್ಮೇಲ್ಲರ ದೂರಾದೃಷ್ಟ. ಕಾದಂಬರಿ-ಕಥೆಗಳನ್ನು ಬರೆಯುವವರ ಸಂಖ್ಯೆ ವಿರಳವಾಗುತ್ತಿರುವ ಬಗ್ಗೆ ವಿಷಾದ ವ್ಯಕ್ತ ಪಡಿಸಿ, ಕಥೆಗಳಿಗೆ ಶ್ರೇಷ್ಠವಾದ ಮನ್ನಣೆಯಿದೆ ಎಂದರು
ಕಾರ್ಯಕ್ರಮದಲ್ಲಿ ಪ್ರೊ. ವಿ.ಎಸ್. ಮಾದಗೌಡರ, ಪ್ರೊ. ಕೆ. ಆರ್. ಡೋಣವಾಡ, ಪ್ರೊ. ಶಂಕರ ನಿಂಗನೂರ, ಶ್ರೀ ಬಿ. ಬಿ. ವಾಲಿ, ಪ್ರೊ. ಬಿ. ಎ. ದೇಸಾಯಿ ಉಪಸ್ತಿತರಿದ್ದರು. ಪ್ರೊ. ಕೆ. ಎಸ್. ಪರವ್ವಗೋಳ ನಿರೂಪಿಸಿದರು, ಪ್ರೊ. ಡಿ. ಎಸ್. ಹುಗ್ಗಿ ವಂದಿಸಿದರು.

Related posts: