ಘಟಪ್ರಭಾ:ವಿದ್ಯುತ್ ಬಳಕೆಯಲ್ಲಿ ಸುರಕ್ಷತೆಯ ಕುರಿತು ಜಾಗೃತಿ ಸಭೆ
ವಿದ್ಯುತ್ ಬಳಕೆಯಲ್ಲಿ ಸುರಕ್ಷತೆಯ ಕುರಿತು ಜಾಗೃತಿ ಸಭೆ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜು 22 :
ಹೆಸ್ಕಾಂ ಘಟಪ್ರಭಾ ಉಪ-ವಿಭಾಗ, ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿದ್ಯುತ್ ಬಳಕೆಯಲ್ಲಿ ಸುರಕ್ಷತೆಯ ಸಲಹೆಗಳು, ಉಳಿತಾಯದ ಕ್ರಮಗಳು, ಎಲ್.ಇ.ಡಿ ಬಳಕೆಯ ಪ್ರಯೋಜನಗಳು, ಸೌರಶಕ್ತಿ ಬಳಸುವುದು ಇತ್ಯಾದಿಗಳ ಬಗ್ಗೆ ಗ್ರಾಹಕರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಸೋಮವಾರಂದು ದಂಡಾಪೂರ ಹಾಗೂ ಮೇಲ್ಮಟ್ಟಿಯಲ್ಲಿ ಸಭೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ವಿದ್ಯುತ್ ಹೇಗೆ ಬಳಸಬೇಕು, ಎಲ್.ಇ.ಡಿ ಹಾಗೂ ಸೌರಶಕ್ತಿಯಿಂದ ವಿದ್ಯುತ್ ಉಳಿತಾಯ, ವಿದ್ಯುತ್‍ನಿಂದ ಆಗುವ ಅನಾಹುತ ಹಾಗೂ ಸುಲಭವಾಗಿ ಬಳಸುವ ವಿಧಾನಗಳ ಮಾಹಿತಿಯನ್ನು ಮನ ಮುಟ್ಟುವಂತೆ ವಿವರಿಸಿದರು. ಅಪಾಯವಾಗುವಂತ ಸಂದರ್ಭದಲ್ಲಿ ಹೆಸ್ಕಾಂ ಕಛೇರಿಗೆ ತಕ್ಷಣ ತಿಳಿಸಿದರೆ ನಮ್ಮ ನಿಗಮದ ಲೈನಮನ್ ಆಗಮಿಸಿ ಅಪಾಯವಾಗದಂತೆ ತಡೆಯುತ್ತಾರೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಎಮ್.ಎಸ್ ನಾಗನ್ನವರ ತಿಳಿಸಿದರು.
ವೇದಿಕೆಯ ಮೇಲೆ ಘಟಪ್ರಭಾ ಹೆಸ್ಕಾಂ ನಿಗಮದ ವಿಭಾಗಾಧಿಕಾರಿ ಪಿ.ಎನ್.ಬೆಳಗಾವಿ, ಮೆಲ್ಮಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧಕ್ಷರು.ಸದಸ್ಯರು ಇದ್ದರು. ಕಾರ್ಯಕ್ರಮದಲ್ಲಿ ನೂರಾರು ಗ್ರಾಹಕರು ಹಾಗೂ ರೈತರು ಸೇರಿದಂತೆ ಅನೇಕರು ಇದ್ದರು.
