RNI NO. KARKAN/2006/27779|Monday, June 16, 2025
You are here: Home » breaking news » ಖಾನಾಪುರ:ಲಿಂಗನಮಠದಲ್ಲಿ 1997ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನೆ

ಖಾನಾಪುರ:ಲಿಂಗನಮಠದಲ್ಲಿ 1997ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನೆ 

ಲಿಂಗನಮಠದಲ್ಲಿ 1997ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನೆ

 

 

ನಮ್ಮ ಬೆಳಗಾವಿ ಸುದ್ದಿ , ಖಾನಾಪುರ ಜೂ 23 :

 

 

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಶಿಕ್ಷಣ ಎಂಬುದು ಅತ್ಯದ್ಭುತವಾದ ಕಾಣಿಕೆ. ಅದನ್ನು ಪಡೆಯಲಿಚ್ಛಿಸುವ ವಿದ್ಯಾರ್ಥಿಗಳು ಮೊದಲಿಗೆ ನಯ, ವಿನಯ, ಭಕ್ತಿ, ಸಂಸ್ಕರಾರವನ್ನು ಗುರುವಿನಲ್ಲಿ ಕಲಿಯಬೇಕು ಅಂದಾಗ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಹೊರಹೊಮ್ಮ ಬಹುದೆಂದು ನಿವೃತ್ತ ಮುಖ್ಯೋಧ್ಯಾಪಕ ವಿ.ವಾಯ್.ಹತ್ತರಕಿ ಹೇಳಿದರು.

ತಾಲೂಕಿನ ಲಿಂಗನಮಠ ಗ್ರಾಮದ ಶ್ರೀ ಚನ್ನಬಸವೇಶ್ವರ ದೇವಸ್ಥಾನದಲ್ಲಿ 1997ನೇ ಸಾಲಿನ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳು ಶನಿವಾರದಂದು ಹಮ್ಮಿಕೊಂಡಂತಹ “ಗುರುವಂದನಾ ಕಾರ್ಯಕ್ರಮದಲ್ಲಿ” ಮುಖ್ಯಅತಿಥಿಯಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ 1990 ರಿಂದ 1997ರ ವರೆಗೆ ವಿದ್ಯೆಕಲಿಸಿದ ಗುರುಗಳು ಹಾಗೂ ಗುರುಮಾತೆಯರಿಗೆ ನಿವೃತ್ತ ಮುಖ್ಯೋಧ್ಯಾಪಕರಾದ ಶ್ರೀ ಎಸ್.ಹೆಚ್.ಪಾಟೀಲ, ಶ್ರೀ ವಿ.ವಾಯ್.ಹತ್ತರಕಿ, ಶ್ರೀ ಎನ್.ಸಿ.ಹಿರೇಮಠ, ಶ್ರೀ ಬಿ.ಸಿ.ದಮ್ಮು, ಶ್ರೀ ಎಸ್,ಹೆಚ್.ನಡೂಗಡ್ಡೆ, ಮುಖ್ಯೋಧ್ಯಾಪಕ ಶ್ರೀ ಎನ್.ಟಿ.ಇಬ್ರಾಹಿಂಪೂರ, ಶಿಕ್ಷಕಿ ಶ್ರೀಮತಿ ಶಾಂತಾ ಮಾವಿನಕಟ್ಟಿ, ಶಿಕ್ಷಕಿ ಶ್ರೀಮತಿ ಆಯ್.ಡಿ.ಹಿರೇಮಠ, ಶಿಕ್ಷಕಿ ಶ್ರೀಮತಿ ಎನ್.ಎಲ್.ಒಂಟಿ ಹಾಗೂ ಶಿಕ್ಷಕಿ ಶ್ರೀಮತಿ ಎಲ್.ಆರ್.ಚರಂತಿಮಠ ಶಾಲುಹೊದಿಸಿ ಹಾರಹಾಕಿ ಗೌರವ ನಮನ(ಸತ್ಕಾರ) ಸಲ್ಲಿಸಿದರು. ತದನಂತರ ಸತ್ಕಾರ ಸ್ವೀಕರಿಸಿ ಎಲ್ಲ ಗುರುಬಳಗ ವಿದ್ಯಾರ್ಥಿಗಳನ್ನುದ್ದೇಶಿಸಿ ತಮ್ಮ ಅನುಭವವನ್ನು ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯೋಧ್ಯಾಪಕ ಶ್ರೀ ಎಸ್.ಹೆಚ್.ಪಾಟೀಲ ವಹಿಸಿದ್ದರು. ಇಲ್ಲಿ ಮಾತನಾಡಿದ ಇವರು ಎಲ್ಲೆಲ್ಲೋ ಕೆಲಸದ ನಿಮಿತ್ತ ಇದ್ದ ನೀವೆಲ್ಲರೂ ಇಂದು ಒಂದೆಡೆ ಸೇರಿ ನಮ್ಮ ಸಹದ್ಯೋಗಿ ಬಳಗಕ್ಕೂ ಸೇರಿಸಿ ಗುರುವಂದನೆ ನೀಡಿದ್ದು ಬಹಳ ಸಂತೋಷವೆನಿಸುತ್ತಿದೆ. ದೇವರು ನಿಮ್ಮಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಆಶಿರ್ವದಿಸಿದರು.

ಕಾರ್ಯಕ್ರಮವನ್ನು ಮಹೇಶ ಮಾವಿನಕಟ್ಟಿ ನಿರೂಪಿಸಿದರು. ಸುನೀಲ ಮುಗಳಿಹಾಳ, ಸಂತೋಷ ಕಮತರ, ಶಿಲ್ಪಾ ಹಲಸಗಿ, ಮತ್ತು ಸಂಗೀತಾ ಗೌರಿ ಸ್ವಾಗತಿಸಿದರು. ಚಂದ್ರು ಪಾಟೀಲ(ತಡಕೋಟ) ವಂದಿಸಿದರು.

ಕಾರ್ಯಕ್ರಮದಲ್ಲಿ ನಾಗರಾಜ ಮಾಟೋಳ್ಳಿ, ಸುನೀಲ ಮುಗಳಿಹಾಳ, ಸಂತೋಷ ಕಮತರ, ಶಿವಲಿಂಗಯ್ಯಾ ಅಲ್ಲಯ್ಯನವರಮಠ, ಗುರುಶಿದ್ದಯ್ಯಾ ಹಿರೇಮಠ, ಚಂದ್ರಶೇಖರ ಹರಿಜನ, ಶಂಕರ ಹರಿಜನ, ನಾಮದೇವ ಪಾರಿಶ್ವಾಡ, ಆನಂದ ಬಾಗೇವಾಡಿ, ಕಲ್ಮೇಶ ಬಾಗೇವಾಡಿ, ಅರ್ಜುನ ಮಿಟಗಾರ, ಕಲ್ಲಪ್ಪ ಖೋಡಿ, ಚಂದ್ರಗೌಡ ಪಾಟೀಲ, ಶಿವಲಿಂಗ ಹುದಲಿ, ಮಹೇಶ ಮಾವಿನಕಟ್ಟಿ, ಸಂಗೀತಾ ಗೌರಿ, ಸವಿತಾ ರಪಾಟಿ, ಶಿಲ್ಪಾ ಹಲಸಗಿ, ಗೀತಾ ಉಡಕೇರಿ ಹಾಜರಿದ್ದರು.

Related posts: