RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:ಅಧಿಕಾರಕ್ಕೆ ರಾಜಿಯಾಗದೆ ಮೊದಲು ಜಾತಿ ಗಣತಿ ವರದಿ ಜಾರಿ ಮಾಡಿ’ ಎಂದಿರುವ ಹರಿಪ್ರಸಾದ್ ಅವರ ಹೇಳಿಕೆ ಸ್ವಾಗತಾರ್ಹ : ವಿನಾಯಕ ಕಟ್ಟಿಕರ

ಗೋಕಾಕ:ಅಧಿಕಾರಕ್ಕೆ ರಾಜಿಯಾಗದೆ ಮೊದಲು ಜಾತಿ ಗಣತಿ ವರದಿ ಜಾರಿ ಮಾಡಿ’ ಎಂದಿರುವ ಹರಿಪ್ರಸಾದ್ ಅವರ ಹೇಳಿಕೆ ಸ್ವಾಗತಾರ್ಹ : ವಿನಾಯಕ ಕಟ್ಟಿಕರ 

ಅಧಿಕಾರಕ್ಕೆ ರಾಜಿಯಾಗದೆ ಮೊದಲು ಜಾತಿ ಗಣತಿ ವರದಿ ಜಾರಿ ಮಾಡಿ’ ಎಂದಿರುವ ಹರಿಪ್ರಸಾದ್ ಅವರ ಹೇಳಿಕೆ ಸ್ವಾಗತಾರ್ಹ : ವಿನಾಯಕ ಕಟ್ಟಿಕರ

ಗೋಕಾಕ ಅ 7 : ಜಾತಿ ಗಣತಿ ವರದಿ ಜಾರಿಯಾದರೆ ಸರ್ಕಾರ ಹೋಗುತ್ತೆ ಎನ್ನುವುದಾದರೆ ಹೋಗಲಿ. ಅಧಿಕಾರಕ್ಕೆ ರಾಜಿಯಾಗದೆ ಮೊದಲು ವರದಿ ಜಾರಿ ಮಾಡಿ’ ಎಂದು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆಗ್ರಹಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಅಹಿಂದ ಚೇತನ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ವಿನಾಯಕ ಕಟ್ಟಿಕರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜಾತಿಗಣತಿ ವರದಿ ಜಾರಿ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ವಪಕ್ಷದಲ್ಲೇ ಒತ್ತಡ ಹೆಚ್ಚಾದಂತಾಗಿದೆ. ಪ್ರಪಂಚ ಮೇಲೆ ಬಿದ್ದರೂ ಜಾತಿಗಣತಿ ಮಾಡುವುದಾಗಿ ರಾಹುಲ್ ಗಾಂಧಿಯೇ ಹೇಳಿದ್ದಾರೆ. ಹೀಗಿದ್ದರೂ ರಾಜ್ಯ ಸರ್ಕಾರ ಸಿದ್ದವಾಗಿರುವ ವರದಿ ಬಗ್ಗೆ ಯಾಕೆ ಯೋಚಿಸುತ್ತಿದೆಯೋ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಅವರು ಸಿದ್ದರಾಮಯ್ಯ ನೇತೃತ್ವದ ಈ ಹಿಂದಿನ ಸರ್ಕಾರ ನಡೆಸಿದ ಜಾತಿ ಗಣತಿ ವರದಿಯನ್ನು ಅಂಗೀಕರಿಸಬೇಕು. ರಾಜ್ಯದ ಜನಸಂಖ್ಯೆಯಲ್ಲಿ ಶೇ 85ರಷ್ಟಿರುವ ಅಲ್ಪಸಂಖ್ಯಾತ, ಹಿಂದುಳಿದ, ದಲಿತ ವರ್ಗಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು. 2016ರಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯನ್ನು ₹180 ಕೋಟಿ ವ್ಯಯಿಸಿ ಮಾಡಲಾಗಿದೆ. ಸಚಿವ ಸಂಪುಟದ ಮಟ್ಟದಲ್ಲಿ ಅವರವರ ಜಾತಿಗಳ ಬಗ್ಗೆ ಮಾಹಿತಿ ಸೋರಿಕೆಯಾಗಿದೆ. ಆದರೆ ಸಮೀಕ್ಷೆ ನಡೆಸಿ 5 ವರ್ಷಗಳು ಕಳೆದರೂ ಬಿಡುಗಡೆಗೊಳಿಸಿಲ್ಲ.
ಜಾತಿ ಗಣತಿ ಬಿಡುಗಡೆ ಮಾಡುವಂತೆ ಒತ್ತಾಯಿಸುವವರು ಒಂದೆಡೆಯಾದರೆ, ವರದಿ ಬಿಡುಗಡೆ ಮಾಡಕೂಡದು ಎಂದು ಕೆಲವರು ವಿರೋಧ ಮಾಡುತ್ತಿದ್ದಾರೆ. ಇದು ವಿಪರ್ಯಾಸದ ಸಂಗತಿ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಅಥವಾ ಜಾತಿ ಗಣತಿಯ ಬಿಡುಗಡೆ ಮಾಡುವುದರಿಂದ ಜಾತಿಗಳ ಜನಸಂಖ್ಯೆ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿ-ಗತಿಗಳ ಬಗ್ಗೆ ರಾಜ್ಯದ ಜನರು ತಿಳಿಯುತ್ತದೆ. ಸಮುದಾಯಗಳ ಅಭಿವೃದ್ಧಿಗೆ ಕೈಗನ್ನಡಿ ಸಿಗಲಿದ್ದು, ಎಲ್ಲ ಜಾತಿ ಮತ್ತು ಸಮುದಾಯಕ್ಕೆ ಸೇರಿದವರು ತೊಡಗಿಸಿಕೊಂಡಿದ್ದರು. ಇಲ್ಲಿ ಯಾರ ಪರ ಅಥವಾ ವಿರೋಧ ಸಮೀಕ್ಷೆ ಬರಲು ಸಾಧ್ಯವೇ ಇಲ್ಲ. ಹಾಗಿದ್ದ ಮೇಲೂ ಏಕೆ ವಿರೋಧಿಸುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ ಹೀಗಾಗಿ, ಇನ್ನೂ ಹೆಚ್ಚಿನ ವಿಳಂಬ ಮಾಡದೇ ಜಾತಿ ಗಣತಿ ವರದಿಯನ್ನು ಅಂಗೀಕರಿಸಬೇಕು. ಕೇಂದ್ರಕ್ಕೆ ಸಲ್ಲಿಸಿ, ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು ಎಂದು ಸಂಘಟನೆಯ ಅಧ್ಯಕ್ಷ ವಿನಾಯಕ ಕಟ್ಟಿಕರ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Related posts: