RNI NO. KARKAN/2006/27779|Sunday, July 13, 2025
You are here: Home » breaking news » ಗೋಕಾಕ: ಸಚಿವ ರಮೇಶ ಕ್ಷುಲ್ಲಕ ರಾಜಕಾರಣ ಮಾಡುವದನ್ನು ನಿಲ್ಲಿಸಲಿ : ಅಶೋಕ ಪೂಜಾರಿ

ಗೋಕಾಕ: ಸಚಿವ ರಮೇಶ ಕ್ಷುಲ್ಲಕ ರಾಜಕಾರಣ ಮಾಡುವದನ್ನು ನಿಲ್ಲಿಸಲಿ : ಅಶೋಕ ಪೂಜಾರಿ 

ಸಚಿವ ರಮೇಶ ಕ್ಷುಲ್ಲಕ ರಾಜಕಾರಣ ಮಾಡುವದನ್ನು ನಿಲ್ಲಿಸಲಿ : ಅಶೋಕ ಪೂಜಾರಿ

ಗೋಕಾಕ ಜು 22 : ಸಚಿವ ರಮೇಶ ಜಾರಕಿಹೊಳಿ ಅವರು ಕ್ಷುಲ್ಲಕ ರಾಜಕಾರಣ ಮಾಡುವದನ್ನು ನಿಲ್ಲಿಸಬೇಕು ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ದೂರಿದ್ದಾರೆ

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಡಿಮೆ ಅಂತರದಿಂದ ಗೆಲುವು ಸಾಧಿಸಿರುವ ನೆಪವೊಡ್ಡಿ , ಕಡಿಮೆ ಮತ ಬಂದಿರುವ ಗ್ರಾಮ ಪಂಚಾಯತಗಳ ಫಲಾನುಭವಿಗಳಿಗೆ ಸರಕಾರದ ಸೌಲಭ್ಯಗಳನ್ನು ತಡೆ ಹಿಡಿಯುವ ಕಾರ್ಯ ನಡೆಯುತ್ತಿರುವದು ಬೆಳಕಿಗೆ ಬರುತ್ತಿದೆ . ಇಂತಹ ಕ್ಷುಲ್ಲಕ ರಾಜಕಾರಣ ಮಾಡುವದನ್ನು ಸಚಿವರು ತಕ್ಷಣ ನಿಲ್ಲಿಸಿಬೇಕೆಂದು ಅಶೋಕ ಪೂಜಾರಿ ಆಗ್ರಹಿಸಿದ್ದಾರೆ

ಚುನಾವಣೆ ಇದ್ದ ಕಾರಣ ಪಂಚಾಯಿತಿ ಮನೆ ನಿರ್ಮಾಣ ಮತ್ತು ಸರಕಾರದ ಇನ್ನೀತರ ಅನುಧಾನ ಪಡೆದ ಫಲಾನುಭವಿಗಳಿಗೆ ಹಣ ಸಂದಾಯ ಮಾಡುವದನ್ನು ತಡೆ ಹಿಡಿಯಲಾಗಿತ್ತು ಈಗ ಚುನಾವಣೆ ಮುಗಿದಿದೆ ಆದರೂ ಫಲಾನುಭವಿಗಳಿಗೆ ಸರಕಾರದ ಸೌಕರ್ಯ ತಲುಪಿಸಿದೆ ಇಂತಹವರನ್ನು ಭೇಟಿಯಾಗಿ ಬನ್ನಿ ಎಂದು ಸಂಬಂಧ ಪಟ್ಟ ಪಿ.ಡಿ.ಓ ಗಳು ಫಲಾನುಭವಿಗಳಿಗೆ ಸತಾಯಿಸಿ ಕರ್ತವ್ಯ ಲೋಪ ವೆಸಗುತ್ತಿದ್ದಾರೆ ಎಂದು ಆಪಾಧಿಸಿರುವ ಪೂಜಾರಿ ಈ ಬಗ್ಗೆ ಸಚಿವರು ಗಮನ ಹರಿಸಬೇಕು

ಈ ಕುರಿತು ಈಗಾಗಲೇ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಗಮನಕ್ಕೆ ತರಲಾಗಿದೆ . ಆದಷ್ಟು ಬೇಗ ಜಿ.ಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಈ ವಿಷಯ ಬಗ್ಗೆ ಗಮನ ಹರಿಸುವಂತೆ ಆಗ್ರಹಿಸಲಾಗುದು . ಕೂಡಲೇ ಈ ಸಮಸ್ಯೆ ಬಗೆ ಹರಿಯದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಅಶೋಕ ಪೂಜಾರಿ ಹೇಳಿದ್ದಾರೆ

Related posts: