RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನು ನೀಡಿ ಅವರನ್ನು ಉತ್ತಮ ನಾಗರೀಕರನ್ನಾಗಿ ಮಾಡುವ ಜವಾಬ್ದಾರಿ ಪಾಲಕರ ಮೇಲೆ ಇದೆ

ಗೋಕಾಕ:ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನು ನೀಡಿ ಅವರನ್ನು ಉತ್ತಮ ನಾಗರೀಕರನ್ನಾಗಿ ಮಾಡುವ ಜವಾಬ್ದಾರಿ ಪಾಲಕರ ಮೇಲೆ ಇದೆ 

ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನು ನೀಡಿ ಅವರನ್ನು ಉತ್ತಮ ನಾಗರೀಕರನ್ನಾಗಿ ಮಾಡುವ ಜವಾಬ್ದಾರಿ ಪಾಲಕರ ಮೇಲೆ ಇದೆ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 12

 

ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನು ನೀಡಿ ಅವರನ್ನು ಉತ್ತಮ ನಾಗರೀಕರನ್ನಾಗಿ ಮಾಡುವ ಜವಾಬ್ದಾರಿ ಪಾಲಕರ ಮೇಲೆ ಇದೆ ಎಂದು ಇಲ್ಲಿಯ ದಿಗಂಬರ ಜೈನ ಸಮಾಜದ ಅಧ್ಯಕ್ಷ ವಿಜಯಕುಮಾರ ಖಾರೆಪಾಟಣ ಹೇಳಿದರು.
ರವಿವಾರದಂದು ನಗರದ ಶ್ರೀಪಾಯಸಾಗರ ಶಿಕ್ಷಣ ಸಂಸ್ಥೆಯ ಮಹಾವೀರ ಭವನದಲ್ಲಿ ದಿಗಂಬರ ಜೈನ ಸಮಾಜದವರು ಹಮ್ಮಿಕೊಂಡ ಜ್ಞಾನಜ್ಯೋತಿ ಶಿಬಿರ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಂದು ಮಕ್ಕಳನ್ನು ಅಂಕಗಳಿಸುವ ಯಂತ್ರಗಳನ್ನಾಗಿ ಮಾಡುವುದರ ಜೊತೆಗೆ ಅವರ ಮೇಲೆ ಒತ್ತಡವನ್ನು ಹೇರಲಾಗುತ್ತಿದೆ. ಅವರಲ್ಲಿಯ ಸುಪ್ತಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಶಿಕ್ಷಣದೊಂದಿಗೆ ಆಧ್ಯಾತ್ಮಿಕತೆಯನ್ನು ಅವರಲ್ಲಿ ಬೆಳೆಸಿ ಅವರನ್ನು ಪರಿಪೂರ್ಣ ವ್ಯಕ್ತಿಗಳನ್ನಾಗಿ ರೂಪಿಸಬೇಕು. ಧಾರ್ಮಿಕ, ಯೋಗ, ವ್ಯಕ್ತಿತ್ವ ವಿಕಸನಗಳ ಕುರಿತು ಮಕ್ಕಳಿಗೆ ವಿಶೇಷ ತರಬೇತಿಯನ್ನು ನೀಡಿ ಅವರನ್ನು ಸಮಾಜ ಮುಖ್ಯವಾಹಿನೆಗೆ ತಂದು ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸಲು ಈ ಶಿಬಿರವನ್ನು ಆಯೋಜಿಸಲಾಗಿದ್ದು ಪಾಲಕರು ಹಾಗೂ ಮಕ್ಕಳ ಶಿಬಿರದ ಪ್ರಯೋಜನೆಯನ್ನು ಪಡೆಯುವಂತೆ ವಿನಂತಿಸಿದರು.
ಶಿಕ್ಷಕ ಬಿ.ಎಸ್.ಜೋಲಾಪೂರೆ ಮಾತನಾಡಿ ಪಾಲಕರು ವಿಶ್ವಾಸ ಶೃದ್ಧೆಯಿಂದ ತಮ್ಮ ಮಕ್ಕಳನ್ನು ಬೆಳೆಸಬೇಕು. ಅವರಿಗೆ ಪೌಷ್ಟಿಕ ಆಹಾರ ನೀಡಿ ಟಿವಿ, ಮೋಬಾಯಿಲ್‍ಗಳಿಂದ ದೂರವಿಟ್ಟು ಮನೆಯಲ್ಲಿ ಉತ್ತಮ ಕಲಿಕಾ ವಾತಾವರಣ ರೂಪಿಸಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ಯ ಮಕ್ಕಳಿಗೆ ಸ್ವಾಮಿ ವಿವೇಕಾನಂದರ ಕುರಿತು ಭಾಷಣ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆ ಮೇಲೆ ಗಣ್ಯರಾದ ಜಂಬೂರಾವ ಭರಮಗೌಡ, ಚಂದ್ರಕಲಾ ಸೊಲ್ಲಾಪೂರೆ, ಶಿಕ್ಷಕರಾದ ಟಿ.ಬಿ.ಬಿಲ್, ತ್ರೀಶೀಲಾ ಅಂಗಡಿ, ಜಯಶ್ರೀ ಗುರ್ಲಹೊಸುರ, ಶೈಲಾ ಕೊಟಬಾಗಿ, ಭರಮಣ್ಣ ಖಾರೆಪಾಟಣ, ಧನ್ಯಕುಮಾರ ಕಿತ್ತೂರ, ಅಣ್ಣಾ ಸಾಹೇಬ ಥಬಾಜ, ರಾಮಚಂದ್ರ ಕಾಕಡೆ ಇದ್ದರು.
ವಿದ್ಯಾರ್ಥಿಗಳಾದ ಸಹನಾ ಶೆಟ್ಟಿ ಸ್ವಾಗತಿಸಿದರು, ಇಶಾ ರಾಜಮಾನೆ ನಿರೂಪಿಸಿದರು, ವರ್ಷಾ ಚೌಗಲೆ ವಂದಿಸಿದರು.

Related posts: