RNI NO. KARKAN/2006/27779|Sunday, November 2, 2025
You are here: Home » breaking news » ಗೋಕಾಕ:ಅಸ್ಪೃಶ್ಯತೆಯಂತಹ ಭೀಕರ ಕಾಯಿಲೆಯನ್ನು ಸಮಾಜದಿಂದ ಒಡಿಸಬೇಕಾಗಿದೆ : ಮಂಗೇಶ ಭೇಂಡೆ

ಗೋಕಾಕ:ಅಸ್ಪೃಶ್ಯತೆಯಂತಹ ಭೀಕರ ಕಾಯಿಲೆಯನ್ನು ಸಮಾಜದಿಂದ ಒಡಿಸಬೇಕಾಗಿದೆ : ಮಂಗೇಶ ಭೇಂಡೆ 

ಅಸ್ಪೃಶ್ಯತೆಯಂತಹ ಭೀಕರ ಕಾಯಿಲೆಯನ್ನು ಸಮಾಜದಿಂದ ಒಡಿಸಬೇಕಾಗಿದೆ : ಮಂಗೇಶ ಭೇಂಡೆ

ಗೋಕಾಕ ಜ 31 : ಅಸ್ಪೃಶ್ಯತೆಯಂತಹ ಭೀಕರ ಕಾಯಿಲೆಯನ್ನು ಸಮಾಜದಿಂದ ಒಡಿಸಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಮಂಗೇಶ ಭೇಂಡೆ ಹೇಳಿದರು.
ಅವರು, ಬುಧವರಾದಂದು ನಗರದ ರಮೇಶಣ್ಣಾ ಕಾಲೋನಿಯ ಆವರಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಶವ ಸ್ಮøತಿ ಟ್ರಸ್ಟ ಚಿಕ್ಕೋಡಿ ಇವರ ನೂತನವಾಗಿ ನಿರ್ಮಿಸಿದ ಪ್ರೇರಣಾ ಕಾರ್ಯಾಲಯದ ವಾಸ್ತು ಶಾಂತಿ ಹಾಗೂ ಲೋಕಾರ್ಪಣೆ ಸಮಾರಂಭದಲ್ಲಿ ವಕ್ತಾರರಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಹಿಂದು ಧರ್ಮದಲ್ಲಿ ಅಸ್ಪಶ್ಯತೆ ಇಲ್ಲ. ನಾವೆಲ್ಲ ಒಂದೇ, ಸಾಮಾಜಿಕ ಸಾಮರಸ್ಯದ ಹಿಂದು ಮನೆಯಾಗಬೇಕು. ಇದಕ್ಕಾಗಿ ಪ್ರತಿಯೊಬ್ಬ ಸ್ವಯಂ ಸೇವಕರು ಪ್ರಯತ್ನಶೀಲರಾಗಿ ಕಾರ್ಯನಿರ್ವಹಿಸಬೇಕು. ಭಾರತ ಜಗತ್ತಿಗೆ ಜಗ್ದುರುವಾಗಬೇಕೆಂಬ ಗುರಿಯೊಂದಿಗೆ ದೇಶದಲ್ಲಿ ಲಕ್ಷಾಂತರ ಸ್ವಯಂ ಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ. ಬೃಹತ್ ಸಮಾವೇಶ ಹಾಗೂ ಚಿಂತನಾ ಗೋಷ್ಠಿಗಳನ್ನು ಆಯೋಜಿಸಿ ನಾವೆಲ್ಲ ಹಿಂದು ಎಂದು ಜಾಗೃತಿ ಮೂಢಿಸಬೇಕು. ಮನೆ ಮನೆಗೆ ಸಂಚರಿಸಿ ನಿಧಿ ಸಂಗ್ರಹಿಸಿ ರಾಮಮಂದಿರ ಪ್ರತಿಷ್ಠಾಪಿಸಿ ಐನೂರು ವರ್ಷಗಳ ಕಳಂಕವನ್ನು ತೊಳೆದುಕೊಂಡಿದ್ದೇವೆ. ಸಂಘದ ನೂರು ವರ್ಷದ ಆಚರಣೆ ಮಾಡಲು ಒಂದು ಲಕ್ಷ ಗ್ರಾಮಗಳಲ್ಲಿ ಸಂಘದ ಶಾಖೆಗಳನ್ನು ತೆರೆದು ಸಮಾಜ ಪರಿವರ್ತನೆ ಮಾಡಲು ಸ್ವಯಂ ಸೇವಕರು ಶ್ರಮಿಸಬೇಕೆಂದು ಹೇಳಿದರು.
ನಮಗೆ ಸ್ವಾತಂತ್ರ್ಯ ದೊರೆತು ಹಲವು ದಶಕಗಳು ಕಳೆದರು ನಮ್ಮಲ್ಲಿ ಗುಲಾಮಗಿರಿ ಭಾವನೆ ಹೊಗಿಲ್ಲ. ಸ್ವದೇಶಿ ಮನೋಭಾವ ಬೆಳೆದಿಲ್ಲ. ನಮ್ಮ ಭಾಷೆ, ಸಂಸ್ಕøತಿಯನ್ನು ಬೆಳೆಸಬೇಕು. ಸ್ವದೇಶಿ ಕುರಿತು ಅರಿವು ಮೂಢಿಸಿ, ನಾಗಕರಿಕ ಕರ್ತವ್ಯಗಳ ಪಾಲನೆ ಮಾಡಲು ಸ್ವಯಂ ಸೇವಕರು ಕಲಿಸಬೇಕು. ಭಾರತ ದೇಶ ಶ್ರೇಷ್ಠವಾಗಲು ನಮ್ಮ ಮನೆ ಹಿಂದು ಮನೆಯಾಗಿ ಮಾಡಲು ಕರೆ ನೀಡಿದರು.
ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಇಂದು ಮಠಗಳು ಜಾತಿಗೆ ಸೀಮಿತವಾಗುತ್ತಿವೆ. ಆರ್‍ಎಸ್‍ಎಸ್‍ನವರು ನಿರ್ಮಿಸಿರುವ ಈ ಪ್ರೇರಣಾ ಕಾರ್ಯಾಲಯ ಕಟ್ಟಡ ಜಾತ್ಯಾತೀತ ಮಠವಾಗಿ ಹಿಂದು ರಾಷ್ಟ್ರ ಮಾಡಲು ಪ್ರೇರಣೆಯಾಗಿದೆ. ಸೈನಿಕರ ನಂತರ ಶಿಸ್ತು ಹಾಗೂ ದೇಶ ಪ್ರೇಮವನ್ನು ಸ್ವಯಂ ಸೇವಕರಲ್ಲಿ ಕಾಣುತ್ತಿದ್ದೇವೆ. ಯುವ ಪೀಳಿಗೆ ಈ ಸಂಘದಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಲಿಷ್ಠ ಭಾರತ ನಿರ್ಮಾಣಕ್ಕೆ ಶ್ರಮಿಸುವಂತೆ ತಿಳಿಸಿದರು.
ಸಾನಿಧ್ಯವನ್ನು ಮೂಡಲಗಿಯ ಶಿವಭೋದರಂಗ ಮಠದ ಶ್ರೀ ದತ್ತಾತ್ರೇಯಭೋದ ಸ್ವಾಮಿಜಿ, ಮುಪ್ಪಯ್ಯನ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಜಿ ವಹಸಿದ್ದರು.
ಈ ಸಂದರ್ಭದಲ್ಲಿ ಸಂಘದ ಉತ್ತರ ಕರ್ನಾಟಕ ಪ್ರಾಂತ ಸಂಚಾಲಯ ಬಸವರಾಜ ಡಂಬಳ, ಕೇಶವ ಸ್ಮøತಿ ಟ್ರಸ್ಟ ಅಧ್ಯಕ್ಷ ಮಲ್ಲಿಕಾರ್ಜುನ ಚುನಮರಿ, ಎಮ್ ವೈ ಹಾರುಗೇರಿ, ಸಂಘ ಪರಿವಾರದ ಪ್ರಮುಖರಾದ ರಾಘವೇಂದ್ರ ಕಾಗವಾಡ, ನರೇಂದ್ರ, ಕೃಷ್ಣಾನಂದ ಕಾಮತ, ಅರವಿಂದರಾವ ದೇಶಪಾಂಡೆ, ಶ್ರೀಧರ ನಾಡಿಗೇರ, ಶ್ರೀನಿವಾಸ ನಾಯ್ಕ, ಶಾಸಕಿ ಶಶಿಕಲಾ ಜೊಲ್ಲೆ, ಮುಖಂಡರುಗಳಾದ ಅಂಬಿರಾವ ಪಾಟೀಲ, ಸರ್ವೋತ್ತಮ ಜಾರಕಿಹೊಳಿ, ಜಯಾನಂದ ಮುನವಳ್ಳಿ, ಅಶೋಕ ಪೂಜೇರಿ ಸೇರಿದಂತೆ ಅನೇಕರು ಇದ್ದರು.
ವಿಕಾಸ ನಾಯ್ಕ ಸ್ವಾಗತಿಸಿದರು, ಪ್ರಕಾಶ ವರ್ಜಿ ಕಾರ್ಯಕ್ರಮ ನಿರೂಪಿಸಿದರು, ಗಜಾನನ ವಾಗುಲೆ ವಂದಿಸಿದರು.

Related posts: