ಗೋಕಾಕ:ಜಂಬೆಯಿಂದ ಹಲ್ಲೆ ನಡೆಸಿ ಓರ್ವನಿಗೆ ಗಾಯ : ಗೋಕಾಕ ಫಾಲ್ಸದಲ್ಲಿ ಘಟನೆ

ಸಾಂಧರ್ಭಿಕ ಚಿತ್ರ
ಜಂಬೆಯಿಂದ ಹಲ್ಲೆ ನಡೆಸಿ ಓರ್ವನಿಗೆ ಗಾಯ : ಗೋಕಾಕ ಫಾಲ್ಸದಲ್ಲಿ ಘಟನೆ
ಗೋಕಾಕ ಮೇ 26 : ಮಿಲ್ಲಿನ ಕಾರ್ಮಿಕರ ಹಾಜರಾತಿ ಹೆಚ್ಚು ಮಾಡಲು ಯತ್ನಿಸಿದನೆಂದು ಆರೋಪಿಸಿ ಓರ್ವನ ಮೇಲೆ ಏಳು ಜನರ ಗುಂಪು ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಶುಕ್ರವಾರದಂದು ರಾತ್ರಿ 9-30ರ ಸುಮಾರಿಗೆ ಔದ್ಯೋಗಿಕ ಕ್ಷೇತ್ರ ಗೋಕಾಕ-ಫಾಲ್ಸದ 5ನೇ ಓಣಿಯಲ್ಲಿ ಜರುಗಿದೆ.
ಮಾರುತಿ ಭೀಮಪ್ಪ ಕೆಸರೂರ ಎಂಬವನ ಮೇಲೆ ಎರ್‍ಟಿಗಾ ಕಾರ್‍ನಲ್ಲಿ ಬಂದ ಅನೀಲ ಸತ್ತೆಪ್ಪ ಹೆಳವಗೋಳ, ಧನರಾಜ ಸತ್ತೆಪ್ಪ ಹೆಳವಗೋಳ, ಅಮೀತ ಮಹಾಲಿಂಗ ಭರಮನಾಯ್ಕ, ಸತೀಶ ಪರಸಪ್ಪ ನಾಯಿಕ, ಬಾಳೇಶ ಪರಸಪ್ಪ ಬಾಗನ್ನವರ, ಗುರುಪಾದ ಲಕ್ಷ್ಮಣ ಮದೆನ್ನವರ, ಪ್ರಭು ತಾಯಿ ಶಿವಕ್ಕ ಖನಗಾಂವ ಇವರ ಬಂದು ಸ್ಟಂಪ್, ಬಡಿಗೆ ಹಾಗೂ ಜಂಬೆಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆಂದು ಪೋಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯ ಸುದ್ದಿ ತಿಳಿದ ಕೂಡಲೇ ಪೋಲೀಸ ಇಲಾಖೆಯ ವರಿಷ್ಠ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಗೋಕಾಕ ನಗರ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.