RNI NO. KARKAN/2006/27779|Saturday, April 18, 2026
You are here: Home » breaking news » ಘಟಪ್ರಭಾ:ರಾಜಾಪೂರದಲ್ಲಿ ವಿಶ್ವ ಮಾನವ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

ಘಟಪ್ರಭಾ:ರಾಜಾಪೂರದಲ್ಲಿ ವಿಶ್ವ ಮಾನವ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ 

ರಾಜಾಪೂರದಲ್ಲಿ ವಿಶ್ವ ಮಾನವ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ
ಘಟಪ್ರಭಾ ಜ 12: ಸಮೀಪದ ರಾಜಾಪೂರ ಗ್ರಾಮದ ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವಗುರು ಸ್ವಾಮಿ ವಿವೇಕಾನಂದರ 155ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು ವಿವೇಕಾನಂದರ ವೇಷದಲ್ಲಿ ಮಿಂಚಿದರು. ಗ್ರಾಮದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರದ ಹಾಗೂ ಸ್ವಾಮಿ ವಿವೇಕಾನಂದರ ವೇಷದಾರಿಗಳ ಭವ್ಯವಾದ ಮೇರವಣಿಗೆ ನಡೆಯಿತು. ಸಹ ಶಿಕ್ಷಕರಾದ ಎಮ್.ಎಸ್.ಕಂಪು ಸ್ವಾಮಿ ವಿವೇಕಾನಂದರ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಸಂಜೀವ ಬೈರುಗೋಳ, ಸಂಗಯ್ಯ ಹೂನೂರ, ಸಿದ್ದವ್ವ ಅಥಣಿ, ಹಿರಿಯರಾದ ಗೋಪಾಲ ಕೆಂಪವ್ವಗೋಳ, ಸಿದ್ದು ಯಕ್ಕುಂಡಿ, ವಿನಯ ಪಾಟೀಲ, ಗುರು ಗಡಹಿಂಗ್ಲಜ ಸೇರಿದಂತೆ ಶಾಲೆಯ ಸಿಬ್ಬಂದಿಯವರು ಇದ್ದರು.
ಶಾಲೆಯ ಪ್ರಧಾನ ಗುರುಗಳಾದ ಎನ್.ಡಿ.ಪೂಜೇರಿ ಸ್ವಾಗತಿಸಿದರು, ಶ್ರೀಮತಿ ರೇಖಾ ಪೂಜಾರ ನೀರೂಪಿಸಿದರು. ಸುರೇಖಾ ಕಲಾಲ ವಂದಿಸಿದರು.

Related posts: