RNI NO. KARKAN/2006/27779|Wednesday, November 11, 2026
You are here: Home » breaking news » ಗೋಕಾಕ:ದಿನಾಂಕ 12 ರಿಂದ ಗೋಕಾಕದಲ್ಲಿ ” ಹೌದಲೆ ರಂಗಿ ಊದಲೇನ ಪುಂಗಿ” ನಾಟಕ : ರಂಗ ಕಲಾವಿದ ದಾವಲ್ ತಾಳಿಕೋಟಿ

ಗೋಕಾಕ:ದಿನಾಂಕ 12 ರಿಂದ ಗೋಕಾಕದಲ್ಲಿ ” ಹೌದಲೆ ರಂಗಿ ಊದಲೇನ ಪುಂಗಿ” ನಾಟಕ : ರಂಗ ಕಲಾವಿದ ದಾವಲ್ ತಾಳಿಕೋಟಿ 

ದಿನಾಂಕ 12 ರಿಂದ ಗೋಕಾಕದಲ್ಲಿ ” ಹೌದಲೆ ರಂಗಿ ಊದಲೇನ ಪುಂಗಿ” ನಾಟಕ : ರಂಗ ಕಲಾವಿದ ದಾವಲ್ ತಾಳಿಕೋಟಿ

ಗೋಕಾಕ ನ 11 : ದೀಪಾವಳಿ ಹಬ್ಬದ ಪ್ರಯುಕ್ತ ಜ್ಯೋತಿ ಗುಳೇದಗುಡ್ಡ ಮಾಲಿಕತ್ವದ ಗುಳೇದಗುಡ್ಡ ತಾಲೂಕಿನ ಶ್ರೀ ಸಂಗಮೇಶ್ವರ ನಾಟ್ಯ ಸಂಘದಿಂದ ದಿನಾಂಕ 12 ರಿಂದ ಪ್ರಾರಂಭಿಸಲಾಗುವ ” ಹೌದಲೆ ರಂಗಿ ಊದಲೇನ ಪುಂಗಿ ” ಸುಂದರ ಸಾಮಾಜಿಕ ನಾಟಕಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸುವಂತೆ ರಂಗ ಕಲಾವಿದ ದಾವಲ್ ತಾಳಿಕೋಟಿ ಕೋರಿದರು.
ಬುಧವಾರದಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಗುರುವಾರ ದಿನಾಂಕ 12 ರಂದು ಸಾಯಂಕಾಲ 6 ಘಂಟೆಗೆ ಇಲ್ಲಿನ ಬ್ಯಾಳಿಕಾಟ ಸಮಿಪವಿರುವ ವಿಶಾಲ್ ಮಾರ್ಟ ಎದುರುಗಡೆ ನಿರ್ಮಿಸಿದ ರಂಗದಲ್ಲಿ ಜರಗುವ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸುವರು. ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಜ್ಯೋತಿ ಬೆಳಗಿಸುವರು. ಕಾರ್ಯಕ್ರಮವನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ ಡಾ.ಮೋಹನ ಭಸ್ಮೆ, ಡಿ‌‌.ವಾಯ್.ಎಸ್.ಪಿ ರವಿ ನಾಯಿಕ, ಪೌರಾಯುಕ್ತ ರವಿ ರಂಗಸುಭೆ, ಪಿಎಸ್ಐ ಕಿರಣ ಮೋಹಿತೆ, ಮುಖಂಡರುಗಳಾದ ಅಶೋಕ ಪೂಜಾರಿ, ಚಂದ್ರಶೇಖರ್ ಕೊಣ್ಣೂರ, ಮಹಾಂತೇಶ ತಾವಂಶಿ, ಮಹಾಂತೇಶ ಮಠಪತಿ, ರವಿ ಕಿತ್ತೂರ ಸೇರಿದಂತೆ ಅನೇಕ ಮಹನೀಯರು ಉಪಸ್ಥಿತರಿರುವರು ಈ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ರಂಗ ಕಲಾವಿದ ದಾವಲ್ ತಾಳಿಕೋಟಿ ವಿನಂತಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಗುರುಲಿಂಗಯ್ಯ ತಾಳಿಕೋಟಿ, ವಿಠಲ್ ಮುಶೆಪ್ಪಗೋಳ, ಟಿ.ವಿ.ಗುದಗಾಪೂರ ಉಪಸ್ಥಿತರಿದ್ದರು.

 

Related posts: