RNI NO. KARKAN/2006/27779|Sunday, August 3, 2025
You are here: Home » breaking news » ಬೆಳಗಾವಿ:ರಾಷ್ಟ್ರಮಾತೆ ಕಿತ್ತೂರ ಚನ್ನಮ್ಮನ ವಿಜಯೋತ್ಸವದ ಐತಿಹಾಸಿಕ ಸತ್ಯ

ಬೆಳಗಾವಿ:ರಾಷ್ಟ್ರಮಾತೆ ಕಿತ್ತೂರ ಚನ್ನಮ್ಮನ ವಿಜಯೋತ್ಸವದ ಐತಿಹಾಸಿಕ ಸತ್ಯ 

ರಾಷ್ಟ್ರಮಾತೆ ಕಿತ್ತೂರ ಚನ್ನಮ್ಮನ ವಿಜಯೋತ್ಸವದ ಐತಿಹಾಸಿಕ ಸತ್ಯ
ಶಿವಾನಂದ ಮೇಟ್ಯಾಲ :ನೇಗಿನಹಾಳ
ಅಕ್ಟೋಬರ್ 23 ರಿಂದ 25 ರ ವರಿಗೆ ಕಿತ್ತೂರಿನಲ್ಲಿ ವಿಶ್ವವೇ ಕಣ್ತೆರೆದು ನೋಡುವಂತಹ ರಾಣಿ ಚನ್ನಮ್ಮನ ವಿಜಯೋತ್ಸವ ಆಚರಿಸುತ್ತಾ ಬರುತ್ತಿದ್ದು ಪ್ರಸಕ್ತ ವರ್ಷದಿಂದ ಇದೇ ದಿನದಂದು ವೀರರಾಣಿ ಕಿತ್ತೂರ ಚನ್ನಮ್ಮಾಜಿ ಜಯಂತಿಯೋತ್ಸವ ಕರ್ನಾಟಕ ಸರಕಾರವೇ ಆಚರಿಸಲು ಮುಂದಾಗಿದ್ದರಿಂದ ನಾಡಿನ ಜನತೆಯಲ್ಲಿ ಅತ್ಯಂತ ಹರ್ಷಿತರಾಗಿದ್ದಾರೆ. ರಾಣಿ ಚನ್ನಮ್ಮನ ಜನಿಸಿ ಇಂದಿಗೆ 239 ವರ್ಷಗಲು ಕಳೆದವು. ಚನ್ನಮ್ಮಾಜಿ ಬ್ರೀಟಿಷರ ವಿರುದ್ಧ ಹೋರಾಡಿ ಸೋಲಿಸಿ ಸೊಕ್ಕಡಗಿಸಿ ಇಂದಿಗೆ 194 ವರ್ಷಗತಿಸಿದವು. ಅದರ ಸವಿಸ್ಮರಣೆಗಾಗಿ ವೀರಮಾತೆ ಚನ್ನಮ್ಮಾಜಿಯ ವಿಜಯೋತ್ಸವ ದಿನವನ್ನು ಸರಕಾರ ಜಯಂತಿಯೋತ್ಸವ ಮಾಡುತ್ತಿರುವುದು ನಾಡಿನ ಜನತೆಗೆ ಎಲ್ಲಿಲ್ಲದ ಹರ್ಷತಂದಿದೆ.

ತಾಯಿ ಚನ್ನಮ್ಮಾಜಿ ಹೋರಾಟಕ್ಕೆ ಸ್ಪೂರ್ತಿ ಅಕ್ಕನಾಗಮ್ಮ
ಅಕ್ಕನಾಗಮ್ಮನ ಜೀವನ ಚರಿತ್ರೆಯ ಪ್ರರೇಪಣೆಯಿಂದ ಸ್ವತ: ಹೋರಾಟದ ಮುಂದಾಳತ್ವ ವಹಿಸಿಕೊಂಡಳು. ವಚನ ಸಾಹಿತ್ಯದ ಉಳವಿಗಾಗಿ ಅಕ್ಕನಾಗಮ್ಮ ಅಂದು ಖಡ್ಗ ಹಿಡಿದು ಹೋರಾಡಿದಳು ಎಂಬ ವಿಷಯಗಳಿಂದ ಮಹಿಳೆಯು ದೇಶರಕ್ಷಣೆಗಾಗಿ ಖಡ್ಗ ಹಿಡಿಯಬೇಕೆಂಬ ಹೋರಾಟದ ದಾರಿಗೆ ಸೂಕ್ತ ಮಾರ್ಗದರ್ಶಕಳಾದಳು.
ಬ್ರೀಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟದ ಕಹಳೆಯನ್ನು ಊದಿ ಕೆಚ್ಛೆದೆಯಿಂದ ಹೋರಾಡಿದ ಭಾರತದ ಪ್ರಪ್ರಥಮ ಮಹಿಳೆ ಕಿತ್ತೂರ ರಾಣಿ ಚೆನ್ನಮ್ಮ ಎಂಬುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ. ಕಾಕತಿಯ ಪ್ರಸಿದ್ಧ ದೇಸಾಯಿ ಮನೆತನಕ್ಕೆ ಸೇರಿದ ಚೆನ್ನಮ್ಮ ತನ್ನ ಬಾಲ್ಯಾವಸ್ಥೆಯಲ್ಲಿಯೇ ಹಲವಾರು ವೀರರ, ಶೂರರ, ಜೀವನ ಚರಿತ್ರೆ ತಿಳಿದು ತಾನು ಕೂಡಾ ಕುದರೆ ಸವಾರಿ, ಕತ್ತಿ ವರಸೆ, ಬಿಲ್ವಿದ್ಯೆಗಳನ್ನು ಅರಿತು ನಿರಂತರ ಕುದರೆ ಸವಾರಿಯನ್ನು ಮಾಡುತ್ತಿದ್ದು ಅವರ ತಂದೆ-ತಾಯಿಗೆ ಗಂಡು ಮಗನ ಹಡೆದಷ್ಟೇ ಸಂತೋಷ ಪಡುತ್ತಿದ್ದರು. 1796ರಲ್ಲಿ ಕಿತ್ತೂರಿನ ರಾಜ ಮಲ್ಲಸರ್ಜನೊಂದಿಗೆ ಕಿರಿಯ ರಾಣಿಯಾಗಿ ವಿವಾಹವಾಯಿತು.

ಕಿತ್ತೂರ ಚಿಕ್ಕ ಸಾಮ್ರಾಜ್ಯವಾದರೂ ಅತ್ಯಂತ ಸಂಪನ್ನಭರಿತ ರಾಜ್ಯವಾಗಿತು. ಇದರಿಂದ ಟಿಪ್ಪುಸುಲ್ತಾನ, ಪೇಶ್ವೆಗಳ ಕಣ್ಣು ಬಿದ್ದಿದ್ದರಿಂದ ಕಿತ್ತೂರಿನ ಮೇಲೆ ನಿರಂತರ ದಾಳಿ ಆರಂಭಿಸಿದ್ದರಿಂದ ಮಲ್ಲಸರ್ಜನಿಗೆ ಹಲವಾರು ಗಾಯಗಲಾಗಿ ಸೆರೆಸಿಕ್ಕು ಸೆರೆಮನೆವಾಸದಲ್ಲಿ ಆರೋಗ್ಯ ಹದಗೆಟ್ಟು ಬಿಡುಗಡೆಯಾದ ಅಲ್ಪವಧಿಯಲೇ 1818ರಲ್ಲಿ ಲಿಂಗೈಕ್ಯವಾದರು. ನಂತರ ತಮ್ಮನಾದ ಶಿವಲಿಂಗ ಸರ್ಜನೂ ಕೆಲವೇ ದಿನಗಳಲ್ಲಿ ಲಿಂಗೈಕ್ಯನಾಗಿದ್ದರಿಂದ ಕಿತ್ತೂರಿನ ಆಡಳಿತದ ಭಾರ ತಾಯಿ ಚನ್ನಮ್ಮನ ಮೇಲೆ ಬೀದಿತು.

ಅನ್ನತಿನ್ನುವ ಮನೆಗೆ ಎರಡು ಬಗೆಯುವ ನರಿ ಬುದ್ಧಿಯ ಮಲ್ಲಪ್ಪಶೆಟ್ಟಿ, ವೆಂಕಪ್ಪಗೌಡರ ಕುತಂತ್ರ ಬುದ್ಧಿಯಿಂದ ಬ್ರಿಟಿಷ ಅಧಿಕಾರಿ ಥ್ಯಾಕರೆಗೆ ಕಿತ್ತೂರಿನ ರಹಸ್ಯ ಬಿಚ್ಚಿಟ್ಟು ಕಿತ್ತೂರನ್ನು ತಮ್ಮ ವಶಕ್ಕೆ ಪಡೆಯಲು ಹೊಂಚು ಹಾಕಿದರು.

1824 ಅಕ್ಟೋಬರ್ 22 ರಂದು ಮಹಾನವಮಿಯ ಆಯುಧಪೂಜೆಯ ಭಕ್ತಿ ಭಾವದಲ್ಲಿ ಮಗ್ನನಾಗಿದ್ದ ಸಂಧರ್ಭ ತಿಳಿದು ಶತ್ರುಗಳು ದಾಳಿ ಮಾಡಿದ್ದನು ಕಿತ್ತೂರಿನ ಜನತೆ ದಿಗ್ಬ್ರಮೆಗೊಂಡರು ಆಗ ಚನ್ನಮ್ಮ ಎದೆಗುಂದದೆ ಶತ್ರುಗಳ ಸಂಹಾರಕ್ಕಾಗಿ ಪುರುಷನಂತೆ ಹೋರಾಡುವುದನ್ನು ಕಂಡು ಕಿತ್ತೂರಿನ ಸೈನಿಕರು ಬ್ರಿಟಿಷರನ್ನು ಸೆದೆಬಡೆಯಲು ಮುಂದಾದರು ಆಗಲೇ ಥ್ಯಾಕರೆ ಸಾಹೇಬನ ರುಂಡ ಚಂಡಾಡಿ ಕಿತ್ತೂರಿನ ಜನತೆ ವಿಜಯೋತ್ಸವ ಆಚರಿಸಿತು.

ಆಗಲೇ ಚಿಕ್ಕ ರಾಜ್ಯವಾದ ಕಿತ್ತೂರು ಬಲಿಷ್ಠರಾದ ಬ್ರಿಟಿಷ ಅಧಿಕಾರಿ ಡೆಕ್ಕನ್ನ ಕಮಿಷನರ್ ಚಾಪ್ಲಿನ್‍ಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿ ಮಲ್ಲಪ್ಪಶಟ್ಟಿ, ವೆಂಕನಗೌಡರ ಸಹಾಯದಿಂದ ಕುತಂತ್ರ ಬುದ್ದಿಯಿಂದ ಮತ್ತೆ ಕಿತ್ತೂರಿನ ಮೇಲೆ ಆಕ್ರಮಿಸಿ ಕಿತ್ತೂರನ್ನು ಗೆದ್ದು ತಾಯಿ ಚೆನ್ನಮ್ಮಳನ್ನು ಬೈಲಹೊಂಗಲ ಸೆರೆಮನೆಯಲ್ಲಿಟ್ಟರು. ಕಡೆಗೂ ನಮ್ಮ ಜನತೆ, ಸೈನಿಕರು ಬ್ರಿಟಿಷರ ಕೈವಶವಾದರೆಂಬ ನೋವಿನಿಂದ 1829 ರಲ್ಲಿ ಲಿಂಗಾಂಗ ಸಾಮರಸ್ಯದಲ್ಲಿ ತಲ್ಲಿನಳಾಗಿ ಲಿಂಗೈಕ್ಯಳಾದಳು ಅಂದಿಗೆ ಕಿತ್ತೂರಿನ ಜ್ಯೋತಿ ನಂದಿತು.
ಇತಿಹಾಸ ಪುಟಗಳಲ್ಲಿ ಸ್ವಾತಂತ್ರ್ಯದ ಹೋರಾಟದ ಕಿಚ್ಚು ಹಚ್ಚಿದ ಭಾರತದ ಪ್ರಥಮ ಮಹಿಳೆಯಾಗಿದ್ದು ಕಿತ್ತೂರ ಇಂದಿಗೂ ಗಂಡುಗಲಿಗಳ ನಾಡು ಶೌರ್ಯಕ್ಕೆ ಹೆಸರಾಗಿ ಉಳದಿದೆ.

Related posts: