ಗೋಕಾಕ:ಅಚ್ಚರಿಯ ಬೆಳವಣಿಗೆ : ಅಶೋಕ ಪೂಜಾರಿ ಮನೆಗೆ ಸತೀಶ ಜಾರಕಿಹೊಳಿ ದಿಢೀರ್ ಭೇಟಿ
ಅಚ್ಚರಿಯ ಬೆಳವಣಿಗೆ : ಅಶೋಕ ಪೂಜಾರಿ ಮನೆಗೆ ಸತೀಶ ಜಾರಕಿಹೊಳಿ ದಿಢೀರ್ ಭೇಟಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 16 :
ಗೋಕಾಕ ರಾಜಕೀಯದಲ್ಲಿ ಜಾರಕಿಹೊಳಿ ಕುಟುಂಬ ಮತ್ತು ಅಶೋಕ ಪೂಜಾರಿ ಕುಟುಂಬಗಳ ಮಧ್ಯೆ ಶೀತಲ ಸಮರ ನಡೆಯುತ್ತಲೇ ಇದೆ ಎನ್ನುವುದು ಜಗಜ್ಜಾಹೀರು.
ಈ ಹಿಂದೆ ನಡೆದ ಗೋಕಾಕ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸಹೋದರ ಲಖನ್ ಜಾರಕಿಹೊಳಿ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಡಿಸಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ವಿರುದ್ಧ ವಾಕಸಮರ ನಡೆಸಿದ್ದರು ಶಾಸಕ ಸತೀಶ ಜಾರಕಿಹೊಳಿ.
ಆದ್ರೆ, ಇದೀಗ ಅಚ್ಚರಿ ಎಂಬಂತೆ ಇಂದು [ಮಂಗಳವಾರ]
ಕಾಂಗ್ರೆಸ್ ಪಕ್ಷದ ನಾಯಕ ಸತೀಶ ಅವರು ಜೆಡಿಎಸ್ ಮುಖಂಡ ಅಶೋಕ ಪೂಜಾರಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಮೂರ್ಹತ ಸಮಿಪಿಸುತ್ತಿದ್ದಂತೆ ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದು ತೀವ್ರ ಕುತೂಹಲ ಕೆರಳಿಸಿದೆ.
ಲೋಕಸಭೆ ಉಪ ಚುನಾವಣೆ ಸಮಿಪಿಸುತ್ತಿದ್ದು, ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಮೂವರು ಅಭ್ಯರ್ಥಿಗಳ ಹೆಸರನ್ನು ಅಂತಿಮ ಮಾಡಿ ಹೈಕಮಾಂಡ್ ಗೆ ರವಾನಿಸಲಾಗಿದ್ದು, ದಿನಾಂಕ ಘೋಷಣೆಯಾದ ಬಳಿಕ ಅಭ್ಯರ್ಥಿಯ ಹೆಸರು ಹೊರ ಬಿಳಲಿದ್ದು, ಸತೀಶ ಜಾರಕಿಹೊಳಿ ಅವರ ಭೇಟಿಯ ನಂತರ ಅಶೋಕ ಪೂಜಾರಿ ಅವರೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳು ಶುರುವಾಗಿವೆ.
ಒಟ್ಟಾರೆ ಈ ಭೇಟಿಯ ಹಿಂದಿನ ರಹಸ್ಯ ಚುನಾವಣೆ ದಿನಾಂಕ ನಿಗದಿಯಾದ ನಂತರವಷ್ಠೆ ಹೊರ ಬರಲಿದೆ.
ಈ ಸಂದರ್ಭದಲ್ಲಿ ಸತೀಶ ಜಾರಕಿಹೊಳಿ ಅವರ ಜೊತೆ ಭಾರತಿಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಸಾಂಸ್ಕೃತಿಕ ಪ್ರಕೋಷ್ಠ ಸಂಚಾಲಕ ಮಹಾಂತೇಶ ತಾಂವಶಿ , ಶಂಕರ ಗಿಡನ್ನವರ ಇದ್ದರು.