RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ವಿದ್ಯಾರ್ಥಿ ಜೀವನದಲ್ಲಿ ಪ್ರಾಯೋಗಿಕ ಕಲಿಕೆ ಅತ್ಯಂತ ಮಹತ್ತರ ಪಾತ್ರ ವಹಿಸುತ್ತದೆ : ಅಭಿವೃದ್ಧಿ ಅಧಿಕಾರಿ ಅಕ್ಷರಾ

ಗೋಕಾಕ:ವಿದ್ಯಾರ್ಥಿ ಜೀವನದಲ್ಲಿ ಪ್ರಾಯೋಗಿಕ ಕಲಿಕೆ ಅತ್ಯಂತ ಮಹತ್ತರ ಪಾತ್ರ ವಹಿಸುತ್ತದೆ : ಅಭಿವೃದ್ಧಿ ಅಧಿಕಾರಿ ಅಕ್ಷರಾ 

ವಿದ್ಯಾರ್ಥಿ ಜೀವನದಲ್ಲಿ ಪ್ರಾಯೋಗಿಕ ಕಲಿಕೆ ಅತ್ಯಂತ ಮಹತ್ತರ ಪಾತ್ರ ವಹಿಸುತ್ತದೆ : ಅಭಿವೃದ್ಧಿ ಅಧಿಕಾರಿ ಅಕ್ಷರಾ

ಗೋಕಾಕ ಜು 13 : ವಿದ್ಯಾರ್ಥಿ ಜೀವನದಲ್ಲಿ ಪ್ರಾಯೋಗಿಕ ಕಲಿಕೆ ಅತ್ಯಂತ ಮಹತ್ತರ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಇಲ್ಲಿ ಪಡೆದತಂಹ ಮಾಹಿತಿಯನ್ನು ಮುಂದೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಯಶಸ್ವಿ ಜೀವನವನ್ನು ನಡೆಸಲು ಸಾದ್ಯ ಎಂದು ಬೆಂಗಳೂರಿನ ಎಕ್ಸ್ – ವರ್ಕ್ಜ ಕಂಪನಿಯ ಎಚ್.ಆರ್ , ಹಿರಿಯ ಉದ್ಯೋಗ ಅಭಿವೃದ್ಧಿ ಅಧಿಕಾರಿ ಅಕ್ಷರಾ ತಿಳಿಸಿದರು.

ಶನಿವಾರದಂದು ನಗರದ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದಲ್ಲಿ
ಶ್ರೀ ಸಿದ್ದಲಿಂಗೇಶ್ವರ ಬಿ.ಸಿ.ಎ ಕಾಲೇಜು ಮತ್ತು ಎಕ್ಸ್ – ವರ್ಕ್ಜ ಬೆಂಗಳೂರು ಲಿಮಿಟೆಡ್ ಇವುಗಳ ಸಂಯುಕ್ತಾಶ್ರಯದಲ್ಲಿ ಬಿ.ಸಿ.ಎ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಉದ್ಯೋಗ ಭರವಸೆ “ಸಹಿ ಸಮಾರಂಭ” ಹಾಗೂ ಕಾರ್ಯಾಗಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು

ಇಂದಿನ ದಿನಗಳಲ್ಲಿ ಐ.ಐ.ಟಿ ಮತ್ತು ಡಿಪ್ಲೊಮಾ ಮಾಡಿದವರಿಗೆ ಅತಿ ಹೆಚ್ಚು ಬೇಡಿಕೆ ಇದೆ. ಉದ್ಯೋಗವಕಾಶ ಕಡಿಮೆ ಇದೆ ಎನ್ನುವ ಮಾತು ಸತ್ಯಕ್ಕೆ ದೂರ ಅದರೆ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಕಡಿಮೆಯಾಗುತ್ತಿರುವುದು ಇದಕ್ಕೆ ಕಾರಣ ಜಗತ್ತು ಇಂದು ಸಾಪ್ಟವೇರ್ ಕಡೆಗೆ ವಾಲುತ್ತಿದ್ದು, ವಿದ್ಯಾರ್ಥಿಗಳು ಅದನ್ನು ಗಹನಮಾಡಿಕೊಂಡು ಒಳ್ಳೆಯ ಜೀವನ ರೂಪಿ‌ಕೊಳ್ಳಬೇಕು ಎಂದು ಕರೆ ನೀಡಿದರು

ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಡಿವೇಶ ಗವಿಮಠ, ಎಕ್ಸ್- ವರ್ಕ್ಜ ಕಂಪನಿಯ ಶಾಂತನು, ಮಂಜು, ಅರ್ಪಣಾ ಕುಲಕರ್ಣಿ ಉಪಸ್ಥಿತರಿದ್ದರು.

Related posts:

ಗೋಕಾಕ:ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಮಾಡಿದರೆ ತಾಲೂಕಿನ ಅಭಿವೃದ್ಧಿ ಸಾಧ್ಯ : ಡಾ. ಕೆ.ವ್ಹಿ….

ಗೋಕಾಕ:ಯಮಕನಮರಡಿ ಮತಕ್ಷೇತ್ರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಟಾಫ್ 10 ವಿದ್ಯಾರ್ಥಿಗಳಿಗೆ ಸತೀಶ…

ಗೋಕಾಕ:ಕೌಟುಂಬಿಕ ಚಲನಚಿತ್ರ "ಆರಂಭ"ವನ್ನು ಪ್ರೇಕ್ಷಕರು ನೋಡಿ ಪ್ರೋತ್ಸಾಹಿಸಿ ಕಲಾವಿದರನ್ನು ಆರ್ಶೀವದಿಸಬೇಕು…