ಗೋಕಾಕ:ಬಂಡೆಗಲ್ಲುಗಳ ತೆರುವು ಕಾರ್ಯಾಚರಣೆಗೆ ಮಳೆರಾಯ ಅಡ್ಡಿ

ಬಂಡೆಗಲ್ಲುಗಳ ತೆರುವು ಕಾರ್ಯಾಚರಣೆಗೆ ಮಳೆರಾಯ ಅಡ್ಡಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 23 :
ಮಧ್ಯಾಹ್ನ ಸುಮಾರು 12 ಘಂಟೆಯಿಂದ ಪ್ರಾರಂಭವಾಗಿರುವ ಬಂಡೆಕಲ್ಲುಗಳು ಕೋರೆಯುವ ಕಾರ್ಯಾಚರಣೆಗೆ ಸತತ ಸುರಿಯುತ್ತಿರುವ ಮಳೆ ಅಡ್ಡಿಯಾಗಿದೆ .
ಕಳೆದ ನಾಲ್ಕು ದಿನಗಳಿಂದ ಸಾರ್ವಜನಿರಿಗೆ ಭಯ ಹುಟ್ಟಿಸಿರುವ ಬೃಹದಾಕಾರದ ಬಂಡೆಗಲ್ಲುಗಳ ಕಾರ್ಯಾಚರಣೆಗೆ ಇಂದು ಚಾಲನೆ ನೀಡಲಾಗಿದ್ದು , ಈಗಾಗಲೇ ಸುಮಾರು 5 ಅಡ್ಡಿ ಉದ್ದ ರಂಧ್ರ ಕೋರೆದಿದ್ದು , ಬ್ಲಾಸಟಿಂಗ ಫೌಡರ ಹಾಕಿ ಬಂಡೆಯನ್ನು ಛೀದ್ರಗೋಳಿಸುವ ತಯಾರಿ ನಡೆಸಿರುವ ಸಂದರ್ಭದಲ್ಲಿ ಮಳೆರಾಯನ ಆಗಮನ ಕಾರ್ಯಾಚರಣೆಗೆ ಅಡ್ಡಿಯಾಗಿದೆ . ಮಳೆ ನಿಂತ ಮೇಲೆ ಮತ್ತೆ ಕಾರ್ಯಚರಣೆ ಪ್ರಾರಂಭವಾಗಲಿದೆ ಎಂದು ತಿಳಿದುಬಂದಿದೆ .