RNI NO. KARKAN/2006/27779|Saturday, June 15, 2024
You are here: Home » breaking news » ಘಟಪ್ರಭಾ:ಕಿರಾಣಿ ವರ್ತಕರು ದಿನಸಿ ವಸ್ತುಗಳಿಗೆ ಹೆಚ್ಚು ದರ ವಸೂಲಿ ಮಾಡಿದರೆ ಕಾನೂನು ಕ್ರಮ : ಪ್ರಕಾಶ ಹೋಳೆಪ್ಪಗೋಳ ಎಚ್ಚರಿಕೆ

ಘಟಪ್ರಭಾ:ಕಿರಾಣಿ ವರ್ತಕರು ದಿನಸಿ ವಸ್ತುಗಳಿಗೆ ಹೆಚ್ಚು ದರ ವಸೂಲಿ ಮಾಡಿದರೆ ಕಾನೂನು ಕ್ರಮ : ಪ್ರಕಾಶ ಹೋಳೆಪ್ಪಗೋಳ ಎಚ್ಚರಿಕೆ 

ಕಿರಾಣಿ ವರ್ತಕರು ದಿನಸಿ ವಸ್ತುಗಳಿಗೆ ಹೆಚ್ಚು ದರ ವಸೂಲಿ ಮಾಡಿದರೆ ಕಾನೂನು ಕ್ರಮ : ಪ್ರಕಾಶ ಹೋಳೆಪ್ಪಗೋಳ ಎಚ್ಚರಿಕೆ

 

 
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಎ 4 :

 

 

ಮಹಾಮಾರಿ ಕೆರೋನಾದ ಸಲುವಾಗಿ ಲಾಕ್ ಡೌನ ಸಂದರ್ಭದಲ್ಲಿ ಕಿರಾಣಿ ವರ್ತಕರು ದಿನಸಿ ವಸ್ತುಗಳಿಗೆ ಹೆಚ್ಚು ದರ ವಸೂಲಿ ಮಾಡುತ್ತಿದ್ದಾರೆ ಎಂಬ ಅರೋಪಗಳು ಕೇಳಿಬರುತ್ತಿದೆ ಕಾರಣ ಹಾಗೇನಾದರೂ ಆದಲ್ಲಿ ಅಂತಹ ವರ್ತಕರ ವಿರುಧ್ಧ ಕ್ರಮ ಕೈಕೊಳ್ಳಬೆಕಾಗುತ್ತದೆ ಎಂದು ಗೋಕಾಕ ತಾಲೂಕಾ ದಂಡಾಧಿಕಾರಿಗಳಾದ ಪ್ರಕಾಶ ಹೋಳೆÀಪ್ಪಗೋಳ ಹೇಳಿದರು.
ಅವರು ಶನಿವಾರದಂದು ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ಆವರಣದಲ್ಲಿ ಕರೆಯಲಾದ ಧುಪದಾಳ ಗ್ರಾಮ ಪಂಚಾಯತಿ ಹಾಗೂ ಮಲ್ಲಾಪೂರ ಪಿಜಿ ಪ.ಪಂ ವ್ಯಾಪ್ತಿಯಲ್ಲಿ ಬರುವ ಕಿರಾಣಿ ಹಾಗೂ ಔಷಧಿ ಅಂಗಡಿ ಮಾಲಿಕರ ಸಭೆಯಲ್ಲಿ ಮಾತನಾಡಿದರು.
ಲಾಕ್‍ಡೌನನಿಂದ ಕೆಲಸ ಕಾರ್ಯಗಳಿಲ್ಲದೇ ಜನರ ಬದಕು ದುಸ್ತರವಾದ ಇಂತಹ ಸಂದರ್ಭದಲ್ಲಿ ತಾವು ಖರೀದಿ ಮಾಡಿದ ದರಕ್ಕಿಂತ ಸ್ವಲ್ಪ ಹೆಚ್ಚಿನ ದರದಲ್ಲಿ ದಿನಸಿ ವಸ್ತುಗಳನ್ನು, ಔಷಧಿ ಹಾಗೂ ಮಾಸ್ಕಗಳನ್ನು ಮರಾಟ ಮಾಡಿ ಸಹಕರಿಸಬೇಕೆಂದು ಕೇಳಿಕೊಂಡರು. ಕೆಲವು ಅರೋಪಗಳು ಕೇಳಿಬಂದ ಹಿನ್ನಲೆಯಲ್ಲಿ ಈ ಸಭೆÉ ಕರೆಯಲಾಗಿದ್ದು ಯಾರೂ ಅನ್ಯತಾ ಬಾವಿಸಬಾರದು ಎಂದರು. ತುರ್ತು ವ್ಯವಸ್ಥೆಗಳಾದ ಔಷಧಿ ಅಂಗಡಿ ಹಾಗೂ ಆಸ್ಪತ್ರೆಗಳನ್ನು ತೆರೆದಿಡಬೇಕೆಂದು ಹೇಳಿದಾಗಲೂ ಕೆಲ ವೈದ್ಯರು ಅಸ್ಪತ್ರೆಗಳನ್ನು ಮುಚ್ಚಿಕೊಂಡು ತಿರುಗಾಡತಿದ್ದಾರೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಅಂತ ವೈದ್ಯರ ಬಗ್ಗೆ ವಿಚಾರಿಸಿ ಕ್ರಮ ಕೈಕೊಳ್ಳಲಾಗುವದೆಂದು ತಿಳಿಸಿದರು.
ಗೋಕಾಕ ಡಿ.ಎಸ್.ಡಿ ಡಿ.ಟಿ.ಪ್ರಭು ಮಾತನಾಡಿ ಜನರು ಸಾಮಾಜಿಕ ಅಂತರವನ್ನು ಕಾಯ್ದಕೊಳ್ಳುವದರೊಂದಿಗೆ ಮಾಸ್ಕವನ್ನು ಕಡ್ಡಾಯವಾಗಿ ಧರಿಸಬೇಕು. ಲಾಕ್ ಡೌನ ನಿಯಮಗಳನ್ನು ಪಾಲಿಸುವ ಮೂಲಕ ಮಾರಕ ಕೊರೋನಾ ವೈರಸ್ ತಡೆಯಲು ಸಹಕರಿಸಬೇಕು ಹಾಗೂ ಔಷಧಿ ಅಂಗಡಿ ಮಾಲೀಕರು ಮಾಸ್ಕಗಳನ್ನು ಹೆಚ್ಚಿನದರಕ್ಕೆ ಮಾರಾಟ ಮಾಡಬಾರದು ಅಂತ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಘಟಪ್ರಭಾ ಪಿ.ಎಸ್.ಐ ಹಾಲಪ್ಪಾ ಬಾಲದಂಡಿ, ಪ.ಪಂ ಮುಖ್ಯಾಧಿಕಾರಿ ಕೆ.ಭಿ,ಪಾಟೀಲ, ಧುಪದಾಳ ಗ್ರಾ.ಪಂ ಪಿಡಿಒ ಕೃಷ್ಣಾ ಗೋವೆಲಕರ, ಜಿಲ್ಲಾ ಕಾರ್ಮಿಕ ನಿರೀಕ್ಷಕರಾದ ಸರೂನಮ್ ಬೆಂಗಾಳಿ, ತಾಲೂಕಾ ಕಾರ್ಮಿಕ ಅಧಿಕಾರಿಗಳಾದ ಪಿ.ವಿ. ಮಾವರಕರ, ಗ್ರಾಮ ಲೆಕ್ಕಾಧಿಕಾರಿ ಎಂ.ಎಸ್.ಗಡಕರಿ, ಹಿರಿಯರಾದ ಡಿ.ಎಂ.ದಳವಾಯಿ, ಪ.ಪಂ ಸದಸ್ಯರಾದ ಮಲ್ಲು ಕೋಳಿ, ಪ್ರವೀಣ ಮಟಗಾರ, ಸಲೀಮ ಕಬ್ಬೂರ, ಇಮ್ರಾನ ಬಟಕುರ್ಕಿ, ನಾಗರಾಜ ಚಚಡಿ, ಹಿರಿಯ ವ್ಯಾಪಾರಸ್ಥರಾದ ಸಚ್ಚಿನ ಖಡಬಡಿ, ಕಾಶಿನಾಥ ರಾಜನ್ನವರ, ರಾಜು ಪಾಟೀಲ, ಸಿದ್ದಣ್ಣಾ ನಿರ್ಲಿ, ಬಸವರಾಜ ಪಶುಪತಿಮಠ, ರಾಯಣ್ಣ ಬಂಗಿ, ಮನೂಹರ ಹಾಲುಂಡಿ, ಸೇರಿದಂತೆ ಪ.ಪಂ ಹಾಗೂ ಗ್ರಾ.ಪಂ ಸಿಬ್ಬಂದಿ ವರ್ಗದವರು

Related posts: