RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಅಂಕಲಗಿ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ರಮೇಶ

ಗೋಕಾಕ:ಅಂಕಲಗಿ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ರಮೇಶ 

ಅಂಕಲಗಿ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ರಮೇಶ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 10 :

 

ಮಾಜಿ ಸಚಿವ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಶನಿವಾರದಂದು ತಾಲೂಕಿನ ಅಂಕಲಗಿ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೆರಿಸುವ ಮೂಲಕ ಚಾಲನೆ ನೀಡಿದರು.

ಲೋಕೋಪಯೋಗಿ ಇಲಾಖೆಯಿಂದ 28 ಕೋಟಿ 85 ಲಕ್ಷ ರೂಗಳ ವೆಚ್ಚದಲ್ಲಿ 21 ಕಿ.ಮೀ ಸಿಸಿ ರಸ್ತೆ ಹಾಗೂ ರಸ್ತೆ ಡಾಂಬರೀಕರಣ, ಜಲ ಜೀವನ ಮೀಷನ್ ಯೋಜನೆಯಡಿಯಲ್ಲಿ 80 ಲಕ್ಷ ರೂ ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿ ಹಾಗೂ ಲೋಕೋಪಯೋಗಿ ಇಲಾಖೆಯಿಂದ 30 ಲಕ್ಷ ರೂಗಳ ವೆಚ್ಚದಲ್ಲಿ ಅಂಕಲಗಿ ಗ್ರಾಮದ ನೂತನ ಪ್ರವಾಸಿ ಮಂದಿರವನ್ನು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಟಿ ಆರ್ ಕಾಗಲ, ಮಡ್ಡೆಪ್ಪ ತೋಳಿನವರ, ಶಾಸಕರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡರ, ರಾಮಣ್ಣ ಸುಂಬಳಿ, ಬಸವರಾಜ ಪಟ್ಟಣಶೆಟ್ಟಿ, ಚಂದ್ರಪ್ಪ ಬೂಸಣ್ಣವರ, ಮುನ್ನಾ ಗಣಾಚಾರಿ, ಮಲ್ಲೇಶ ಪಶ್ಚಾಪೂರಿ, ಮುನ್ನಾ ದೇಸಾಯಿ, ಬಾಳಗೌಡ ಪಾಟೀಲ, ಹುಸೇನಖಾನ ದೇಸಾಯಿ ಸೇರಿದಂತೆ ಇತರರು ಇದ್ದರು.

Related posts: