RNI NO. KARKAN/2006/27779|Thursday, July 31, 2025
You are here: Home » breaking news » ಗೋಕಾಕ:2021ರ ಮಂಜು ಮುರ್ಕಿಭಾಂವಿ ಕೊಲೆ ಪ್ರಕರಣ : ನಿಜವಾದ ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸಿ ಸಿದ್ದವ್ವ ಮತ್ತು ವಿಠಲ ಮುರ್ಕೀಭಾಂವಿ ಆಗ್ರಹ

ಗೋಕಾಕ:2021ರ ಮಂಜು ಮುರ್ಕಿಭಾಂವಿ ಕೊಲೆ ಪ್ರಕರಣ : ನಿಜವಾದ ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸಿ ಸಿದ್ದವ್ವ ಮತ್ತು ವಿಠಲ ಮುರ್ಕೀಭಾಂವಿ ಆಗ್ರಹ 

2021ರ ಮಂಜು ಮುರ್ಕಿಭಾಂವಿ ಕೊಲೆ ಪ್ರಕರಣ : ನಿಜವಾದ ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸಿ ಸಿದ್ದವ್ವ ಮತ್ತು ವಿಠಲ ಮುರ್ಕೀಭಾಂವಿ ಆಗ್ರಹ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಏ 25 :

 
2021ರ ಜುಲೈ 17ರಂದು ನಗರ ಹೊರವಲಯದಲ್ಲಿ ನಡೆದ ಮಂಜು ಶಂಕರ ಮುರ್ಕೀಬಾಂವಿ ಎಂಬಾತದ ಕೊಲೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ವಿಲ್ಲ ಎಂದು ಹೇಳಿರುವ ಬೆಳಗಲಿಯ ರಾಯವ್ವ ಖಾನಟ್ಟಿ ಎಂಬುವವರ ಪುತ್ರಿ ಸುಷ್ಮೀತಾ ಅವಳ ಹೇಳಿಕೆ ಸಂಪೂರ್ಣ ಸುಳ್ಳಾಗಿದೆ ಎಂದು ಮೃತನ ಸಹೋದರಿ ಸಿದ್ದವ್ವ ಮುರ್ಕೀಬಾಂವಿ ಮತ್ತು ಸಹೋದರ ವಿಠಲ ಮುರ್ಕೀಬಾಂವಿ ಸ್ವಷ್ಟಪಡಿಸಿದರು.
ಸೋಮವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಂಜು ಮತ್ತು ಸುಷ್ಮೀತಾ ಪರಸ್ಪರ ಪ್ರೀತಿಸುತ್ತಿರುವದರ ಬಗ್ಗೆ ಸಾಕ್ಷ್ಯ ಸಮೇತ ಭಾವಚಿತ್ರಗಳನ್ನು ಪ್ರದರ್ಶಿಸಿ ಅವರು ಮಾತನಾಡಿ, ಕೊಲೆಯಾದ ಮಂಜು ಹಾಗೂ ಸುಷ್ಮೀತಾ ಪರಸ್ಪರ ಪ್ರೀತಿಸುತ್ತಿದ್ದರು ಎಂಬ ಬಗ್ಗೆ ನಮ್ಮ ಕಡೆ ಅವಶ್ಯಕ ಸಾಕ್ಷಾಧಾರಗಳು ಇವೆ. ಈ ಕೊಲೆಯ ಹಿಂದಿನ ಕಾಣದ ಕೈಗಳನ್ನು ತನಿಖೆ ಮೂಲಕ ಪತ್ತೆ ಮಾಡಿ ಕಾನೂನಿನ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಆರೋಪಿ ಸಿದ್ದಪ್ಪ ಬಬಲಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದು, ನಮಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಂದಾಣಿಕೆ ಮಾಡಿಕೊಳ್ಳಲು ಹಣದ ಆಮಿಷ ನೀಡುತ್ತಿದ್ದು, ಜೀವ ಧಮಕಿವೊಡ್ಡಲಾಗುತ್ತಿದೆ. ಹೀಗಾಗಿ, ಅವರ ಮೇಲೆ ಕಠಿಣ ಕ್ರಮ ಕೈಗೊಂಡು ಶಿಕ್ಷೆಗೆ ಗುರಿಪಡಿಸುವಂತೆ ಮಾದ್ಯಮಗಳ ಮೂಲಕ ಕಳಕಳಿಯ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಶಂಕರ ಮುರ್ಕೀಬಾಂವಿ, ಲಕ್ಷ್ಮಣ ಮುರ್ಕೀಬಾಂವಿ, ರೇಖಾ ಮುರ್ಕೀಬಾಂವಿ, ರೇಣುಕಾ ಕಡಕೋಳ ಮತ್ತಿತರರು ಇದ್ದರು.

Related posts: