ಗೋಕಾಕ:ಮನೆ ಮನೆಗೆ ತೆರಳಿ ಆರೋಗ್ಯ ಮಾಡುವ ಆಶಾ ಕಾರ್ಯಕರ್ತರಿಗೆ ಕೊರೋನಾ ಸೈನಿಕರ ಸಾಥ್
ಮನೆ ಮನೆಗೆ ತೆರಳಿ ಆರೋಗ್ಯ ಮಾಡುವ ಆಶಾ ಕಾರ್ಯಕರ್ತರಿಗೆ ಕೊರೋನಾ ಸೈನಿಕರ ಸಾಥ್
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 23 :
ಮಹಾಮಾರಿ ಕೊರೋನಾ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ತಾಲೂಕಿನಾದ್ಯಂತ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಗುರವಾರದಂದು ನಗರದ ವಾರ್ಡ ನಂ 22 ರ ಕೊರೋನಾ ಸೈನಿಕರು ಸಾಥ್ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಅಬ್ಬಾಸ ದೇಸಾಯಿ , ಆಶಾ ಕಾರ್ಯಕರ್ತೆ ಗೀತಾ ಜೋಡಂಗಿ , ಸುನೀತಾ ಹಿಂಡಿಕೋಳಿ , ಬಿ.ಎಲ್.ಓ ಎಸ್. ಆಯ್ ಜಾಧವ ,ಕೊರೋನಾ ಸೈನಿಕರಾದ ದೀಪಕ ಪೂಜೇರಿ, ದಾನೇಶ್ವರ ಲಾಗವೆ, ಎ.ಕೆ ದೇಸಾಯಿ , ರಪೀಕ ಗುಳ್ಳೆದಗುಡ್ಡ, ಖ್ವಾಜಾಸಾಬ ಮತ್ತೆ, ರಶೀದ ಅಥಣಿ, ಮಹಾದೇವ ಮತ್ತಿಕೋಪ್ಪ , ಅಬ್ಬು ಮುಜಾವರ , ಇಮ್ರಾನ ಪೀರಜಾದೆ ಉಪಸ್ಥಿತರಿದ್ದರು