RNI NO. KARKAN/2006/27779|Friday, March 29, 2024
You are here: Home » breaking news » ಗೋಕಾಕ:ಸತ್ಸಂಗ ಸಮ್ಮೇಳನವನ್ನು ಸರಳ ಮತ್ತು ಸಾಂಕೇತಿಕವಾಗಿ ಆಯೋಜನೆ : ಅಭಿನವ ಶಿವಾನಂದ ಸ್ವಾಮಿಜಿ

ಗೋಕಾಕ:ಸತ್ಸಂಗ ಸಮ್ಮೇಳನವನ್ನು ಸರಳ ಮತ್ತು ಸಾಂಕೇತಿಕವಾಗಿ ಆಯೋಜನೆ : ಅಭಿನವ ಶಿವಾನಂದ ಸ್ವಾಮಿಜಿ 

ಸತ್ಸಂಗ ಸಮ್ಮೇಳನವನ್ನು ಸರಳ ಮತ್ತು ಸಾಂಕೇತಿಕವಾಗಿ ಆಯೋಜನೆ : ಅಭಿನವ ಶಿವಾನಂದ ಸ್ವಾಮಿಜಿ

 

 

ನಮ್ಮ ಬೆಳಗಾವಿ ಇ – ವಾರ್ತೆ ಬೆಟಗೇರಿ ಅ 23 :

 

ಮಹಾಮಾರಿ ಕರೊನಾ ವಿಶ್ವದ ತುಂಬೆಲ್ಲಾ ವ್ಯಾಪಿಸಿ, ಜನರ ಜೀವದ ಜೋತೆ ಚೆಲ್ಲಾಟವಾಡುತ್ತಿದೆ. ಭಾರತ ದೇಶದಲ್ಲಿ ಮಹಾನ್ ಪವಾಡ ಪುರುಷರು, ಸಂತ-ಶರಣರು ತಪಸ್ಸುಗೈದು, ಪಾದ ಸ್ಪರ್ಶಮಾಡಿದ್ದಾರೆ ಹೀಗಾಗಿ ಕರೊನಾ ಮಹಾಮಾರಿ ಅಷ್ಟೇನೂ ನಮ್ಮ ದೇಶದಲ್ಲಿ ಪರಿಣಾಮ ಬೀರಿಲ್ಲ ಎಂದು ಸುಣಧೊಳಿ ಅಭಿನವ ಶಿವಾನಂದ ಸ್ವಾಮಿಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಶನಿವಾರ ಆ.22 ರಂದು ನಡೆದ 36ನೇ ಸತ್ಸಂಗ ಸಮ್ಮೇಳನದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಕರೊನಾ ಸೋಂಕು ತಡೆಗಟ್ಟುವ ಹಿನ್ನಲೆಯಲ್ಲಿ ಪ್ರತಿ ವರ್ಷದಂತೆ 36ನೇ ಸತ್ಸಂಗ ಸಮ್ಮೇಳನವನ್ನು ಸರಳ ಮತ್ತು ಸಾಂಕೇತಿಕವಾಗಿ ಸ್ಥಳೀಯರು ಆಯೋಜನೆ ಮಾಡಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಬಾಕ್ಸ್ ಐಟಮ್:ಗ್ರಾಮದ ಈಶ್ವರ ದೇವರ ದೇವಸ್ಥಾನದಲ್ಲಿರುವ ಈಶ್ವರ ದೇವರ ಗದ್ದುಗೆ ಮುಂಜಾನೆ 6 ಗಂಟೆಗೆ ಮಹಾಪೂಜೆ, ಪ್ರಾತ: ಕಾಲ ಬ್ರಾಹ್ಮಿ ಮೂಹೂರ್ತದಲ್ಲಿ ಶಿವನಾಮ ಸ್ಮರಣೆ ಜರುಗಿ, ಗ್ರಾಮದ ಈಶ್ವರ ಭಜನಾ ತಂಡವರಿಂದ ಶಿವ ಭಜನೆ, ನೈವೇದ್ಯ ಸಮರ್ಪಣೆ ನಡೆದ ಬಳಿಕ ಮಹಾಮಂಗಲ, ಪ್ರಸಾದದೊಂದಿಗೆ ಸತ್ಸಂಗ ಸಮ್ಮೇಳನ ಸರಳ ಮತ್ತು ಸಾಂಕೇತಿಕವಾಗಿ ನಡೆದು ಸಮಾರೊಪಗೊಂಡಿತು.
ಸ್ಥಳೀಯ ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ಪುಂಡಲೀಕಪ್ಪ ಪಾರ್ವತೇರ, ಬಸಪ್ಪ ದೇಯಣ್ಣವರ, ಬಸವರಾಜ ಪಣದಿ, ಈಶ್ವರ ಬಳಿಗಾರ, ಚಿಂತಪ್ಪ ಸಿದ್ನಾಳ, ಮಹಾದೇವಪ್ಪ ಹಡಪದ, ನಿಂಗಪ್ಪ ಕಂಬಿ, ಶ್ರೀಧರ ದೇಯನ್ನವರ, ರಾಮಣ್ಣ ಮುಧೋಳ, ಬಸನಗೌಡ ದೇಯನ್ನವರ, ಬಸಪ್ಪ ತೋಟಗಿ, ಬಸವರಾಜ ನೀಲನ್ನವರ, ಸ್ಥಳೀಯ ಈಶ್ವರ ಭಜನಾ ಮಂಡಳಿ ಸದಸ್ಯರು, ಗಣ್ಯರು, ಇತರರಿದ್ದರು

Related posts: