RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಕಾರ್ ರಸ್ತೆ ಬದಿ ತೆಗ್ಗಿಗೆ ಉರುಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ : ಓರ್ವನ ಸಾವು

ಗೋಕಾಕ:ಕಾರ್ ರಸ್ತೆ ಬದಿ ತೆಗ್ಗಿಗೆ ಉರುಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ : ಓರ್ವನ ಸಾವು 

ಕಾರ್ ರಸ್ತೆ ಬದಿ ತೆಗ್ಗಿಗೆ ಉರುಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ : ಓರ್ವನ ಸಾವು

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ.12-

 

 

ಕಾರ್‍ವೊಂದು ತೆಗ್ಗಿಗೆ ಉರುಳಿ ವಿದ್ಯುತ್ ಕಂಬಕ್ಕೆ ಡಿಕಿ ಹೊಡೆದ ಪರಿಣಾಮವಾಗಿ ಓರ್ವನು ಸಾವನ್ನಪ್ಪಿದ ಹಾಗೂ ಇನ್ನೊರ್ವ ಗಾಯಗೊಂಡ ಘಟನೆ ತಾಲೂಕಿನ ಕನಸಗೇರಿ ಗ್ರಾಮದ ಬಳಿ ತವಗ-ಕನಸಗೇರಿ ರಸ್ತೆಯಲ್ಲಿ ಬುಧವಾರದಂದು ಸಂಜೆ 5-30ರ ಸುಮಾರಿಗೆ ಜರುಗಿದೆ.
ತವಗ ಗ್ರಾಮದ ರವಿಚಂದ್ರ ಬಸವಣ್ಣೆಪ್ಪ ದಾವಲಟ್ಟಿ (27) ಎಂಬವನು ಕಾರ್ (ಕೆಎ-49-5355) ನಲ್ಲಿ ತವಗ-ಕನಸಗೇರಿ ಎಸ್ತೆಯಲ್ಲಿ ಹೋಗುತ್ತಿರುವಾಗ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತೆಗ್ಗಿಗೆ ಉರುಳಿ ಅಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದನಲ್ಲದೆ ಅದೇ ಗ್ರಾಮದ ಅಡಿವೆಪ್ಪ ದುರಗಪ್ಪ ಬಂಡಿವಡ್ಡರ ಎಂಬವನು ಗಾಯಗೊಂಡಿದ್ದು ಆತನನ್ನು ಇಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಗೋಕಾಕ ಗ್ರಾಮೀಣ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts: