RNI NO. KARKAN/2006/27779|Thursday, October 16, 2025
You are here: Home » breaking news » ಗೋಕಾಕ:ಸೇವಾ ನಿವೃತ್ತರಾದ ಎಮ್.ಎಚ್.ಅತ್ತಾರ ಹಾಗೂ ಆಯ್.ಎ.ಕುಂಬಾರಿ ಅವರ ಬಿಳ್ಕೋಡುವ ಸಮಾರಂಭ

ಗೋಕಾಕ:ಸೇವಾ ನಿವೃತ್ತರಾದ ಎಮ್.ಎಚ್.ಅತ್ತಾರ ಹಾಗೂ ಆಯ್.ಎ.ಕುಂಬಾರಿ ಅವರ ಬಿಳ್ಕೋಡುವ ಸಮಾರಂಭ 

ಸೇವಾ ನಿವೃತ್ತರಾದ ಎಮ್.ಎಚ್.ಅತ್ತಾರ ಹಾಗೂ ಆಯ್.ಎ.ಕುಂಬಾರಿ ಅವರ ಬಿಳ್ಕೋಡುವ ಸಮಾರಂಭ

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 1 :

 

ಜಾರಕಿಹೊಳಿ ಸಹೋದರರ ಸಹಕಾರ ಹಾಗೂ ದಕ್ಷ ಪ್ರಾಮಾಣಿಕ ಅಧಿಕಾರಿಗಳ ಕಾರ್ಯವೈಖರಿಯಿಂದ ಇಂದು ಗೋಕಾಕ ನಗರ ಮಾದರಿ ನಗರವಾಗಿ ಬೆಳೆಯುತ್ತಿದೆ ಎಂದು ನಗರ ಸಭಾ ಹಿರಿಯ ಸದಸ್ಯ ಎಸ್.ಎ.ಕೋತವಾಲ ಹೇಳಿದರು.
ಶುಕ್ರವಾರದಂದು ಸಂಜೆ ನಗರದ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸಂಘದವರು ಆಶ್ರಯದಲ್ಲಿ ಪೌರಾಯುಕ್ತ ಎಮ್.ಎಚ್.ಅತ್ತಾರ ಹಾಗೂ ಕಂದಾಯ ನಿರೀಕ್ಷಕ ಆಯ್.ಎ.ಕುಂಬಾರಿ ಅವರು ಸೇವಾ ನಿವೃತ್ತರಾದ ನಿಮಿತ್ಯ ಹಮ್ಮಿಕೊಂಡ ಬಿಳ್ಕೋಡುವ ಹಾಗೂ ಸತ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ನಗರದ ಜನತೆಗೆ ಮೂಲಭೂತ ಸೌಲಭ್ಯವನ್ನು ಕಲ್ಪಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ವದಾಗಿದೆ. ಹಿಂದಿನ ಎಲ್ಲ ಪೌರಾಯುಕ್ತರು ಪ್ರಾಮಾಣಿಕವಾಗಿ ಕಾರ್ಯ ನಿಭಾಯಿಸಿದ್ದರಿಂದ ನಗರದಲ್ಲಿ ಹಲವಾರು ಬೃಹತ್ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾಗುತ್ತಿದ್ದು ನಗರ ಮಾದರಿಯಾಗಿ ಅಭಿವೃದ್ದಿ ಹೊಂದುತ್ತಿದೆ ಎಂದು ಅವರು ಪೌರಾಯುಕ್ತ ಎಮ್.ಎಚ್.ಅತ್ತಾರ ಹಾಗೂ ಕಂದಾಯ ನಿರೀಕ್ಷಕ ಆಯ್.ಎ.ಕುಂಬಾರಿ ಅವರು ಸೇವೆಯನ್ನು ಶ್ಲಾಘೀಸಿದ ಅವರ ನಿವೃತ್ತ ಜೀವನ ಸುಖಮಯವಾಗಿ ಸಾಗಲಿ ಎಂದು ಹಾರೈಸಿ ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಸೇವಾ ನಿವೃತ್ತರಾದ ಪೌರಾಯುಕ್ತ ಎಮ್.ಎಚ್.ಅತ್ತಾರ ಹಾಗೂ ಕಂದಾಯ ನಿರೀಕ್ಷಕ ಆಯ್.ಎ.ಕುಂಬಾರಿ ಅವರನ್ನು ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸಂಘದವರು, ನಗರ ಸಭಾ ಸದಸ್ಯರು, ವಿವಿಧ ಸಂಘಗಳು ಹಾಗೂ ನಗರದ ಗಣ್ಯರು ಸತ್ಕರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರಿ ಪೌರಾಯುಕ್ತ ವಿ.ಎಸ್.ತಡಸಲೂರ ವಹಿಸಿದ್ದರು.
ವೇದಿಕೆ ಮೇಲೆ ಪೌರಾಯುಕ್ತ ಎಮ್.ಎಚ್.ಅತ್ತಾರ, ಕಂದಾಯ ನಿರೀಕ್ಷಕ ಆಯ್.ಎ.ಕುಂಬಾರಿ, ಪರಿಸರ ಅಭಿಯಂತರ ಎಮ್.ಎಚ್.ಗಜಾಕೋಶ, ನಿವೃತ್ತ ಪೌರಾಯುಕ್ತ ವಿ.ಸಿ.ಚಿನ್ನಪ್ಪಗೌಡರ, ನಿವೃತ್ತ ಯೋಜನಾಧೀಕಾರಿ ಪರಸಪ್ಪ ಚಲವಾದಿ, ಮುಖಂಡ ಜ್ಯೋತಿಭಾ ಸುಭಂಜಿ ಇದ್ದರು.
ಲೆಕ್ಕ ಅಧೀಕ್ಷಕ ಎಮ್.ಎನ್.ಸಾಗರೇಕರ ಸ್ವಾಗತಿಸಿದರು, ಕೆ.ಬಿ.ಬೆಣ್ಣಿ ನಿರೂಪಿಸಿದರು, ಆರ್.ಎಮ್.ಗಣಾಚಾರಿ ವಂದಿಸಿದರು.

Related posts: