ಗೋಕಾಕ:ಬೆಳಗಾವಿ ಜಿಲ್ಲೆ ವಿಭಜನೆ ಅನುಮಾನ ವ್ಯಕ್ತವಾಗುತ್ತಿದೆ : ಅಶೋಕ ಪೂಜಾರಿ ಕಳವಳ

ಬೆಳಗಾವಿ ಜಿಲ್ಲೆ ವಿಭಜನೆ ಅನುಮಾನ ವ್ಯಕ್ತವಾಗುತ್ತಿದೆ : ಅಶೋಕ ಪೂಜಾರಿ ಕಳವಳ
ಗೋಕಾಕ ಡಿ 27 : ಸರಕಾರದ ನಡೆಯಿಂದ ಬೆಳಗಾವಿ ಜಿಲ್ಲೆ ವಿಭಜನೆಯ ಕೂಗು ಹುಸಿಯಾಗಿದೆಯಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಕಳವಳ ವ್ಯಕ್ತಪಡಿಸಿದರು.
ಶನಿವಾರದಂದು ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ , ಜಿಲ್ಲಾ ಮಂತ್ರಿ ಸತೀಶ್ ಜಾರಕಿಹೊಳಿ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಬೆಳಗಾವಿ ಜಿಲ್ಲೆ ವಿಭಜನೆ ಬಗ್ಗೆ ಕಾಳಜಿ ಮಾಡಿ ಎಲ್ಲಾ ಶಾಸಕರ ಅಭಿಪ್ರಾಯ ಸಂಗ್ರಹಿಸುವಲ್ಲಿ ವಿಫಲರಾಗಿದ್ದಾರೆ.
ಬೆಳಗಾವಿ ಅಧಿವೇಶನ ಸಂಧರ್ಭದಲ್ಲಿ ಸರಕಾರ ಮತ್ತು ಇಡೀ ಮಂತ್ರಿ ಮಂಡಳ ಮತ್ತು ಜಿಲ್ಲೆಯ ಎಲ್ಲಾ ಶಾಸಕರು ಬೆಳಗಾವಿಯಲ್ಲಿ ಇದ್ದರು ಸಹ ಮುಖ್ಯಮಂತ್ರಿಗಳು ಶಾಸಕರ ಮತ್ತು ಸಚಿವರ ಸಭೆ ಕರೆಯಲಿಲ್ಲ ಇವರ ಭಾವನೆ ಮೇಲ್ನೋಟಕ್ಕೆ ಬೆಳಗಾವಿ ಜಿಲ್ಲೆ ವಿಭಜನೆಗೆ ವಿರೋಧ ಇರುವುದು ಕಂಡು ಬರುತ್ತಿದೆ. ಇನ್ನು ಒಂದು ವಾರ ಕಲಾವಕಾಶ ಇದ್ದು, ಜಿಲ್ಲಾ ಉಸ್ತುವಾರಿ ಸಚಿವರು ಮನಸ್ಸು ಮಾಡಿ ಮುಂದಾಳತ್ವ ತಗೆದುಕೊಂಡು ಅತಿ ಶೀಘ್ರದಲ್ಲೇ ಜಿಲ್ಲೆಯ ಎಲ್ಲಾ ಶಾಸಕರು ಸಭೆಯನ್ನು ಕರೆದು ಬೆಳಗಾವಿ ಜಿಲ್ಲಾ ವಿಭಜನೆ ಬಗ್ಗೆ ನಿರ್ಧಾರ ತಡೆದುಕೊಳ್ಳಬೇಕು ಎಂದ ಅವರು ಬೆಳಗಾವಿ ಜಿಲ್ಲಾ ವಿಭಜನೆಯ ವಿಷಯವನ್ನು ಯಾರು ರಾಜಕೀಯವಾಗಿ ತಗೆದುಕೊಳ್ಳದೆ ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿಯನ್ನು ವಿಭಜಿಸಿ ಗೋಕಾಕ ತಾಲೂಕನ್ನು ಹೊಸ ಜಿಲ್ಲೆ ಮಾಡಲು ಧೈರ್ಯ ತೋರಬೇಕು ಎಂದು ಆಗ್ರಹಿಸಿದರು.
ಬೆಳಗಾವಿ ಜಿಲ್ಲೆ ವಿಭಜನೆಗೆ ಆರ್ಥಿಕ ಸಂಕಷ್ಟ ಇದೆಯೋ ಎಂಬುದನ್ನು ಸರಕಾರ ಸ್ವಷ್ಟ ಪಡಿಸಬೇಕು ಅಥವಾ ಬೆಳಗಾವಿ ಜಿಲ್ಲೆ ವಿಭಜನೆಗೆ ಏನು ತೊಂದರೆ ಇದೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಜನಸಾಮಾನ್ಯರಿಗೆ ತಿಳಿಸಬೇಕು. ಒಟ್ಟಾರೆ ಬೆಳಗಾವಿ ಜಿಲ್ಲಾ ವಿಭಜನೆಗೆ ಅಂತಿಮ ಸ್ವರೂಪವನ್ನು ನೀಡಬೇಕು ಎಂದು ಒತ್ತಾಯಿಸಿದರು.
ನಮ್ಮವರೇ ಜಿಲ್ಲಾ ಉಸ್ತುವಾರಿ ಸಚಿವರು ಇರುವ ಕಾರಣ ನಾವು ಹೋರಾಟ ಮಾಡಿಲ್ಲ ಒಂದು ವೇಳೆ ಡಿಸೆಂಬರ್ ಕೊನೆಯಲ್ಲಿ ಜಿಲ್ಲೆ ವಿಭಜನೆ ಆಗದೆ ಇದ್ದರೆ ಮುಂದೆ ಹೋರಾಟಗಾರರೆಲ್ಲ ಸೇರಿ ಉಗ್ರ ಸ್ವರೂಪದ ಹೋರಾಟಕ್ಕೆ ಅಣಿಯಾಗುವುದು ಅನಿವಾರ್ಯವಾಗಲಿದೆ ಎಂದು ಸರಕಾರವನ್ನು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೋ ಅರ್ಜುನ್ ಪಂಗಣ್ಣವರ, ಸಂಜೀವ ಪೂಜಾರಿ, ಸದಾಕತ ಅಲಿ ಮಂಕಾದಾರ, ಪ್ರವೀಣ ನಾಯಿಕ ಉಪಸ್ಥಿತರಿದ್ದರು
