ಗೋಕಾಕ:ಪ್ರಥಮ ಜಾನಪದ ಸಮ್ಮೇಳನ ಲಾಂಛನ ಬಿಡುಗಡೆ

ಪ್ರಥಮ ಜಾನಪದ ಸಮ್ಮೇಳನ ಲಾಂಛನ ಬಿಡುಗಡೆ
ಗೋಕಾಕ ಡಿ 27 : ಹಡಗಿನಾಳ ಗ್ರಾಮದಲ್ಲಿ ಜ.4 ರಂದು ನಡೆಯಲಿರುವ ಪ್ರಥಮ ಜಾನಪದ ಸಮ್ಮೇಳನದ ಲಾಂಛನವನ್ನು ಶುಕ್ರವಾರದಂದು ನಗರದಲ್ಲಿ ಯುವ ಮುಖಂಡ,ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ನಿರ್ದೇಶಕ ಸರ್ವೊತ್ತಮ ಜಾರಕಿಹೊಳಿ ಅವರು ಬಿಡುಗಡೆ ಗೊಳಿಸಿದರು.
ನಂತರ ಮಾತನಾಡಿದ ಅವರು ಹಡಗಿನಾಳ ಗ್ರಾಮದಲ್ಲಿ ಪ್ರಥಮ ಕನ್ನಡ ಜಾನಪದ ಸಮ್ಮೇಳನವನ್ನು ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ನಡೆಸಲು ತಿರ್ಮಾನಿಸಲಾಗಿದ್ದು, ಪ್ರತಿಯೊಬ್ಬರೂ ಸಮ್ಮೇಳನದ ಯಶಸ್ವಿಗೆ ಸಹಕಾರ ನೀಡಬೇಕು ಎಂದು ಕೋರಿದ ಅವರು ಸಮ್ಮೇಳನ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ ತಾಲೂಕಾಧ್ಯಕ್ಷ ಜಯಾನಂದ ಮಾದರ, ಈಶ್ವರಚಂದ್ರ ಬೆಟಗೇರಿ, ಸಾದಿಕ ಹಲ್ಯಾಳ,ಆನಂದ ಸೋರಗಾವಿ, ಬಿ.ಬಿ.ಪಟ್ಟಗುಂದಿ, ಹನಿಫ್ ಸನದಿ ಉಪಸ್ಥಿತರಿದ್ದರು.
