RNI NO. KARKAN/2006/27779|Tuesday, October 14, 2025
You are here: Home » breaking news » ಗೋಕಾಕ:ಸೇವಾ ನಿವೃತ್ತಿ ಹೊಂದಿದ ಎಮ್.ಎಸ್.ಮುರನಾಳಗೆ ಸನ್ಮಾನ

ಗೋಕಾಕ:ಸೇವಾ ನಿವೃತ್ತಿ ಹೊಂದಿದ ಎಮ್.ಎಸ್.ಮುರನಾಳಗೆ ಸನ್ಮಾನ 

ಸೇವಾ ನಿವೃತ್ತಿ ಹೊಂದಿದ ಎಮ್.ಎಸ್.ಮುರನಾಳಗೆ ಸನ್ಮಾನ

 
ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಏ 2 :

 

ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್‍ಎಚ್‍ವಿ ಎಮ್.ಎಸ್.ಮುರನಾಳ ಅವರು ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಮಾ.30 ರಂದು ಸೇವಾ ನಿವೃತ್ತಿ ಸನ್ಮಾನ ಕಾರ್ಯಕ್ರಮ ನಡೆಯಿತು.
ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜೇಶ್ವರಿ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಭುವನೇಶ್ವರಿ ಚೆನ್ನಾಳ, ಬಸು ಕುಂದರಗಿ ಅವರು ಸೇವಾ ನಿವೃತ್ತಿ ಹೊಂದಿದ ಹಾಗೂ ವರ್ಗಾವಣೆಗೊಂಡ ನೌಕರರ ಸೇವೆಯ ಕುರಿತು ಮಾತನಾಡಿದರು.
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವಾ ನಿವೃತ್ತಿ ಹೊಂದಿದ ಎಲ್‍ಎಚ್‍ವಿ ಎಮ್.ಎಸ್.ಮುರನಾಳ ಅವರಿಗೆ ಹಾಗೂ ಹಲವು ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ವಿವಿಧ ಹುದ್ದೆಯ ಕೆಲವು ಜನ ನೌಕರರನ್ನು ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಪರವಾಗಿ ನೆನಪಿನ ಕಾಣಿಕೆ ನೀಡಿ, ಸನ್ಮಾನಿಸಿ ಬಿಳ್ಕೋಡಲಾಯಿತು.
ಬಿ.ಎಸ್.ಅವರಾದಿ, ಆಯ್.ಎಸ್.ನಾಯಿಕವಾಡಿ, ಸಂಜಯ ಪಾಟೀಲ, ಬಿ.ಎಸ್.ವಾಸಿಂ, ರೇಣುಕಾಕುಮಾರಿ ಎಮ್.ಎನ್, ಸರೋಜಾ ಬಿಸನಾಳ, ಸರೋಜಾ ಮಟಗಿ, ಶಿವಾನಂದ ಕರಗುಪ್ಪಿ, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಇದ್ದರು.

Related posts: