ಖಾನಾಪುರ:ಲಿಂಗನಮಠದಲ್ಲಿ ಸ್ವಿಪ್ ಮತ್ತು ಮತದಾನ ಜಾಗೃತಿ ಜಾಥಾ
ಲಿಂಗನಮಠದಲ್ಲಿ ಸ್ವಿಪ್ ಮತ್ತು ಮತದಾನ ಜಾಗೃತಿ ಜಾಥಾ
ನಮ್ಮ ಬೆಳಗಾವಿ ಸುದಿ , ಖಾನಾಪುರ ಮಾ 20 :
ಮತದಾನ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ, ಯಾವುದೇ ಆಮಿಷಕ್ಕೆ ಬಲಿಯಾಗದೇ ನಿಮ್ಮ ಮತಗಳನ್ನು ಮಾರಿಕೊಳ್ಳಬೇಡಿ. ನಿಮ್ಮ ಲೋಕಸಭಾ ಕ್ಷೇತ್ರದಲ್ಲಿ ಮತ ಚಲಾಯಿಸಿ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆಗೊಳಿಸಿ ಎಂದು ಕಕ್ಕೇರಿ ವಲಯದ ಅಂಗನವಾಡಿ ಮೇಲ್ವಿಚಾರಕಿ ಸರಸ್ವತಿ ಬಡಸ ಹೇಳಿದರು.
ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಮಹಿಳಾ ಸಂಘಗಳ ನೇತೃತ್ವದಲ್ಲಿ ಸ್ವಿಪ್ ಕಾರ್ಯಕ್ರಮ ಮತ್ತು ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹೊಸ ಮತದಾರರು ಚಾಚು ತಪ್ಪದೆ ತಮ್ಮ ಮೊದಲ ಮತವನ್ನು ಸೂಕ್ತ ಅಭ್ಯರ್ಥಿಗೆ ಚಲಾಯಿಸುವುದರ ಮೂಲಕ ಪ್ರಜೆಯನ್ನು ಆಯ್ಕೆಮಾಡಿ. ಜೋತೆಗೆ ತಮ್ಮ ಸುತ್ತಮುತ್ತಲಿರುವ ಮತದಾರರಿಗೂ ಕಡ್ಡಾಯವಾಗಿ ಮತದಾನ ಮಾಡುವಂತೆ ತಿಳಿಸಿರಿ. ಈ ಗ್ರಾಮದಲ್ಲಿ ಮಹಿಳೆಯರ ನೆತೃತ್ವದಲ್ಲಿ ಮತದಾನದ ಕುರಿತು ಜಾಗೃತಿ ಜಾಥಾ ಕಾರ್ಯಕ್ರಮ ಮಾಉವುದು ವಿಶೇಷವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಶೋಭಾ ಮಾಟೋಳ್ಳಿ, ಶಿವಲೀಲಾ ಹಿರೇಮಠ, ಮಹಿಳಾ ಸಂಘಗಳ ಪ್ರತಿನಿಧಿಗಳಾದ ಶೋಭಾ ಬೆಳಗಾವಿ, ಮಹೇಶ್ವರಿ ಮಾಟೋಳ್ಳಿ, ಅನ್ನಪೂರ್ಣ ಬಾಗೇವಾಡಿ, ದೀಪಾ ಪಾಂಡುರಂಗ ಮಿಟಗಾರ,ಪ್ರಭಾವತಿ ಕಮ್ಮಾರ, ಅನ್ನಪೂರ್ಣ ಪಾಟೀಲ, ರೇಖಾ ಪಾರಿಶ್ವಾಡ, ಜೈಬುನ ತೇರಗಾಂವ, ಸರೋಜಾ ಬಾಗೇವಾಡಿ, ಗಂಗಮ್ಮ ಹಲಸಗಿ ಹಾಗೂ ಗ್ರಾಮದ ಮಹಿಳೆಯರು ಹಾಜರಿದ್ದರು.