RNI NO. KARKAN/2006/27779|Sunday, February 1, 2026
You are here: Home » breaking news » ಮೂಡಲಗಿ:ದಲಿತ ಸಂಘಟನೆಗಳ ಮೇಲೆ ಅವಹೇಳನಕಾರಿ ಪೋಸ್ಟ್ ಮಾಡಿದ ವ್ಯಕ್ತಿಗಳು ಪೋಲಿಸರ ವಶಕ್ಕೆ

ಮೂಡಲಗಿ:ದಲಿತ ಸಂಘಟನೆಗಳ ಮೇಲೆ ಅವಹೇಳನಕಾರಿ ಪೋಸ್ಟ್ ಮಾಡಿದ ವ್ಯಕ್ತಿಗಳು ಪೋಲಿಸರ ವಶಕ್ಕೆ 

ದಲಿತ ಸಂಘಟನೆಗಳ ಮೇಲೆ ಅವಹೇಳನಕಾರಿ ಪೋಸ್ಟ್ ಮಾಡಿದ ವ್ಯಕ್ತಿಗಳು ಪೋಲಿಸರ ವಶಕ್ಕೆ

 

ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಮಾ 7 :-

 

ವಾಟ್ಸಪದಲ್ಲಿ ಡಾ:ಬಾಬಾಸಾಹೇಬ ಅಂಬೇಡ್ಕರ್ ಇವರ ಭಾವ ಚಿತ್ರಕ್ಕೆ ಮತ್ತು ಅವಹೇಳನಾಕಾರಿ ಶಬ್ದಗಳಿಂದ ಚಿತ್ರಿಸಿದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಢವಳೇಶ್ವರ ಗ್ರಾಮದ ದಸ್ತಗೀರ ರಮಜಾನ ಹೂಲಿಕಟ್ಟಿ ನನ್ನು ಕುಲಗೋಡ ಪೊಲೀಸ್ ಅಧಿಕಾರಿಗಳು ರಾತೊರಾತ್ರಿ ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಿಸುತ್ತಿದ್ದಾರೆ.

ಪೊಸ್ಟ ಮಾಡಿದ ವಿಷಯ ದಲಿತ ಮುಖಂಡರಿಗೆ ತಿಳಿಯುತ್ತಿದ್ದಂತೆ ಕಾಳ್ಗಿಚ್ಚಿನಂತೆ ಸುದ್ದಿ ಹಬ್ಬಿ ಕುಲಗೋಡ ಪೊಲಿಸ್ ಸ್ಟೇ಼ಷನ್ ಮುಂದೆ ಸುತ್ತಮುತ್ತಲಿನ ಸಾವಿರಾರು ದಲಿತ ಯುವಕರು ಕೂಡಿಕೊಂಡು ಟೈರಗೆ ಬೆಂಕಿ ಹಚ್ಚಿ ರಸ್ತೆ ತಡೆದು ಪ್ರತಿಭಟನೆ ಮಾಡಿದರು.

ದಲಿತ ಮುಖಂಡರು ಮಾತನಾಡಿ ಭಾರತಕ್ಕೆ ಸಂವಿದಾನ ನೀಡಿದ ಭಾರತ ರತ್ನ ಅಂಬೇಡ್ಕರ್ ಇವರಿಗೆ ಅವಹೇಳನಕಾರಿಯಾಗಿ ಚಿತ್ರ ಬಿಡಿಸಿದ ಮತ್ತು ಜಾತಿ ನಿಂದನೆ ಮಾಡಿದ ರಾಜು ಉಪ್ಪಾರ ಇವರಿಗೆ ತಕ್ಕ ಶಿಕ್ಷೆಯಾಗಬೇಕು ಅದಲ್ಲದೆ ಒಂದು ವೇಳೆ ಯಾರಾದರೂ ಇವರಿಗೆ ಕುಮ್ಮಕ್ಕು ನೀಡಿದರು ಸಹ ಅಂತಹ ವ್ಯಕ್ತಿಗಳು ಯಾರೆ ಆಗಿರಲಿ ಅವರಿಗೆ ತಕ್ಕ ಶಿಕ್ಷೆಯಾಗಬೇಕು ಇಲ್ಲದಿದ್ದರೆ ರಾಜ್ಯಾದಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದರು,

ಈ ಸಂದರ್ಭದಲ್ಲಿ ಯಾವುದೆ ಅಹಿತಕರ ಘಟನೆ ನಡೆಯದಂತೆ ಒರ್ವ ಡಿ,ವಾಯ್,ಎಸ್,ಪಿ, ಒರ್ವ, ಸಿ,ಪಿ,ಆಯ್,ಮೂರು ಪಿಎಸ್,ಐ ಗಳು ಜೊತೆ ನೂರು ಪೋಲಿಸ ಸಿಬ್ಬಂದಿಗಳು ಬಂದೊಬಸ್ತ ಮಾಡಿದ್ದರು ಅದಲ್ಲದೆ ಯಾವುದೆ ಅಹಿತಕರ ಘಟನೆ ನಡೆಯದಂತೆ ಸುಮಾರು ಹತ್ತು ಕಿಲೊ ಮಿಟರ ವರೆಗೂ ಹೋಗು ಬರುವ ವಾಹನಗಳನ್ನು ಪೋಲಿಸ ಇಲಾಖೆಯವರು ತಡೆದು ಸಂಚಾರ ಸ್ತಗಿತಗೊಳಿಸಿದ್ದರು

ಇದೆ ಸಂದರ್ಭದಲ್ಲಿ ಡಿವಾಯ್,ಎಸ್,ಪಿ,ಯವರು ಇಂತಹ ಕೃತ್ಯವನ್ನು ಯಾರೆ ಮಾಡಿರಲಿ ಅಂತವರ ಮೇಲೆ ಕಠಿಣ ಕ್ರಮ ತೆಗೆದುಕೊಂಡು ಕಾನೂನಿನ ಪ್ರಕಾರ ಕ್ರಮ ಜರುಗಿಸುತ್ತೇವೆಂದು ಪ್ರತಿಬಟನಾಕಾರರಿಗೆ ಹೇಳಿ ಮನವೊಲಿಸಿದರು.
ಹಲವಾರು ದಲಿತ ಮುಖಂಡರು ಪ್ರತಿಬಟನೆಯಲ್ಲಿ ಪಾಲ್ಗೊಂಡಿದ್ದರು.

Related posts: