ಗೋಕಾಕ:ಬೆಟಗೇರಿ ಗ್ರಾಮದ ಸದ್ಗುರು ಶ್ರೀ ಸಿದ್ಧಾರೂಢರ ಭಕ್ತರಿಂದ ಪಾದ ಯಾತ್ರೆ
ಬೆಟಗೇರಿ ಗ್ರಾಮದ ಸದ್ಗುರು ಶ್ರೀ ಸಿದ್ಧಾರೂಢರ ಭಕ್ತರಿಂದ ಪಾದ ಯಾತ್ರೆ
ನಮ್ಮ ಬೆಳಗಾವಿ ಸುದ್ದಿ, ಬೆಟಗೇರಿ ಪೆ 28:
ಹುಬ್ಬಳ್ಳಿ ಸದ್ಗುರು ಶ್ರೀ ಸಿದ್ಧಾರೂಢರ ಮಠದಲ್ಲಿ ನಡೆಯಲಿರುವ ಶಿವರಾತ್ರಿ ಜಾತ್ರೆಗೆ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಭಕ್ತರು ಪಾದ ಯಾತ್ರೆ ಪ್ರಯಾಣಕ್ಕೆÉ ಚಾಲನೆ ನೀಡುವ ಕಾರ್ಯಕ್ರಮ ಇದೇ ಶುಕ್ರವಾರ ಫೆ.1 ರಂದು ಮುಂಜಾನೆ 9 ಗಂಟೆಗೆ ಸ್ಥಳೀಯ ಶ್ರೀ ಬಸವೇಶ್ವರ ವೃತ್ತದಲ್ಲಿ ನಡೆಯಲಿದೆ.
ಶುಕ್ರವಾರ ಫೆ.1 ರಂದು ಸ್ಥಳೀಯ ಸದ್ಗುರು ಶ್ರೀ ಸಿದ್ಧಾರೂಢರ ಪಾದಯಾತ್ರೆ ವ್ಯವಸ್ಥಾಪನಾ ಸಮಿತಿ ಸಂಚಾಲಕ ಈಶ್ವರ ಬಳಿಗಾರ ನೇತೃತ್ವದಲ್ಲಿ ಯುವಕರು, ಮಹಿಳೆಯರು ಸೇರಿದಂತೆ ನೂರಾರು ಜನ ಭಕ್ತರು ಪಾದ ಯಾತ್ರೆಯ ಪ್ರಯಾಣ ಮಾಡಲಿದ್ದು, ಅಕ್ಕಿಸಾಗರ ಮಾರ್ಗವಾಗಿ ಹೊರಟು ಯರಗಟ್ಟಿ, ಸವದತ್ತಿ, ಅಮ್ಮಿನಬಾವಿ, ಚಂದನಮಟ್ಟಿ ಗ್ರಾಮಗಳಲ್ಲಿ ವಾಸ್ತವ್ಯ ಮಾಡಿ ಇದೇ ಮಂಗಳವಾರ ಫೆ.4 ರಂದು ಹುಬ್ಬಳ್ಳಿ ಸದ್ಗುರು ಶ್ರೀ ಸಿದ್ಧಾರೂಢರ ಮಠ ತಲುಪಲಿದೆ. ಪಾದ ಯಾತ್ರೆಯಲ್ಲಿ ಪಾಲ್ಗೊಳ್ಳಲಿರುವವರು ಮೊಬೈಲ್ ನಂ- 9980705123, 9901139091 ಸಂಪರ್ಕಿಸಬೇಕೆಂದು ಪ್ರಕಟನೆ ತಿಳಿಸಿದೆ.